ಟಿವಿ, ಧಾರಾವಾಹಿಗಳಿಂದ ಮನೆಯಲ್ಲಿ ಮೌಲ್ಯಯುವ ಶಿಕ್ಷಣ ದೊರೆಯುತ್ತಿಲ್ಲ: ಧರ್ಮಗುರು ಸ್ಟಾನಿ ತಾವ್ರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಂದು ಮನೆಗಳಲ್ಲಿ ಮಕ್ಕಳಿಗೆ ನೈತಿಕ ಹಾಗೂ ಮೌಲ್ಯಯುತವಾದ ಶಿಕ್ಷಣ ದೊರೆಯುತ್ತಿಲ್ಲ. ಧಾರಾವಾಹಿ, ಟಿವಿಗಳಿಂದ ಸಿಗುವಂತಹ ಸಂದೇಶಗಳು ಉತ್ತಮ ಮೌಲ್ಯಗಳಿಂದ ಕೂಡಿಲ್ಲ. ಬದಲಾದ ಇಂತಹ ಜೀವನ ಕ್ರಮದಿಮದಾಗಿ ಮೌಲ್ಯದಲ್ಲಿ ಕುಸಿತ ಕಾಣುತ್ತಿದೆ. ಮೌಲ್ಯಯುವ ಶಿಕ್ಷಣ ಪಠ್ಯಪುಸ್ತಕದಿಂದ ಹೊರತಾಗಿ ಸಮಾಜದಿಂದಲೂ ದೊರೆಯುತ್ತದೆ ಎಂದು ಹೋಲಿ ರೋಜರಿ ಚರ್ಚ್‌ನ ಧರ್ಮಗುರು ಸ್ಟಾನಿ ತಾವ್ರೋ ಹೇಳಿದರು.

ಅವರು ಇಲ್ಲಿನ ಭಂಡಾರ್‌ಕಾರ‍್ಸ್ ಪದವಿ ಹಾಗೂ ಪದವಿಪೂರ್ವ ಕಾಲೇಜು, ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಉಡುಪಿ ಮತ್ತು ಕುಂದೇಶ್ವರ ದೇವಸ್ಥಾನ ಕುಂದಾಪುರ ಇವರ ಸಹಯೋಗದಲ್ಲಿ ನಡೆದ ಜೀವನ ಮೌಲ್ಯ ಶಿಕ್ಷಣ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೆಜಿನ ವಿಶ್ವಸ್ಥ ಮಂಡಳಿಯ ಸದಸ್ಯ ಕೆ.ಶಾಂತರಾಮ್ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜಿ.ಎಂ.ಗೊಂಡ, ಸಂಯೋಜಕ ಅರುಣ್ ಕುಮಾರ್ ಉಪಸ್ಥಿತರಿದ್ದರು.

ಪ್ರೊ. ರಾಮಚಂದ್ರ ಸ್ವಾಗತಿಸಿದರು. ಉಪನ್ಯಾಸಕ ಪ್ರಶಾಂತ್ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಶುಭಕರ್ ಸದ್ಭಾವನಾ ದಿನಾಚರಣೆಯ ಪ್ರಮಾಣವಚನ ಬೋಧಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸುಬ್ರಯ ಸಂಪಾಜೆ ಮಡಿಕೇರಿ ಇವರಿಂದ ರಾಮಾಯಣದಲ್ಲಿನ ಮೌಲ್ಯಯುತ ಪ್ರಸಂಗಗಳು ವಿಷಯದಲ್ಲಿ ಉಪನ್ಯಾಸಜರಗಿತು. ಅಧ್ಯಾಪಕಿಕ ವಿತಾ ಅಡೂರು ಪುತ್ತೂರು ಅವರಿಂದ ಮಂಕುತಿಮ್ಮನ ಕಗ್ಗದಲ್ಲಿ ಜೀವನಮೌಲ್ಯ, ವಿಶ್ರಾಂತ ಪ್ರಾಧ್ಯಾಪಕ ಡಾ.ಇ.ಮಹಾಬಲ ಭಟ್ಟಅವರಿಂದ ಮಹಾಭಾರತದಲ್ಲಿ ಯಕ್ಷಪ್ರಶ್ನೆ ಪ್ರಸಂಗ ವಿಷಯದಲ್ಲಿ ವಿಶೇಷ ಉಪನ್ಯಾಸ ಜರಗಿತು.

ತದನಂತರ ನಡೆದ ಸಮಾರೋಪಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಬಿರದ ಕುರಿತುತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಜೀವನ ಮೌಲ್ಯ ಶಿಕ್ಷಣ ಶಿಬಿರದ ಸಂಯೋಜಕರಾದ ಡಾ. ಎಸ್. ಆರ್.ಅರುಣಕುಮಾರ್ ವಂದಿಸಿದರು. ಕಾಲೇಜಿನ ಎನ್. ಎಸ್. ಎಸ್‌ಅಧಿಕಾರಿ ರಾಮಚಂದ್ರ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

eight + 7 =