ಡಾ. ಹೆಚ್. ಶಾಂತಾರಾಮ್ ವಾಚನ, ವ್ಯಾಖ್ಯಾನ ಪ್ರಶಸ್ತಿ ಪ್ರದಾನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ‍್ಸ್ ಕಾಲೇಜಿನಲ್ಲಿ ಡಾ. ಹೆಚ್. ಶಾಂತಾರಾಮ್ ವಾಚನ ಪ್ರಶಸ್ತಿಯನ್ನು ಹೆಚ್. ಯಜ್ಞೇಶ ಆಚಾರ್ ಸುರತ್ಕಲ್ ಮತ್ತು ವ್ಯಾಖ್ಯಾನ ಪ್ರಶಸ್ತಿಯನ್ನು ಡಾ.ಜ್ಯೋತಿ ಶಂಕರ್, ಮೈಸೂರು ಇವರಿಗೆ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಇದರ ಆಡಳಿತಾಧಿಕಾರಿ ಹೆಚ್. ಶಾಂತಾರಾಮ್ ಅವರು ಪ್ರದಾನ ಮಾಡಿದರು.

Call us

Click here

Click Here

Call us

Call us

Visit Now

Call us

ಬಳಿಕ ಅವರು ಮಾತನಾಡಿ ಗಮಕ ಕಲೆ ಮಾನವತ್ವದಿಂದ ದೈವತ್ವದೆಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಹಾಗೆ ಶಿಕ್ಷಣವೂ ಸಹ ಒಳ್ಳೆಯ ದಾರಿಯತ್ತ ಕರೆದುಕೊಂಡು ಹೋಗುತ್ತದೆ. ಶಿಕ್ಷಣ ಕೇವಲ ವೃತ್ತಿಯಲ್ಲ ಅಥವಾ ಕಲಿಯುವಿಕೆಯಲ್ಲ್. ವ್ಯಕ್ತಿತ್ವ ವಿಕಸನನದ ಸೆಲೆಯಾಗಿದೆ. ಶಿಕ್ಷಣ ನಿಜವಾದ ಜೀವನ ಶಿಕ್ಷಣವನ್ನು ಬೆಳೆಸಬೇಕು. ಇದನ್ನು ಅರಿಯಬೇಕೆಂದರೆ ಅದಕ್ಕೆ ಸಾಧನವಾದ ಇಂತಹ ಸಾಂಸ್ಕೃತಿಕ ಕಲೆಗಳ ಅರಿವು ಇರಬೇಕು. ಇದನ್ನು ವಿದ್ಯಾರ್ಥಿಗಳು ತಿಳಿಯಬೇಕು. ಅಲ್ಲದೇ ಅರಿಯುವ ಪ್ರಯತ್ನ ಮಾಡಬೇಕು. ಹಾಗೆಯೇ ವಿದ್ಯಾರ್ಥಿಗಳು ಗಮಕ ಕಲೆಯನ್ನು ಪರಿಶ್ರಮ ಪಟ್ಟು ಕಲಿಯಲಿ. ಮತ್ತು ಗಮಕವನ್ನು ಕಲೆಯನ್ನು ಕಲಿಸುವವರು ಮುಂದೆ ಬರಬೇಕು ಎಂದು ಹೇಳಿದರು.

ಪ್ರಶಸ್ತಿ ಪುರಸ್ಕೃತ ಹೆಚ್. ಯಜ್ಞೇಶ ಆಚಾರ್ ಸುರತ್ಕಲ್ ಇವರು ಗಮಕ ಕಲೆಗೆ ಚಾಲನೆ ಸಿಗುತ್ತಿದೆ ಎಂದು ಹೇಳಿದರು. ಡಾ.ಜ್ಯೋತಿ ಶಂಕರ್, ಮೈಸೂರು ಮಾತನಾಡಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಾಂಸ್ಕೃತಿಕವಾಗಿ ಸಮೃದ್ಧ ಜಿಲ್ಲೆಯಾಗಿದೆ. ಪ್ರಶಸ್ತಿ ನೀಡಿದವರುಗೆ ಆಭಾರಿಯಾಗಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ .ಗೊಂಡ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಡಾ. ಹೆಚ್.ಶಾಂತಾರಾಮ್ ಗಮಕ ವಾಚನ -ವ್ಯಾಖ್ಯಾನ ಪ್ರಶಸ್ತಿ ಪ್ರದಾನ ಸಮಿತಿಯ ಸಂಚಾಲಕರಾದ ಪ್ರೊ.ಗಣಪತಿ ಭಟ್ ವಂದಿಸಿದರು. ಉಪನ್ಯಾಸಕಿ ರೋಹಿಣಿ ಹೆಚ್.ಬಿ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿ ಕೀರ್ತಿ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು.

Call us

ನಂತರ ಪ್ರಶಸ್ತಿ ಪುರಸ್ಕೃತರಿಂದ ವಾಚನ -ವ್ಯಾಖ್ಯಾನ ನಡೆಯಿತು. ಈ ಮೊದಲು ಶಿವಮೊಗ್ಗದ ಡಿ.ವಿ.ಎಸ್ ಕಾಲೇಜಿನ ಅಚ್ಯುತ ಅವಧಾನಿ ಅವರು ಗಮಕ ಪ್ರಾತ್ಯಕ್ಷಿಕೆ ನೀಡಿದರು.

Leave a Reply

Your email address will not be published. Required fields are marked *

eleven − four =