ಡಿ.12 : ಗುಜ್ಜಾಡಿ ಶಾಲೆಯ 96ನೇ ವಾರ್ಷಿಕೋತ್ಸವ

Call us

ಗಂಗೊಳ್ಳಿ: ಬೈಂದೂರು ವಲಯದ ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 96ನೇ ವಾರ್ಷಿಕೋತ್ಸವ ಸಮಾರಂಭ ಡಿ.12ರಂದು ಶಾಲೆಯ ಶಿವರಾಜ್ ಸ್ಮಾರಕ ರಂಗಮಂಟಪದಲ್ಲಿ ನಡೆಯಲಿದೆ.

Call us

Call us

ಬೆಳಿಗ್ಗೆ ನಡೆಯಲಿರುವ ಧ್ವಜಾರೋಹಣ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಜ್ಜಾಡಿ ಗ್ರಾಪಂ ಅಧ್ಯಕ್ಷ ಹರೀಶ ಮೇಸ್ತ ವಹಿಸಲಿದ್ದು, ಗಿರೀಶ ಕೊಡಂಚ ಗುಜ್ಜಾಡಿ ಮತ್ತು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸೀತಾರಾಮ ಶೆಟ್ಟಿ ಬಹುಮಾನ ವಿತರಿಸಲಿದ್ದಾರೆ. ಸಂಜೆ ನಡೆಯಲಿರುವ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ವಹಿಸಲಿದ್ದು, ಕುಂದಾಪುರ ಉದ್ಯಮಿ ಶೇಷಯ್ಯ ಕೊತ್ವಾಲ್ ಬಹುಮಾನ ವಿತರಿಸಲಿದ್ದಾರೆ ಎಂದು ಶಾಲೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

three × three =