ಡಾನ್ ಬಾಸ್ಕೊ ಶಾಲೆಯಲ್ಲಿ ಆತ್ಮಹತ್ಯೆ ತಡೆ ಅರಿವು ಸಪ್ತಾಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಹೊಸಾಡಿನ ಡಾನ್ ಬಾಸ್ಕೊ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಶಾಲೆಯ ಮನೋವಿಜ್ಞಾನ ವಿಭಾಗದ ‘ಕ್ಲಬ್ ಆಫ್ ಲೈಫ್’ ಆಶ್ರಯದಲ್ಲಿ ಆತ್ಮಹತ್ಯೆ ತಡೆ ಅರಿವು ಸಪ್ತಾಹ ಆಚರಿಸಲಾಯಿತು.

ಆರೊಗ್ಯ ಕ್ಷಮತೆ ಶಿಕ್ಷಕಿ ರಕ್ಷಿತಾ ಮಾತನಾಡಿ, ಸೆ.10ರಂದು ಆತ್ಮಹತ್ಯೆ ಕುರಿತು ಅರಿವು ಮೂಡಿಸಲು ವಿಶ್ವ ಆತ್ಮಹತ್ಯೆ ತಡೆ ದಿನ ಆಚರಿಸಲಾಗುತ್ತದೆ. ಸೆಂಪ್ಟಂಬರ್‌ನ್ನು ಆತ್ಮಹತ್ಯೆ ತಡೆ ಅರಿವು ಮಾಸ ಎಂದು ಪರಿಗಣಿಸಲಾಗುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗದ 2015ರ ವರದಿಯಲ್ಲಿ ಭಾರತದಲ್ಲಿ ಪ್ರತಿ ಒಂದು ಗಂಟೆಗೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ಹೇಳಿದೆ. ಆದುದರಿಂದ ಆತ್ಮಹತ್ಯೆ ತಡೆ ಅರಿವು ಮೂಡಿಸುವ ಕೆಲಸ ಶಾಲೆಗಳಲ್ಲಿ ಆಗಬೇಕಾಗಿದೆ ಎಂದರು.

ಅವರ ಮಾರ್ಗದರ್ಶನದಲ್ಲಿ 11ನೆ ತರಗತಿಯ ಮನೋವಿಜ್ಞಾನ ವಿದ್ಯಾರ್ಥಿಗಳು 6ರಿಂದ 11ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಿದರು. ಕಾರ್ಯಕ್ರಮ ಸಂಯೋಜನಾ ತಂಡ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಧನಾತ್ಮಕ ಮನೋಧರ್ಮ ಉತ್ತೇಜಿಸುವಂತಹ ಚಿತ್ರ ರಚನಾ ಸ್ಪರ್ಧೆ, 10 ಮತ್ತು 11ನೇ ತರಗತಿಗಳಿಗೆ ಆತ್ಮಹತ್ಯೆ ತಡೆ ವಿಷಯದ ಭಿತ್ತಿಚಿತ್ರ ರಚನಾ ಸ್ಪರ್ಧೆ ನಡೆಸಿತು.

ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಶಾಲೆಯ ಸೂಚನಾ ಫಲಕದಲ್ಲಿ ಆತ್ಮಹತ್ಯೆ ಅಂಕಿಸಂಖ್ಯೆ, ಅಪಾಯಕಾರಕ ಅಂಶಗಳು, ತಡೆ ವಿಧಾನಗಳು ಹಾಗೂ ನೆರವಿನ ಮೂಲಗಳ ಕುರಿತು ಚಿತ್ರ ಮತ್ತು ನಕಾಶೆಗಳನ್ನು ಪ್ರಕಟಿಲು ಅವಕಾಶ ಕಲ್ಪಿಸಲಾಯಿತು.

9ನೇ ತರಗತಿ ವಿದ್ಯಾರ್ಥಿಗಳು ಮಾನಸಿಕ ಆರೋಗ್ಯ ವರ್ಧನೆ ಕುರಿತು ಕಿರು ಪ್ರಹಸನ ಪ್ರದರ್ಶಿಸಿದರು. ಎಲ್ಲ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಆಡಳಿತದ ಸದಸ್ಯರು ಆತ್ಮಹತ್ಯೆ ತಡೆ ರಾಯಭಾರಿಗಳೆಂದು ಪ್ರತಿಜ್ಞೆ ಸ್ವೀಕರಿಸಿದರು. ಸಪ್ತಾಹ ಆಚರಣೆಯು ಪ್ರಾಂಶುಪಾಲ ಮ್ಯಾಕ್ಸಿಮ್ ಡಿಸೋಜ ಅವರ ಉತ್ತೇಜಕ ಸಮಾರೋಪ ಭಾಷಣ ಮಾಡಿದರು.

Leave a Reply

Your email address will not be published. Required fields are marked *

nineteen + 18 =