ಟ್ಯಾಂಕರ್‌ಗೆ ಮೀನು ಸಾಗಾಟ ಲಾರಿ ಡಿಕ್ಕಿ : ಟ್ಯಾಂಕರ್ ಸವಾರ ಗಂಭೀರ

Call us

Call us

ಕುಂದಾಪುರ: ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್ ಒಂದಕ್ಕೆ ಇನ್ಸುಲೇಟರ್ ಮೀನಿನ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಟ್ಯಾಂಕರ್ ಚಾಲಕ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ತ್ರಾಸಿ ಬೀಚಿನಲ್ಲಿ ನಡೆದಿದೆ. ಟ್ಯಾಂಕರ್ ಚಾಲಕ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಕಲ್ಲುಗುಡ್ಡೆ ನಿವಾಸಿ ದಿವಾಕರ(೩೦) ವರ್ಷ ಎಂಬಾತನೇ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸೇರಿದಾತ.

Call us

Call us

Call us

ಮಂಗಳೂರಿನಿಂದ ಡೀಸೆಲ್ ತುಂಬಿಸಿಕೊಂಡ ಟ್ಯಾಂಕರ್ ಗಂಗಾವತಿ ಕಡೆಗೆ ಪ್ರಯಾಣಿಸುತ್ತಿತ್ತು. ರಾತ್ರಿ ಸುಮಾರಿಗೆ ತ್ರಾಸಿ ಬೀಚ್ ಸಮೀಪ ಸಂಚರಿಸುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಶುಕ್ರವಾರದಿಂದ ರಸ್ತೆಯ ಮೇಲೆಯೇ ಕೆಟ್ಟು ನಿಂತ ಲಾರಿಯೊಂದನ್ನು ಕಂಡ ಟ್ಯಾಂಕರ್ ಚಾಲಕ ದಿವಾಕರ ಹೆದ್ದಾರಿಯಲ್ಲಿ ಬಲಕ್ಕೆ ತೆಗೆದುಕೊಂಡಿದ್ದಾರೆ. ಇದೇ ಸಂದರ್ಭ ಎದುರಿನಿಂದ ಬರುತ್ತಿದ್ದ ಇನ್ಸುಲೇಟರ್ ಮೀನಿನ ಲಾರಿಯ ನಡುವಿನ ಭಾಗ ಡಿಕ್ಕಿಯಾಗಿದೆ.

Call us

Call us

ಅಪಘಾತದಲ್ಲಿ ಟ್ಯಾಂಕರ್ ಚಾಲಕ ಲಾರಿಯೆಡೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಗಂಗೊಳ್ಳಿಯ ಹೆಲ್ಪ್ ಲೈನ್ ಕಾರ್ಯಕರ್ತರು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಗಂಗೊಳ್ಳಿ ಪೊಲೀಸರು ಸುಮಾರು ಒಂದೂವರೆ ತಾಸುಗಳ ಕಾಲ ಹೆಣಗಾಡಿದರು. ನಂತರ ಕ್ರೇನ್ ಮೂಲಕ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು. ಅಪಘಾತದಲ್ಲಿ ಚಾಲಕ ದಿವಾಕರ್ ಅವರ ಕಾಲು ಹಾಗೂ ತಲೆಗೆ ಗಂಭೀರ ಗಾಯಗಳಾಗಿದ್ದು, ಕುಂದಾಪುರದ ಖಾಸಗೀ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಣಿಪಾಲಕ್ಕೆ ಸಾಗಿಸಲಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

accident in maravante beech photos (4)

Leave a Reply

Your email address will not be published. Required fields are marked *

1 × three =