ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಷನ್ ರಿ. ಮತ್ತು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ರಿ. ಇದರ ಸಹಯೋಗದೊಂದಿಗೆ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ರಿ. ಕುಂದಾಪುರ ಮುಕ್ತ ಅಂತರ್ಜಾಲ ಚೆಸ್ ಪಂದ್ಯಾಟವು www.tornelo.com ಎಂಬ ಪ್ಲಾಟ್ಫಾರ್ಮ್ ಮುಖೇನ ನಡೆಯಿತು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಚೆಸ್ ಅಸೋಸಿಯೇಷನ್ ನ ಅಧ್ಯಕ್ಷ ಡಾ. ರಾಜಗೋಪಾಲ್ ಶೆಟ್ಟಿ, ಟೋರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ, ಚೆಸ್ ಪಂದ್ಯಾಟದ ಮುಖ್ಯ ತೀರ್ಪುಗಾರರಾದ ವಸಂತ್ ಬಿ. ಎಚ್ ಹಾಗೂ ಇನ್ನಿತರ ಮುಖ್ಯ ಗಣ್ಯರು, ಸ್ಪರ್ಧಿಗಳು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ನಡೆದ ಚೆಸ್ ಪಂದ್ಯಾವಳಿ ಒಟ್ಟು ಒಂಭತ್ತು ಸುತ್ತು ಗಳಲ್ಲಿ ನಡೆಯಿತು. ಗ್ರಾಂಡ್ ಮಾಸ್ಟರ್ ಆರ್ .ಆರ್ ಲಕ್ಷ್ಮಣ್, ಅಂತಾರಾಷ್ಟ್ರೀಯ ಮಾಸ್ಟರ್ ಪಿ. ಡಿ. ಎಸ್ ಗಿರಿನಾಥ್, ತಮಿಳುನಾಡಿನ ಹರಿಕೃಷ್ಣನ್.ಎ ಹಾಗೂ ಹಲವಾರು ರಾಜ್ಯ, ರಾಷ್ಟ್ರ ಮಟ್ಟದ ಚೆಸ್ ಆಟಗಾರರು ಸೇರಿದಂತೆ ಒಟ್ಟು 196 ಸ್ಪರ್ಧಿಗಳು ಭಾಗವಹಿಸಿ ಸ್ಪರ್ಧೆಯ ಭರ್ಜರಿ ಯಶಸ್ಸಿಗೆ ಕಾರಣರಾದರು. ಅಂತರ್ಜಾಲ ಮುಖೇನ ಸ್ಪರ್ಧೆಯನ್ನು ಹಮ್ಮಿಕೊಂಡು ಯಶಸ್ವಿಯಾಗಿ ಮುನ್ನಡೆಸಿದ ಟೋರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಶ್ರಮಕ್ಕೆ ವ್ಯಾಪಕ ಪ್ರಶಂಸೆ ದೊರೆಯಿತು.