ತಲ್ಲೂರು ಬಟ್ಟೆ ಅಂಗಡಿಗೆ ಬೆಂಕಿ ಆಕಸ್ಮಿಕ. ಮಾಲಿಕನ ಸಾವು

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ತಲ್ಲೂರು ಬಟ್ಟೆ ಅಂಗಡಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಕರಕಲಾಗಿದ್ದು ಅಂಗಡಿಯಲ್ಲಿದ್ದ ಮಾಲಿಕನೂ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ತಲ್ಲೂರಿನ ಕೋಟಿ ಪೂಜಾರಿ(75) ಮೃತ ದುರ್ದೈವಿ.

Call us

Call us

Visit Now

ತಲ್ಲೂರಿನ ನಗರ ಭಾಗದಲ್ಲಿ ಕಳೆದ 25 ವರ್ಷಗಳಿಂದ ಗಣೇಶ ಡ್ರೆಸ್ ಸೆಂಟರ್ ಹೆಸರಿನ ಬಟ್ಟೆ ಅಂಗಡಿ ನಡೆಸುತ್ತಿದ್ದ ತಲ್ಲೂರು ಗರಡಿ ನಿವಾಸಿ ಕೋಟಿ ಪೂಜಾರಿ (75) ಇಂದು ಮುಂಜಾನೆ ವಾಕಿಂಗ್ ತೆರಳುವ ಸಂದರ್ಭದಲ್ಲಿ ಬಟ್ಟೆಅಂಗಡಿಗೆ ತೆರಳಿದ್ದರು ಎನ್ನಲಾಗಿದೆ. ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಶಟರ್ ಮುಚ್ಚಿದ್ದ ಅಂಗಡಿಯಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿದ ದಾರಿಹೋಕರೊಬ್ಬರು, ಶಟರ್ ತೆರೆದಾಗ ಅಂಗಡಿಗೆ ಬೆಂಕಿ ಬಿದ್ದಿರುವುದು ತಿಳಿದುಬಂದಿದೆ. ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದರಾದರೂ ಅಂಗಂಡಿಯಲ್ಲಿ ಕೋಟಿ ಪೂಜಾರಿ ಬಟ್ಟೆಯೊಂದಿಗೆ ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

Click here

Call us

Call us

ಅಂಗಡಿಗೆ ಆಕಸ್ಮಾತ್ ಬೆಂಕಿ ತಗಲಿದ್ದೂ ಇಲ್ಲವೇ ಆತ್ಮಹತ್ಯೆಯೋ ಎಂಬ ಬಗ್ಗೆ ನಿಖರವಾಗಿ ತಿಳಿದು ಬಂದಿಲ್ಲ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತರು ಪತ್ನಿ, ಈರ್ವರು ಪುತ್ರರು ಹಾಗೂ ಓರ್ವ ಪುತ್ರಿ ಅಗಲಿದ್ದಾರೆ.

News tallur koti poojai death (261 News tallur koti poojai death (25) News tallur koti poojai death (28

Leave a Reply

Your email address will not be published. Required fields are marked *

2 × 5 =