ತಗ್ಗರ್ಸೆ ಶಾಲೆ: ರಾಷ್ಟ್ರೀಯ ಆವಿಷಾರ್ ಅಭಿಯಾನ ಉದ್ಘಾಟನೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸ. ಹಿ. ಪ್ರಾ ಶಾಲೆ ತಗ್ಗರ್ಸೆಯಲ್ಲಿ ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ ಕಾರ್ಯಕ್ರಮ ಜರುಗಿತು. ತಾಲೂಕು ಪಂಚಾಯತ್ ಸದಸ್ಯೆ ಮಾಲಿನಿ ಕೆ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಪ್ರಭಾಕರ ಗಾಣಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯೆ ಭವಾನಿ ಗಾಣಿಗ, ಸಿಆರ್‌ಪಿ ದಿನಕರ್, ಹಾಗೂ ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.

Call us

Call us

ಶಾಲಾ ಮುಖ್ಯೋಪಧ್ಯಾಯ ತಿಮ್ಮಪ್ಪ ಗಾಣಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ನೋಡೆಲ್ ಶಿಕ್ಷಕಿ ಸಂಗೀತ ಸ್ವಾಗತಿಸಿ, ಸಾರಿಕಾ ವಂದಿಸಿದರು. ಸಹಶಿಕ್ಷಕಿ ಜ್ಯೋತಿ ಎಚ್ ನಿರೂಪಿಸಿದರು. ಸಹಶಿಕ್ಷಕಿಯರಾದ ಭಾಗೀರಥಿ ಎಲ್ ಹಾಗೂ ಅಂಬಾಬಾಯಿ, ಗೌರವ ಶಿಕ್ಷಕಿ ಸರಸ್ವತಿ ಸಹಕರಿಸಿದರು.

Leave a Reply

Your email address will not be published. Required fields are marked *

ten + twelve =