ಡಿ.12: ಕಾರ್ಟೂನು ಹಬ್ಬದಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರರೊಂದಿಗೆ ಮುಖಾಮುಖಿ

Call us

ಕುಂದಾಪುರ: ಡಿ.10 ರಿಂದ 13ವರೆಗೆ ಕುಂದಾಪುರದ ಕಲಾಮಂದಿರದಲ್ಲಿ ಜರುಗುವ ಕಾರ್ಟೂನ್ ಹಬ್ಬದಲ್ಲಿ ನಾಡಿನ ಖ್ಯಾತ ವೃತ್ತಿಪರ ವ್ಯಂಗ್ಯಚಿತ್ರಕಾರರೊಂಗಿದೆ ಸಂವಾದಿಸುವ ಅವಕಾಶ ಕಲ್ಪಿಸಲಾಗಿದೆ. ರಂಗಕರ್ಮಿ ಸುರೇಶ್ ಆನಗಳ್ಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

Call us

Call us

ಡಿ.12ರ ಶನಿವಾರ ಬೆಳಿಗ್ಗೆ 11ಗಂಟೆಗೆ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಖ್ಯಾತ ವ್ಯಂಗ್ಯಚಿತ್ರಕಾರರಾದ ಪಿ. ಮಹಮ್ಮದ್, ಪ್ರಕಾಶ್ ಶೆಟ್ಟಿ, ಸತೀಶ್ ಆಚಾರ್ಯ ಹಾಗೂ ಇತರ ಖ್ಯಾತನಾಮರೊಂದಿಗೆ ಮಾಸ್ಟರ್ ಸ್ಟ್ರೋಕ್ ನಡೆಯಲಿದೆ. ಲೈವ್ ರಾಜಕೀಯ ಕಾರ್ಟೂನ್ ರಚನೆ ಹಾಗೂ ಕಾರ್ಟೂನ್ ಪ್ರೀಯರೊಂದಿಗೆ ನೇರ ಸಂವಾದವನ್ನು ಏರ್ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

9 + three =