ಕುಂದಾಪುರ: ತಮಿಳುನಾಡಿನಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಇಡೀ ರಾಜ್ಯವೇ ಜಲಪ್ರಳಯಕ್ಕೆ ತುತ್ತಾಗಿದ್ದು ಅಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ. ಅಲ್ಲಿನ ಜನತೆ ಶೀಘ್ರ ತೊಂದರೆಯಿಂದ ಪಾರಾಗಲಿ ಹಾಗೂ ಪ್ರಳಯದಂತಹ ಭೀಕರ ಸನ್ನಿವೇಶ ಎಲ್ಲಿಯೂ ಸಂಭವಿಸಬಾರದೆಂದು ಆಶಯದೊಂದಿಗೆ ಲೋಕಕಲ್ಯಾಣಾರ್ಥವಾಗಿ ಅರಾಟೆಯ ದೀಕ್ಷಾ ಯುತ್ ಫ್ರೆಂಡ್ಸ್ ವತಿಯಿಂದ ಇಲ್ಲಿನ ಐತಿಹಾಸಿಕ ಪ್ರಸಿದ್ಧಿಯ ದೇವಸ್ಥಾನ ಗುಜ್ಜಾಡಿ-ಕೊಡಪಾಡಿಯ ಗುಹೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಬೆಳಿಗ್ಗೆ 7 ಗಂಟೆಯಿಂದ ದೇವಸ್ಥಾನದಲ್ಲಿ ಮಂಗಳಾರತಿ, ಗಣಪತಿ ಹೋಮ ಹಾಗೂ ಗಣಪತಿ ಹಾಗೂ ಗುಹೇಶ್ವರ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.