ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಟೆಂಪೊ, ರಿಕ್ಷಾ, ಟ್ಯಾಕ್ಸಿ ಮಾಲಕರ ಮತ್ತು ಚಾಲಕರ ವಿವಿದೋದ್ದೇಶ ಸಹಕಾರಿ ಸಂಘ ಬೈಂದೂರು ಇದರ ವಾರ್ಷಿಕ ಮಹಾಸಭೆ ಶನಿವಾರ ಇಲ್ಲಿನ ರೋಟರಿ ಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ ಮಾತನಾಡಿ, ಸಂಘದ ಬೆಳವಣಿಗೆ ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಮತ್ತು ಸಕಾಲದಲ್ಲಿ ಸಾಲ ಮರುಪಾವತಿಸುವ ಬಗ್ಗೆ ಹೇಳಿದರು.
ಈ ಸಂದರ್ಭ ನಿರ್ದೇಶಕರಾದ ಮಹಾಬಲ ದೇವಾಡಿಗ, ಪ್ರವೀಣ್ ಕುಮಾರ್, ಮೂಡೂರ ಪೂಜಾರಿ ಯಡ್ತರೆ, ಮಧುಕರ್ ಶೇಟ್, ಮೂಡೂರ ಪೂಜಾರಿ ನೀರ್ಗದ್ದೆ, ಟಿ. ವಿಜಯ, ಮಲ್ಲಿಕಾ ಎ. ಪೂಜಾರಿ, ಗಂಗಾವತಿ ಉಪಸ್ಥಿತರಿದ್ದರು
ಕಾರ್ಯದರ್ಶಿ ಸುರೇಶ ಹುದಾರ್ ಲೆಕ್ಕ ಪತ್ರ ಮಂಡನೆ ಮಾಡಿದರು ನಿರ್ದೇಶಕ ಸಂದೀಪ್ ಸ್ವಾಗತಿಸಿದರು. ಉಪದ್ಯಕ್ಷರಾದ ವೆಂಕಟೇಶ್ ಪೂಜಾರಿ ವಂದಿಸಿದರು