ಡಾ. ಬಿ. ಆರ್. ಅಂಬೇಡ್ಕರ್ ಅವರ 62ನೇ ಮಹಾ ಪರಿನಿರ್ವಾಣ ದಿನ ಆಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು : ದಲಿತ ಸಂಘರ್ಷ ಸಮಿತಿ ಬೈಂದೂರು ವತಿಯಿಂದ ಡಾ ಬಿ.ಆರ್.ಅಂಬೇಡ್ಕರ್ ಅವರ ೬೨ನೇ ಮಹಾ ಪರಿನಿರ್ಮಾಣ ದಿನದವನ್ನು ಬೈಂದೂರಿನ ಸರಕಾರಿ ಪರಿಶಿಷ್ಟ ವರ್ಗದ ಆಶ್ರಯ ಶಾಲೆಯಲ್ಲಿ ಆಚರಿಸಲಾಯಿತು.

ಡಾ. ಬಿ. ಆರ್. ಅಂಬೇಡ್ಕರ್ ಅವರ ೬೨ನೇ ಮಹಾ ಪರಿನಿರ್ಮಾಣ ದಿನವನ್ನು ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್ ಉದ್ಘಾಟಿಸಿ, ಸಾಕಷ್ಟು ಅವಮಾನ ಮತ್ತು ತಾರತಮ್ಯ ಅನುಭವಿಸಿದರೂ ದೇಶದ ಬಗ್ಗೆ ತಿರಸ್ಕಾರ ಭಾವನೆ ಹೊಂದದೇ ಸಮಾಜ ತಿದ್ದುವ, ಸದೃಢ ಭಾರತ ನಿರ್ಮಾಣದತ್ತ ತಮ್ಮ ಚಿತ್ತ ಹರಿಸಿದ ಅಂಬೇಡ್ಕರ್ ಒಬ್ಬ ಮಹಾನ್ ಮಾನವತಾದಿ. ಅಸ್ಪಶ್ಯರು ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಇಡೀ ಜೀವನನ್ನೇ ಮುಡುಪಾಗಿರಿಸಿದ್ದ ಅಂಬೇಡ್ಕರ್ ಅವರು ನಮ್ಮನ್ನಗಲಿ ೬೨ ವರ್ಷಗಳು ಸಂದಿದ್ದರೂ ಅವರ ವಿಚಾರಧಾರೆಗಳು ಜನಮಾನಸದಲ್ಲಿ ಇಂದಿಗೂ ಆಳವಾಗಿ ಬೇರೂರಿವೆ. ಅಸಮತೋಲನ ಮುಕ್ತ ಭಾರತ ಹಾಗೂ ಅರ್ಥಿಕ ಪ್ರಗತಿಯನ್ನು ಕಂಡಿದ್ದ ಅವರ ಕನಸಗಳನ್ನು ನನಸಾಗಿಸಲು ನಾವಿಂದು ಅವರ ಆಲೋಚನಾ ಸರಣಿಯ ಮಾರ್ಗದಲ್ಲಿ ಮುನ್ನಡೆಯಬೇಕಿದೆ ಎಂದರು.

ಬೈಂದೂರು ಸರಕಾರಿ ಪರಿಶಿಷ್ಟ ವರ್ಗದ ಆಶ್ರಮ ಶಾಲೆಯ ಮುಖ್ಯೋಪಾಧ್ಯಾಯ ರಾಜೇಶ್ ಅಧ್ಯಕ್ಷತೆ ವಹಿಸಿದ್ದರು.

ಮಹಾ ಪರಿನಿರ್ಮಾಣ ದಿನದ ಅಂಗವಾಗಿ ಬೈಂದೂರು ದಲಿತ ಸಂಘರ್ಷ ಸಮಿತಿಯಿಂದ ಆಶ್ರಮ ಶಾಲೆಯ ಮಕ್ಕಳಿಗೆ ಹಣ್ಣುಹಂಪಲು ವಿತರಿಸಿದ್ದರು. ದಲಿತ ಜಿಲ್ಲಾ ಸಂಘಟನ ಸಂಚಾಲಕ ಸುರೇಶ್ ಕುಮಾರ್, ಬೈಂದೂರು ತಾಲೂಕು ದಲಿತ ಸಂಘರ್ಷ ಸಂಘದ ಸಂಚಾಲಕ ಮಂಜುನಾಥ ಹಳಗೇರಿ, ತಾಲೂಕು ದಲಿತ ಮಹಿಳೆಯರ ಸಂಘದ ಸಂಚಾಲಕಿ ಗೀತಾ ಸುರೇಶ್, ಬೈಂದೂರು ಕಿಡ್ಸ್ ಸಂಘದ ಸಿ.ಓ ಶೈಲಾ ಭಾಸ್ಕರ್, ಬೈಂದೂರು ತಾಲೂಕು ದಲಿತ ಸಂಘರ್ಷ ಸಂಘದ ಕಾರ್ಯದರ್ಶಿ ಭಾಸ್ಕರ ಕೆರ್ಗಾಲ್, ಸಂಘಟನಾ ಸಂಚಾಲಕರು ಗೋವಿಂದ ಹಳಗೇರಿ, ನಾಗರಾಜ್ ಉಪ್ಪುಂದ, ಲಕ್ಷ್ಮಣ ಯೋಜನಾನಗರ ಉಪಸ್ಥಿತರಿದ್ದರು.

ಬೈಂದೂರು ದಲಿತ ಸಂಘರ್ಷ ಸಮಿತಿ ಮಹಿಳೆಯರ ಘಟಕ ಕಾರ್ಯದರ್ಶಿ ಚೈತ್ರಾ ಯಡ್ತರೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

16 − six =