ಟಿಸಿಎಸ್ ಐಯಾನ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಧ್ಯೆ ಶೈಕ್ಷಣಿಕ ಒಡಂಬಡಿಕೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಭಾರತದಖ್ಯಾತ ಐಟಿ ಕಂಪನಿ ಟಿಸಿಎಸ್ ಐಯಾನ್‌ಜತೆಗೆ ಶೈಕ್ಷಣಿಕಒಪ್ಪಂದವನ್ನು ಮಾಡಿಕೊಂಡಿದೆ. ಟಿಸಿಎಸ್ ಐಯಾನ್, ಟಾಟಾಕನ್ಸಲ್ಟನ್ಸಿ ಸರ್ವೀಸಸ್‌ನ ಭಾಗವಾಗಿದೆ. ಸಲಹಾ ಮತ್ತು ವ್ಯವಹಾರ ಪರಿಹಾರದಲ್ಲಿ ಕುಶಲತೆಯನ್ನು ಹೊಂದಿರುವ ಈ ಸಂಸ್ಥೆಯೊಂದಿಗಿನ ಒಪ್ಪಂದವು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಹಾಗೂ ಆಳ್ವಾಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ನವಯುಗದಉದ್ಯಮ ಹೊಂದಾಣಿಕೆಯಕೌಶಲ್ಯ ಹಾಗೂ ಉದ್ಯಮ ಪ್ರವೃತ್ತಿಯ ಇಂಟರ್ನಶಿಫ್ ಅವಕಾಶವನ್ನು ಟಿಸಿಎಸ್ ಐಯಾನ್‌ನ ಐಎಚ್‌ಸಿ(ಇಂಡಸ್ಟ್ರಿ ಆನರ್ ಸರ್ಟಿಫಿಕೇಶನ್) ಮತ್ತುಆರ್‌ಐಒ (ರಿಮೋಟ್ ಇಂಟರ್ನ್‌ಶಿಪ್ ಅಪಾರ್ಚುನಿಟಿಸ್ ) ಮೂಲಕ ಒದಗಿಸಿ ಕೊಡುತ್ತದೆ. ಕರ್ನಾಟಕದ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳ ಪೈಕಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಟಿಸಿಎಸ್ ಐಯಾನ್‌ನ ಒಡಂಬಡಿಕೆಗೆ ಒಳಪಡುತ್ತಿರುವ ಮೊದಲ ಕಾಲೇಜು ಎಂಬ ಹೆಮ್ಮೆಗೆ ಪಾತ್ರವಾಗುತ್ತಿದೆ.

Click Here

Call us

Call us

ಈ ಕೋರ್ಸುಗಳು ಆಳ್ವಾಸ್ ವಿದ್ಯಾರ್ಥಿ ಸಮೂಹಕ್ಕೆ ಔದ್ಯೋಗಿಕ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯ ಹಾಗೂ ಹೆಚ್ಚಿನ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗಬಲ್ಲ ಕ್ಷೇತ್ರಗಳಾದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ರೊಬೋಟಿಕ್ಸ್, ಕ್ಲೌಡ್ ಕಂಪ್ಯುಟಿಂಗ್, ಡಾಟಾ ಮೈನಿಂಗ್, ಅನಾಲಿಟಿಕ್ಸ್, ಐಒಟಿ ಮತ್ತು ಸೈಬರ್ ಸೆಕ್ಯುರಿಟಿ ಮುಂತಾದ ಏರಿಯಾಗಳಲ್ಲಿ ಪರಿಣತಿ ಹೊಂದಲು ಸಹಾಯ ಮಾಡುತ್ತದೆ.

Click here

Click Here

Call us

Visit Now

ಟಿಸಿಎಸ್ ಐಯಾನ್‌ನ ಐಎಚ್‌ಸಿ (ಇಂಡಸ್ಟ್ರಿ ಆನರ್ ಸರ್ಟಿಫಿಕೇಶನ್)
ಈ ಕೋರ್ಸ್‌ಗಳನ್ನು ಶೈಕ್ಷಣಿಕ ಚೌಕಟ್ಟಿಗೆ ಸರಿಹೊಂದುವಂತೆ ರೂಪಿಸಲಾಗಿದ್ದು, ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರದ ಪರಿಣತರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಟಿಸಿಎಸ್ ಐಯಾನ್ ವರ್ಷದಲ್ಲಿ ೧೫ ವಾರಗಳ ಇಂಡಸ್ಟ್ರಿ ಆನರ್ ಪ್ರಮಾಣ ಪತ್ರ ನೀಡಲಿದೆ. ಹೀಗಾಗಿ ವಿದ್ಯಾರ್ಥಿಗಳು ಉತ್ತಮ ಕೌಶಲ್ಯಗಳನ್ನು ಕಲಿಯುವುದರ ಜೊತೆಗೆ ಅವುಗಳನ್ನು ಔದ್ಯೋಗಿಕಕ್ಷೇತ್ರದಲ್ಲಿಅದರಅನ್ವಯಿಕತೆಯಕುರಿತು ನಿಖರ ಮಾಹಿತಿ ಪಡೆಯಲಿದ್ದಾರೆ. ಆಳ್ವಾಸ್‌ನ ವಿದ್ಯಾರ್ಥಿಗಳು ತಮ್ಮ ಪದವಿ ಕಲಿಕೆಯ ಸಂದರ್ಭದಲ್ಲಿ ಈ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡುಉದ್ಯೋಗಕ್ಷೇತ್ರಕ್ಕೆ ಬೇಕಾದಎಲ್ಲಾ ಅರ್ಹತೆಗಳನ್ನು ಪಡೆದುಕೊಂಡುಉದ್ಯೋಗ ಮಾರುಕಟ್ಟೆಗೆ ಸಿದ್ಧರೆನಿಸಿಕೊಳ್ಳಬಹುದಾಗಿದೆ. ಈ ಶೈಕ್ಷಣಿಕ ಅಂಶವು ತರಗತಿ ಬೋಧನಾ ಶೈಲಿಯನ್ನು ಹೊಸ ರೂಪದಲ್ಲಿ ವ್ಯಾಖ್ಯಾನಿಸುವಂತಿದ್ದು, ಅಡ್ವಾನ್ಸ್‌ಡ್‌ಕ್ಲೌಡ್ ಪ್ಲಾಟ್‌ಫಾರ್ಮ್, ಬೆಸ್ಟ್-ಇನ್-ಕ್ಲಾಸ್ ಮಲ್ಟಿಮೋಡಲ್‌ಕಂಟೆಂಟ್ಸ್, ಕ್ಷೇತ್ರ ಪರಿಣತರ ಬೋಧನೆಗಳು, ಪ್ರಿಪರೇಟರಿಅನಾಲಿಟಿಕ್ಸ್ ಹಾಗೂ ಅಸೆಸ್‌ಮೆಂಟ್‌ಗಳನ್ನು ಒಳಗೊಂಡಿದೆ.

ಟಿಸಿಎಸ್ ಐಯಾನ್‌ನಆರ್‌ಐಒ (ರಿಮೋಟ್ ಇಂಟರ್ನ್‌ಶಿಪ್)
ಇದೊಂದು ವಿನೂತನಡಿಜಿಟಲ್ ಇಂಟರ್ನ್‌ಶಿಪ್ ಪ್ರೊಜೆಕ್ಟ್‌ಆಗಿದ್ದು, ಆಳ್ವಾಸ್ ವಿದ್ಯಾರ್ಥಿಗಳು ಕಾರ್ಪೋರೇಟ್ ಹಾಗೂ ಔದ್ಯೋಗಿಕಕ್ಷೇತ್ರದ ಸಾಧಕರ ಜೊತೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ. ಒಟ್ಟು 45 ರಿಂದ 60 ದಿನಗಳ ಇಂಟರ್ನ್‌ಶಿಪ್ ಅವಕಾಶವನ್ನು ವಿದ್ಯಾರ್ಥಿಗಳು ಪಡೆಯಲಿದ್ದಾರೆ. ಜೊತೆಗೆ ನಿಖರ ಕಲಿಕಾ ವಾತಾವರಣವನ್ನು ನಿರ್ಮಿಸುವುದಲ್ಲದೇ, ಇಂಟರ್ನ್‌ಶಿಪ್ ಯೋಜನೆಗಳನ್ನು ಕಾರ್ಯಗತಗೊಳಿಸಲು ಒಳ್ಳೆಯ ವೇದಿಕೆ ನೀಡುತ್ತದೆ. ಎಐಸಿಟಿಇ ಗೈಡ್‌ಲೈನ್ಸ್ ಪ್ರಕಾರ ಆಳ್ವಾಸ್ ವಿದ್ಯಾರ್ಥಿಳಿಗಾಗಿ ಈ ಇಂಟರ್ನ್‌ಶಿಪ್ ಯೋಜನೆಯನ್ನುರೂಪಿಸಲಾಗಿದ್ದು, ವರ್ಷಪೂರ್ತಿಇದರಉಪಯೋಗವನ್ನು ವಿದ್ಯಾರ್ಥಿಗಳುಪಡೆದುಕೊಳ್ಳಬಹುದಾಗಿದೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಮಾತ್ರವಲ್ಲದೇಅದರ ನಂತರದ ಶೈಕ್ಷಣಿಕ ದಿನಗಳಲ್ಲಿ ಕೂಡ ನಿಖರಡಿಜಿಟಲ್ ಫ್ರೇಮ್‌ವರ್ಕ್‌ಇಟ್ಟುಕೊಂಡು ಕಂಪನಿಗಳ ಜೊತೆ ಕೆಲಸ ಮಾಡಲುಇದು ಅವಕಾಶ ಕಲ್ಪಿಸುತ್ತದೆ.

“ಆಳ್ವಾಸ್ ಮತ್ತು ಟಿಸಿಎಸ್ ಐಯಾನ್ ಮಧ್ಯೆಒಪ್ಪಂದವಾಗಿರುವುದು ನಿಜಕ್ಕೂ ಸಂತಸದ ವಿಷಯ. ಈ ನೂತನಒಡಂಬಡಿಕೆಯು ವಿದ್ಯಾರ್ಥಿಗಳಿಗೆ ಪ್ರಾಯೋಗಿಕಜ್ಞಾನವನ್ನು ಪಡೆದುಕೊಳ್ಳಲು ಹಾಗೆಯೇ ಹೊಸ ಉದ್ಯೋಗಗಳಿಗೆ ತಮ್ಮನ್ನು ತೆರೆದುಕೊಳ್ಳಲು ಅವಕಾಶ ನೀಡುತ್ತಿದೆ. ಆಳ್ವಾಸ್ ಯಾವತ್ತಿಗೂಔದ್ಯೋಗಿಕಕ್ಷೇತ್ರದ ಪ್ರಾಯೋಗಿಕತೆಗಳು ಹಾಗೂ ಶೈಕ್ಷಣಿಕಕ್ಷೇತ್ರದ ಮಧ್ಯೆದಅಂತರವನ್ನು ಕಡಿಮೆಗೊಳಿಸಲು ಹೆಚ್ಚಿನ ಆಸ್ಥೆ ತೋರಿಸುತ್ತ ಬಂದಿದೆ.

Call us

ಟಿಸಿಎಸ್ ಐಯಾನ್:
ಟಿಸಿಎಸ್ ಐಯಾನ್, ಟಾಟಾಕನ್ಸಲ್ಟೆನ್ಸಿ ಸೇವೆಯತಂತ್ರಕುಶಲತೆಯ ವ್ಯವಹಾರಘಟಕವಾಗಿದ್ದು, ವಿವಿಧ ಸಂಸ್ಥೆಗಳ, ಸರಕಾರಿ ಇಲಾಖೆಗಳ, ವ್ಯವಹಾರೋದ್ಯಮದ ವಿಭಿನ್ನ ಕ್ಷೇತ್ರಗಳ ನೇಮಕಾತಿ ಪ್ರಕ್ರಿಯೆಗಳನ್ನು ಕೌಶಲ್ಯಗಳ ಮೂಲಕ ಬಲಪಡಿಸುವಉದ್ದೇಶವನ್ನು ಹೊಂದಿದೆ. ಇದರಜೊತೆಗೆ ವ್ಯಾವಹಾರಿಕ ಕಾರ್ಯಸೂಚಿಗಳನ್ನು ‘ಫಿಜಿಟಲ್ ಪ್ಲಾಟ್‌ಫಾರ್ಮ್’ ಮೂಲಕ ನಡೆಸುವಧ್ಯೇಯದೊಂದಿಗೆ ಕೆಲಸ ಮಾಡುತ್ತಿದೆ. ಈ ವೇದಿಕೆಯು ಭೌತಿಕ ಕ್ರಿಯೆಗಳನ್ನು ಡಿಜಿಟಲ್‌ತಂತ್ರಜ್ಞಾನವನ್ನು ಬಳಸಿ ಪರಿಣಾಮಕಾರಿಯಾಗಿ ನೇರವೇರಿಸುತ್ತಿದೆ. ಟಿಸಿಎಸ್ ಐಯಾನ್‌ಇದನ್ನು ಐಟಿ ವ್ಯವಹಾರಗಳಿಗೆ ಸುಲಭವಾದ, ಸುರಕ್ಷಿತವಾದ, ಸಂಯೋಜಿತವಾದ ಪರಿಹಾರಗಳನ್ನು ಬಿಲ್ಡ್‌ಆಸ್‌ಯುಗ್ರೋ ಹಾಗೂ ಈಸಿ ಟು ಪೇ ಮಾದರಿಗಳ ಮುಖಾಂತರಒದಗಿಸುತ್ತಿದೆ. ಅಲ್ಲದೆ, ತಾನು ಪಡೆದಜಾಗತಿಕಅನುಭವ, ಆಳವಾದ ದೇಶೀಯ ಮಾರುಕಟ್ಟೆ ಮಾನ್ಯತೆ ಮತ್ತು ಉದ್ಯಮದ ಪ್ರಮುಖತಂತ್ರಜ್ಞಾನ ಪರಿಣತಿಯ ಮೂಲಕ ಗ್ರಾಹಕರಿಗೆಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ.

ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ‍್ಯ ಡಾ ಪೀಟರ್ ಫೆರ್ನಾಂಡೀಸ್, ಆಳ್ವಾಸ್ ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ಸುಶಾಂತ್ ಅನಿಲ್ ಲೋಬೊ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

1 × 4 =