ತಲ್ಲೂರು: ವಿದ್ಯುತ್ ತಗುಲಿ ಇಬ್ಬರು ಯುವಕರ ದುರ್ಮರಣ, ಓರ್ವ ಗಂಭೀರ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ತಲ್ಲೂರು ಪ್ರೌಢಶಾಲೆಯ ಎದುರಿನ ಮೈದಾನದಲ್ಲಿ ಸಮೀಪ ಕಾರ್ಯಕ್ರಮವೊಂದರ ಸಲುವಾಗಿ ಬಂಟಿಂಗ್ಸ್ ಕಟ್ಟುತ್ತಿದ್ದ ವೇಳೆ ಹೈಟೆನ್ಷನ್ ತಂತಿ ತಗಲಿ ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಮನೋಜ್ ದೇವಾಡಿಗ (31) ಸುನಿಲ್ ಮೊಗವೀರ (24) ಮೃತರು ದುರ್ದೈವಿಗಳು.

Call us

Click Here

Click here

Click Here

Call us

Visit Now

Click here

ಜನವರಿ 3ರಂದು ನಡೆಯಲಿರುವ ಕಾರ್ಯಕ್ರಮದ ಸಲುವಾಗಿ ಸಿದ್ಧತೆಗಳು ನಡೆಯುತ್ತಿದ್ದು, ಮಧ್ಯರಾತ್ರಿ ವೇಳೆಗೆ ಯುವಕರ ತಂಡ ಬ್ಯಾನರ್, ಬಂಟಿಂಗ್ಸ್ ಕಟ್ಟುವುದರಲ್ಲಿ ನಿರತವಾಗಿತ್ತು. ಒಬ್ಬ ಯುವಕರು ಮೇಲೇರಿ ಬಂಟಿಂಗ್‌ ಕಟ್ಟಲು ಅದನ್ನು ಮೇಲ್ಮುಖವಾಗಿ ಎಸೆದು ತಂತಿಯನ್ನು ಪಾಸ್ ಮಾಡುತ್ತಿದ್ದ ವೇಳೆ ಅದು ಹೈಟೆನ್ಷನ್ ವಿದ್ಯುತ್ ತಂತಿಗೆ ತಾಕಿದೆ. ಅದರ ಇನ್ನೊಂದು ಬದಿಯನ್ನು ಯುವಕ ಕೈಯಲ್ಲಿ ಹಿಡಿದಾಗ ವಿದ್ಯುತ್ ಶಾಕ್ ತಗಲಿದೆ ಎನ್ನಲಾಗಿದೆ. ಆತನನ್ನು ರಕ್ಷಿಸಲು ಹೋದ ಮತ್ತೊಬ್ಬನಿಗೂ ಶಾಕ್ ತಗಲಿ ಇಬ್ಬರೂ ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಹೇಶ ಎಂಬುವವನಿಗೆ ಗಂಭೀರ ಗಾಯಗಳಾಗಿದ್ದರೇ, ಉಳಿದವರು ದೂರದಲ್ಲಿ ಕೆಲಸ ಮಾಡುತ್ತಿದ್ದುದರಿಂದ ಅಪಾಯದಿಂದ ಪಾರಾಗಿದ್ದಾರೆ. (ಕುಂದಾಪ್ರ ಡಾಟ್ ಕಾಂ)

ಕೋಡಿಯ ತಂಪು ಪಾನೀಯ ತಯಾರಿಕಾ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮನೋಜ್ ಕುಟುಂಬದ ಆಧಾರ ಸ್ಥಂಭವಾಗಿದ್ದರು. ಭಂಡಾರ್ಕಾರ್ಸ್ ಕಾಲೇಜಿನ ದ್ವಿತೀಯ ಬಿಎ ವಿದ್ಯಾರ್ಥಿಯಾಗಿದ್ದ ಸುನಿಲ್ ಕೂಡ ಬಿಡುವಿನ ವೇಳೆ ಕ್ಯಾಟರಿಂಗ್ ಕೆಲಸಕ್ಕೆ ಹೋಗಿ ತನ್ನ ತಾಯಿಗೆ ನೆರವಾಗುತ್ತಿದ್ದರು. ಮನೋಜ್ ಹಾಗೂ ಸುನಿಲ್ ಇಬ್ಬರು ಆತ್ಮೀಯರು. ಒಂದು ಸ್ವಂತ ಉದ್ಯಮ ಆರಂಭಿಸುವ ಆಲೋಚನೆಯಲ್ಲಿಯೂ ಇದ್ದರು. ಆದರೆ ವಿಧಿಯಾಟ ಬೇರೆಯೇ ಇತ್ತು. ತಲ್ಲೂರು ಪರಿಸರದಲ್ಲಿ ಎಲ್ಲರೊಂದಿಗೂ ಬೆರೆತು, ಸಾಮಾಜಿಕ ಸಂಘಟನೆಗಳಲ್ಲಿಯೂ ಸಕ್ರಿಯವಾಗಿದ್ದ ಮನೋಜ್ ಹಾಗೂ ಸುನಿಲ್ ಅವರ ಸಾವು ಊರವರಿಗೆ ಆಘಾತ ತಂದೊಡ್ಡಿದೆ. ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ, ಸಬ್‌ ಇನ್ಸ್‌ಪೆಕ್ಟರ್ ನಾಸಿರ್ ಹುಸೇನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

1 × two =