ಡಾಟಾ ಮೈನಿಂಗ್ ಕ್ಷೇತ್ರದಲ್ಲಿ ವಿಪುಲ ಉದ್ಯೋಗಾವಕಾಶ: ವಿಜ್ನಾನಿ ಚೈತನ್ಯ ಹೊಳ್ಳ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮುಂದಿನ ದಿನಗಳಲ್ಲಿ ಡಾಟಾ ಮೈನಿಂಗ್ ಕ್ಷೇತ್ರದಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ ಎಂದು ಬೆಂಗಳೂರಿನ ಹೆಚ್ ಪಿಯಲ್ಲಿ ಜ್ಯೂನಿಯರ್ ಡಾಟಾ ವಿಜ್ನಾನಿ ಚೈತನ್ಯ ಹೊಳ್ಳ ಅವರು ಹೇಳಿದರು.

ಅವರು ಇತ್ತೀಚೆಗೆ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಖ್ಯಾಶಾಸ್ತ್ರ ಭೌತಶಾಸ್ತ್ರ ಹಾಗೂ ಕೆರಿಯರ್ ಗೈಡೆನ್ಸ್ ಸೆಲ್ ಇದರ ಸಹಯೋಗದಲ್ಲಿ ನಡೆದ ಉಪಾನ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಪ್ರಸ್ತುತದ ದಿನಗಳಲ್ಲಿ ಡಾಟಾ ಮೈನಿಂಗ್ ಕ್ಷೇತ್ರವು ಸಾಕಷ್ಟು ಬೆಳೆಯುತ್ತಿದೆ. ಮುಂದಿನ ದಿನಗಳಲ್ಲೂ ಸಹ ಇದೇ ಕ್ಷೇತ್ರದಲ್ಲಿ ಉದ್ಯೋಗವೆಂಬುದನ್ನು ಅರಸಿಕೊಳ್ಳಬಹುದು. ಕೃತಕ ಬುದ್ಧಿವಂತಿಕೆ ಮತ್ತು ಯಂತ್ರಭಾಷೆಯನ್ನು ಕುರಿತು ಇಲ್ಲಿ ಹೆಚ್ಚಿನ ಮಹತ್ವವಿದೆ. ಅದಕ್ಕೆ ಪೂರಕವಾಗಿ ಆರ್ ಮತ್ತ್ ಪೈಥೋನ್ ಸಾಪ್ಟ್ ವೇರ್ ಗಳ ಕಲಿಯುವಿಕ್ವ್ ಅಗತ್ಯವಾಗಿ ಬೇಕಾಗಿರುತ್ತದೆ. ಇದಕ್ಕೆ ಯಾವುದೇ ವಾಣಿಜ್ಯ್ ಮತ್ತು ವಿಜ್ನಾನ ಪದವಿಗಳನ್ನು ಅಭ್ಯಸಿಸಿದರೆ ಅನೂಕೂಲಕರವಾಗಿರುತ್ತದೆ. ಅದರಲ್ಲೂ ಸಂಖ್ಯಾಶಾಸ್ತ್ರ ಮತ್ತು ಭೌತಶಾಸ್ತ್ರ ವಿಷಯಗಳ ಅಧ್ಯಯನ ಈ ಕ್ಷೇತ್ರದಲ್ಲಿ ಜ್ನಾನ ಬೆಳೆಸಿಕೊಳ್ಳಲು ಅನುಕೂಲ ಮಾಡಿಕೊಡುತ್ತದೆ. ವಿದ್ಯಾರ್ಥಿಗಳು ವಿಶೇಷ ಕೌಶಲವನ್ನು ಬೆಳೆಸಿಕೊಂಡಲ್ಲಿ ಉದ್ಯೋಗದ ಅವಕಾಶವನ್ನು ನೀಡುವುದಾಗಿ ಭರವಸೆ ನೀಡಿದ್ದಲ್ಲದೇ, ಸುಮಾರು ೮ ಸ್ತರಗಳಲ್ಲಿ ಉದ್ಯೋಗವಕಾಶವಿದೆ ಎಂಬುದನ್ನು ಸವಿಸ್ತಾರವಾಗಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ನಾರಾಯಣ ತಂತ್ರಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಡಿ.ರಮಾನಂದ ಹಾಗೂ ಕೆರಿಯರ್ ಗೈಡೆನ್ಸ್ ಸೆಲ್ ಇಅದರ ಸಂಯೋಜಕರಾದ ಪ್ರೊ.ವೈ .ಎಸ್. ರಘುವೀರ್ ಮತ್ತು ಭೌತಶಾಸ್ತ್ರ ವಿಭಾಗದ ಉಪಾನ್ಯಾಸಕ ಶಶಿಕಾಂತ ಹತ್ವಾರ್ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

thirteen + 14 =