ಟಿ. ಸತೀಶ ಯು. ಪೈ ಅವರಿಗೆ ಪತ್ರಿಕಾ ದಿನದ ಗೌರವ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: 2019ರ ಪತ್ರಿಕಾ ದಿನದ ಗೌರವವನ್ನು ಹಿರಿಯ ಪತ್ರಿಕೋದ್ಯಮಿ, ಉದಯವಾಣಿ ಸಮೂಹದ ಟಿ. ಸತೀಶ.ಯು.ಪೈ ಅವರಿಗೆ ನೀಡಲಾಗುತ್ತಿದ್ದು ಬೆಂಗಳೂರಿನ ಪತ್ರಕರ್ತರ ವೇದಿಕೆ(ರಿ) ಯ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದನ್ವಯ ಗೌರವಕ್ಕೆ ಪಾತ್ರವಾಗುವ 12 ನೇ ಹಿರಿಯರು ಇವರಾಗಿದ್ದಾರೆ ಎಂದು ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ. ಸುಧೀರ್ಘ ಕಾಲ ಉದಯವಾಣಿ ಸಮೂಹ ಸಂಸ್ಥೆಗಳ ಮೂಲಕ ಪತ್ರಿಕೋದ್ಯಮವನ್ನು ಸಮರ್ಥವಾಗಿ ಮುನ್ನಡೆಸಿದ ಅವರಿಗೆ ಉದಯವಾಣಿ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಗೌರವವನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Call us

Call us

Visit Now

ಎಂ.ವಿ ಕಾಮತ್, ಅಂಬಾತನಯ ಮುದ್ರಾಡಿ, ಬಿ.ಸಿ ರಾವ್ ಶಿವಪುರ, ಕು.ಗೋ, ಬಿ.ಎ. ಸನದಿ, ರಾಘವ ನಂಬಿಯಾರ್, ಎ.ಎಸ್.ಎನ್ ಹೆಬ್ಬಾರ್, ವಿದ್ವಾನ್ ಬಿ.ಚಂದ್ರಯ್ಯ, ಉಡುಪಿ ವಾಸುದೇವ ಭಟ್, ದಾಮೋದರ ಐತಾಳ್ ಮತ್ತು ಕಾಸರಗೋಡಿನ ಮಲಾರ್ ಜಯರಾಮ ರೈ ಅವರಿಗೆ ಈ ಗೌರವವನ್ನು ಸಮರ್ಪಿಸಲಾಗಿತ್ತು.

Click here

Call us

Call us

ಮಣಿಪಾಲದ ಅನಂತ ನಗರದ ಅವರ ನಿವಾಸದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ಪತ್ರಿಕಾ ದಿನದ ಮುನ್ನಾ ದಿನ ಜೂನ್ 30 ರಂದು ಮಧ್ಯಾಹ್ನ 2:30 ಈ ಗೌರವವವನ್ನು ಪ್ರದಾನಿಸುವರು. ಹಿರಿಯ ಸಂಗೀತಜ್ಞ ಉಡುಪಿ ನಾದವೈಭವಂ ವಾಸುದೇವ ಭಟ್, ಹಿರಿಯ ಉದ್ಯಮಿ ವಿಶ್ವನಾಥ ಶೆಣೈ, ಹಿರಿಯ ಸಾಹಿತಿ ಕು.ಗೋ, ಹಿರಿಯ ಶಿಕ್ಷಣ ತಜ್ಞ ಎ. ನರಸಿಂಹ, ಸಂಘಟಕ ಭುವನಪ್ರಸಾದ್ ಹೆಗ್ಡೆ ಸಹಿತ ಗಣ್ಯರು ಉಪಸ್ಥಿತರಿರುವರು.

Leave a Reply

Your email address will not be published. Required fields are marked *

three − three =