ತಗ್ಗರ್ಸೆ ಕಂಬಳ ಸಂಪನ್ನ. ಬಹುಮಾನ ವಿತರಣೆ

Call us

Call us

Call us

Call us

ಬೈಂದೂರು: ಐತಿಹಾಸಿಕ ಪ್ರಸಿದ್ಧ ತಗ್ಗರ್ಸೆ ಹೆಗ್ಡೆ ಮನೆಯವರ ವರ್ಷಾವದಿ ಕಂಬಳ ಮಹೋತ್ಸವವು ತಗ್ಗರ್ಸೆ ಕಂಬಳಗದ್ದೆಯಲ್ಲಿ ಸಂಭ್ರಮ ಸಡಗರದಿಂದ ನಡೆಯಿತು.

Call us

Click Here

Click here

Click Here

Call us

Visit Now

Click here

ಮಾಜಿ ಶಾಸಕ ಕೆ. ಲಕ್ಷ್ಮಿ ನಾರಾಯಣ ಕಂಬಳೋತ್ಸವಕ್ಕೆ ಚಾಲನೆ ನೀಡಿದರು. ಬೈಂದೂರು ಶಾಸಕ ಕೆ. ಗೋಪಾಲ ಪಜಾರಿ ಕಂಬಳದ ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಜಿಪಂ ಸದಸ್ಯ ಬಾಬು ಶೆಟ್ಟಿ, ತಾಪಂ ಸದಸ್ಯ ಎಸ್. ರಾಜು ಪೂಜಾರಿ, ಬೈಂದೂರು ವೃತ್ತ ನಿರೀಕ್ಷಕ ಎಂ. ಸುದರ್ಶನ್, ಉಡುಪಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಶಾಂತಾರಾಮ ಶೆಟ್ಟಿ, ಬೈಂದೂರು ವಲಯ ಕಂಬಳ ಸಮಿತಿ ಅಧ್ಯಕ್ಷ ವೆಂಕ್ಟ ಪಜಾರಿ ಸಸಿಹಿತ್ಲು, ಉಪ್ಪುಂದ ಲಯನ್ಸ್ ಅಧ್ಯಕ್ಷ ಗೋಕುಲ ಜಿ. ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರಧಾನ ತೀರ್ಪುಗಾರರಾದ ಗುಣಪಾಲ ಕಡಂಬ, ಉಡುಪಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಶಾಂತರಾಮ ಶೆಟ್ಟಿ ಬಾರ್ಕೂರು, ಬೈಂದೂರು ವಲಯ ಕಂಬಳ ಸಮಿತಿ ಅಧ್ಯಕ್ಷ ವೆಂಕ್ಟ ಪಜಾರಿಯವರನ್ನು ಸನ್ಮಾನಿಸಲಾಯಿತು. ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಹೆಗ್ಡೆ ಸ್ವಾಗತಿಸಿದರು. ಕರುಣಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ರತ್ನಾಕರ ಶೆಟ್ಟಿ ವಂದಿಸಿದರು.

ತಗ್ಗರ್ಸೆ ಕಂಬಳದ ಫಲಿತಾಂಶ
ಹಲಗೆ ವಿಭಾಗ: ಶಾಂತರಾಮ ಶೆಟ್ಟಿ ಬಾರ್ಕೂರು ಪ್ರಥಮ, ಆನಂದ ದೇವಾಡಿಗ ತೆಕ್ಕಟ್ಟೆ ದ್ವಿತೀಯ ಶೀನ ಪಜಾರಿ ಮಣೂರು ತೃತೀಯ ಪ್ರಶಸ್ತಿಗಳನ್ನು ಪಡೆದರು.
ಹಗ್ಗ ವಿಭಾಗ ಹಿರಿಯ: ಸದಾಶಿವ ಪಜಾರಿ ಬಾರ್ಕೂರು ಪ್ರಥಮ, ವೆಂಕಟ ಪಜಾರಿ ಸಸಿಹಿತ್ಲು, ದ್ವಿತೀಯ ಶೇಖರ ದೇವಾಡಿಗ ಕೋಟ ತೃತೀಯ ಸ್ಥಾನ ಪಡೆದುಕೊಂಡರು.
ಹಗ್ಗ ವಿಭಾಗ ಕಿರಿಯ: ದುರ್ಗಾ ಫ್ರೆಂಡ್ಸ್ ಕಂಚಿಕಾನ್ ಪ್ರಥಮ, ಸ್ವರೂಪ್ ಕುಮಾರ್ ಕಂದಬಾರಂದಡಿ ದ್ವಿತೀಯ, ಶಾಂತರಾಮ ಶೆಟ್ಟಿ ಬಾರ್ಕೂರು ತೃತೀಯ ಬಹುಮಾನ ಗಳಿಸಿದ್ದಾರೆ.

Leave a Reply

Your email address will not be published. Required fields are marked *

eighteen − 9 =