ಡಾನ್‌ಬೋಸ್ಕೊ ಶಾಲೆ ಈಗ ಸೀನಿಯರ್ ಸೆಕೆಂಡರಿ ಸ್ಕೂಲ್

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತ್ರಾಸಿ ಬಳಿಯ ಹೊಸಾಡು ಗ್ರಾಮೀಣ ಪ್ರದೇಶದಲ್ಲಿ ಹತ್ತು ವರ್ಷಗಳಿಂದ ವಿದ್ಯಾದಾನ ಮಾಡುತ್ತಿರುವ ಡಾನ್ ಬೋಸ್ಕೊ ಸ್ಕೂಲ್‌ಗೆ ಸೀನಿಯರ್ ಸೆಕೆಂಡರಿ ಸ್ಕೂಲ್ ಆಗಿ ಮೇಲ್ದರ್ಜೆಗೇರಲು ಅನುಮೋದನೆ ದೊರೆತಿದೆ. ಇದರಿಂದ ಸುತ್ತಲಿನ ಹತ್ತಾರು ಹಳ್ಳಿ ಮತ್ತು ಪಟ್ಟಣ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಸಿಬಿಎಸ್‌ಸಿ ಪಠ್ಯಕ್ರಮದಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ಪಡೆಯುವ ಅವಕಾಶ ಲಭಿಸಿದೆ ಎಂದು ಶಾಲೆಯ ಮುಖ್ಯಸ್ಥ ಫಾ. ಮ್ಯಾಕ್ಸಿಮ್ ಡಿಸೋಜ ತಿಳಿಸಿದ್ದಾರೆ.

Click Here

Call us

Call us

ಉತ್ತಮ ಶೈಕ್ಷಣಿಕ ಸಾಧನೆಯಿಂದ ಜನಮೆಚ್ಚುಗೆ ಗಳಿಸಿರುವ ಈ ಸಂಸ್ಥೆ ಇದೀಗ ದಶಮಾನೋತ್ಸವ ಆಚರಣೆಯ ಹೊಸ್ತಿಲಲ್ಲಿ ನಿಂತಿದೆ. ಈ ಸಂಸ್ಥೆಯಿಂದ ಸಿಬಿಎಸ್‌ಸಿಯ ಹತ್ತನೆ ತರಗತಿ ಪರೀಕ್ಷೆ ಎದುರಿಸಿದ ನಾಲ್ಕು ತಂಡಗಳು ಶೇ100 ಫಲಿತಾಂಶ ದಾಖಲಿಸಿವೆ.

Click here

Click Here

Call us

Visit Now

ಸಂಸ್ಥೆ ಇದೀಗ ಸೀನಿಯರ್ ಸೆಕೆಂಡರಿ ಸ್ಕೂಲ್ ದರ್ಜೆಗೇರಿರುವ ಕಾರಣ ಬೈಂದೂರು ಮತ್ತು ಕುಂದಾಪುರ ತಾಲ್ಲೂಕುಗಳ ಮಕ್ಕಳಿಗೆ ಹೊಸ ಅವಕಾಶದ ಬಾಗಿಲು ತೆರೆದಂತಾಗಿದೆ. ಇಲ್ಲಿ ಸಿಬಿಎಸ್‌ಸಿ 12ನೇ ತರಗತಿ ತನಕ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಶಿಕ್ಷಣ ಪಡೆಯುವ ಅವಕಾಶ ದೊರೆಯಲಿದೆ. ಇಲ್ಲಿಂದ 38 ಕಿಲೋಮೀಟರು ದೂರದ ಬ್ರಹ್ಮಾವರದ ಲಿಟ್ಲ್ ರಾಕ್ ಶಾಲೆಯನ್ನು ಬಿಟ್ಟರೆ, ಈ ಪರಿಸರದಲ್ಲಿ ಈ ಶಿಕ್ಷಣ ನೀಡುವ ಸಂಸ್ಥೆ ಇದೊಂದೇ ಆಗಿದೆ.

ಶಾಲೆ ಈಗ 2020ರ ಹೊಸ ಶಿಕ್ಷಣ ನೀತಿಯ ಪಠ್ಯ ಮತ್ತು ಪಾಠಕ್ರಮ ಅನುಸರಿಸಲು ಎಲ್ಲ ರೀತಿಯಿಂದ ಸಜ್ಜಾಗಿದೆ. ಈ ಪಠ್ಯಕ್ರಮಗಳು ಮಕ್ಕಳಲ್ಲಿ ಪರಿಕಲ್ಪನಾತ್ಮಕ ಜ್ಞಾನ ಸಂಪಾದನೆಗೆ, ರಚನಾತ್ಮಕ ಹಾಗೂ ವಿಮರ್ಶಾತ್ಮಕ ಚಿಂತನಾಕ್ರಮಕ್ಕೆ ಒತ್ತುನೀಡುವುದರಿಂದ ಮುಂದಿನ ಹಂತದ ಕೇಂದ್ರೀಕೃತ ಜೆಇಇ ಮತ್ತು ನೀಟ್ ಇತ್ಯಾದಿ ಪರೀಕ್ಷೆಗಳಿಗೆ ಸಹಾಯಕ ಆಗುವುದರಿಂದ ಇದಕ್ಕೆ ಬೇಡಿಕೆ ಹೆಚ್ಚಾಗಲಿದೆ.

ಡಾನ್ ಬೊಸ್ಕೊ ಶಿಕ್ಷಣ ಸಂಸ್ಥೆಗಳು 133 ದೇಶಗಳಲ್ಲಿ ಹಬ್ಬಿವೆ. ಭಾರತದಲ್ಲಿ ಅದರ 280 ಶಾಲೆಗಳು, 45ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು 124 ತಾಂತ್ರಿಕ ಶಿಕ್ಷಣ ಕೇಂದ್ರಗಳು ಇವೆ. ಅವು ಗುಣಮಟ್ಟದ ಶಿಕ್ಷಣದ ಜತೆಗೆ ಅವಕಾಶ ವಂಚಿತ ಯುವಜನಾಂಗದ ಸಬಲೀಕರಣವನ್ನು ಗುರಿಯಾಗಿರಿಸಿಕೊಂಡಿವೆ ಎಂದು ಫಾ. ಮ್ಯಾಕ್ಸಿಂ ಡಿಸೋಜ ತಿಳಿಸಿದ್ದಾರೆ.

Call us

Leave a Reply

Your email address will not be published. Required fields are marked *

two × 3 =