ತಲ್ಲೂರು ನಾರಾಯಣ ವಿಶೇಷ ಮಕ್ಕಳ ಶಾಲೆ: ಪಾಲಕರಿಗೆ ಅರಿವು ಕಾರ್ಯಕ್ರಮ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ ನಾರಾಯಣ ವಿಶೇಷ ಶಾಲೆಯ ಮಕ್ಕಳ ಷೋಷಕರಿಗಾಗಿ ವಿಶೇಷ ಮಾಹಿತಿ ಅರಿವು ಕಾರ್ಯಕ್ರಮವನ್ನು ಪಾಲಕರ ಸಭೆಯಲ್ಲಿ ನಡೆಸಲಾಯಿತು.

Call us

Call us

ಡಾ. ಪಿ.ವಿ.ಭಂಡಾರಿ, ವೈದ್ಯಕೀಯ ನಿರ್ದೇಶಕರು,ಡಾ ಎ.ವಿ ಬಾಳಿಗ ಆಸ್ಪತ್ರೆ ದೂಡ್ಡಣಗುಡ್ಡೆ ಇವರು ಮಾಹಿತಿಯನ್ನು ನೀಡಿದರು.

Call us

Call us

ಪ್ರಮುಖವಾಗಿ ಅಂಗವಿಕಲತೆ ಮತ್ತು ಅದರ ವಿಧಗಳು, ಬುದ್ಧಿಮಾಂಧ್ಯತೆ ಎಂದರೇನು ಮತ್ತು ಅದಕ್ಕೆ ಕಾರಣಗಳು ಹಾಗೂ ವಿಶೇಷ ಮಕ್ಕಳ ಪಾಲನೆ ಮಾಡುವಲ್ಲಿ ಪೋಷಕರಲ್ಲಿ ಇರಬೇಕಾದ ಕೌಶಲ್ಯಗಳೂಂದಿಗೆ ವಿಕಲತೆಯನ್ನು ಶೀಘ್ರ ಗುರುತಿಸುವಿಕೆ ಮತ್ತು ಪರಿಹಾರ ಕಂಡುಕೊಳ್ಳುವಿಕೆ ಮತ್ತು
ವಿಶೇಷವಾಗಿ ಆಟಿಸಂನ ಕುರಿತು ಮಾಹಿತಿಯನ್ನು ನೀಡಿದರು. ಅಲ್ಲದೇ ಪೋಷಕರ ವಿವಿಧ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರವನ್ನು ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಹಿತೈಷಿಗಳಾದ ಹಟ್ಟಿಯಂಗಡಿ ಸಿದ್ದಿವಿನಾಯಕ ದೇವಸ್ಥಾನದ ಧರ್ಮದರ್ಶಿ ಬಾಲಚಂದ್ರ ಭಟ್ ರವರು ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಇನ್ನೋರ್ವ ಅತಿಥಿ ಪ್ಲಸಂಟ್ ಕುಂದಾಪುರ ಇದರ ಮಾಲಕರಾದ ಅಬ್ದುಲ್ ಬಶೀರ್ ಉಪಸ್ಥಿತರಿದ್ದರು.

ಸುರೇಶ್ ತಲ್ಲೂರು ಸ್ವಾಗತಿಸಿದರು, ಟ್ರಸ್ಟೀ ವಸಂತ ಶಾನುಭಾಗ ವಂದಿಸಿದರು. ಮುಖ್ಯ ಶಿಕ್ಷಕಿ ಪ್ರೇಮಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

three × 3 =