ತಲ್ಲೂರಿನಲ್ಲಿ ಕೆಕೆವೈಎಸ್ ಟ್ರೋಫಿ-2016 ಕಬಡ್ಡಿ ಪಂದ್ಯಾಟ: ನಾಗದೇವತಾ ಪಡುವರಿ ಪ್ರಥಮ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಲ್ಲೂರಿನಲ್ಲಿ ಪ್ರಪ್ರಥಮ ಬಾರಿಗೆ ಈ ಅದ್ದೂರಿಯ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಿರುವ ಸಂಘಟಕರ ಸಾಹಸ ತುಂಬಾ ಶ್ಲಾಘನೀಯ . ಅಂತರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಸರಿಸಮಾನವಾಗುವಂತೆ ಈ ಹೊನಲು ಬೆಳಕಿನ ಪಂದ್ಯಾಟವನ್ನು ಏರ್ಪಡಿಸುವುದರಲ್ಲಿ ಅವರ ಶ್ರಮ ಸಾರ್ಥಕವಾಗಿದೆ ಎಂದು ನ್ಯಾಯವಾದಿ ಟಿ.ಬಿ. ಶೆಟ್ಟಿ ಹೇಳಿದರು.

Call us

Call us

Call us

ಅವರು ತಲ್ಲೂರಿನ ಶ್ರೀ ಕುಂತಿಯಮ್ಮ ದೇವಸ್ಥಾನದ ವಠಾರದಲ್ಲಿ ಕೊಂಕಣಿ ಖಾರ್ವಿ ಸಮಾಜ ತಲ್ಲೂರು ಇವರ ವತಿಯಿಂದ ಏರ್ಪಡಿಸಲಾದ ಕೆಕೆವೈಎಸ್ ಟ್ರೋಫಿ 2016 ಹೊನಲು ಬೆಳಕಿನ ಕಬಡಿ ಪಂದ್ಯಾಟದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಸಮಾರಂಭದ ತಲ್ಲೂರು ಗ್ರಾ.ಪಂ. ಅಧ್ಯಕ್ಷ ಆನಂದ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ಮಾತನಾಡಿ ಶಾರೀರದ ವಿಕಸನಕ್ಕೆ ಸ್ನೇಹ ಸಂವರ್ಧನೆಗೆ ಇಂತಹ ಪಂದ್ಯಾಟಗಳು ಅತ್ಯಗತ್ಯ ಎಂದು ಅಭಿಪ್ರಾಯ ಪಟ್ಟರು. ವೇದಿಕೆಯಲ್ಲಿ ಜ್ಯೋತಿ ಎ. ಜಿ.ಪಂ. ಸದಸ್ಯರು, ವಸಂತ ಹೆಗ್ಡೆ ಮೊಕ್ತೇಸರರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ತಲ್ಲೂರು, ಜಯಾನಂದ ಖಾರ್ವಿ ಅಧ್ಯಕ್ಷರು ಶ್ರೀ ಮಹಾಕಾಳಿ ದೇವಸ್ಥಾನ ಕುಂದಾಪುರ, ಕರುಣ್ ಕುಮಾರ್ ತಾ.ಪಂ.ಸದಸ್ಯರು , ಶ್ರೀಧರ ಶೆಟ್ಟಿ, ಕಾರ್ಯದರ್ಶಿ, ಶ್ರೀ ಕುಂತಿಯಮ್ಮ ದೇವಸ್ಥಾನ ತಲ್ಲೂರು. ಉಪಸ್ಥಿತರಿದ್ದು ಪಂದ್ಯಾಟಕ್ಕೆ ಶುಭ ಕೋರಿದರು. ಸುನೀಲ್ ಖಾರ್ವಿ ಸ್ವಾಗತಿಸಿದರು. ಪ್ರಶಾಂತ್ ನಾಯಕ್ ಧನ್ಯವಾದಗಳನ್ನು ಅರ್ಪಿಸಿದರು. ಜುಡಿತ್ ಮೆಂಡೋನ್ಸಾ ಕಾರ್ಯಕ್ರಮ ನಿರೂಪಿಸಿದರು.

ಐಪಿಎಲ್ ಪ್ರೊ ಕಬ್ಬಡಿ ಪಂದ್ಯಾಟ ಮಾದರಿಯ ಅಂಗಣದಲ್ಲಿ ಜರಗಿದ ಈ ಪಂದ್ಯಾಟದಲ್ಲಿ ಸುಮಾರು ೩೬ ತಂಡಗಳು ಭಾಗವಹಿಸಿದ್ದು ಅಂತಿಮ ರೋಚಕ ಹಣಾ ಹಣಿಯಲ್ಲಿ ಕುಂದಾಪುರದ ಜಬ್‌ಜಬ್ ತಂಡವನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿದ ಬೈಂದೂರಿನ ನಾಗದೇವತಾ ಪಡುವರಿ ತಂಡ ಪ್ರಥಮ ಸ್ಥಾನಿಯಾಗಿ “ಕೆಕೆವೈಎಸ್ ಟ್ರೋಫಿ 2016” ನ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

????????????????????????????????????
????????????????????????????????????

Leave a Reply

Your email address will not be published. Required fields are marked *

three − 1 =