ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಚರ್ಚ್ಗಳಲ್ಲಿ ಗರಿಗಳ ಭಾನುವಾರ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಬಹಳ ಪುರಾತನ ಚಾರಿತ್ರ್ಯವುಳ್ಳ ಕುಂದಾಪುರ ರೊಜಾರಿ ಮಾತೆಯ ಇಗರ್ಜಿಯಲ್ಲಿ ‘ಗರಿಗಳ ಬಾನುವಾರ ಹಬ್ಬ’ ವನ್ನು ಬಹಳ ಭಕ್ತಿ ಪೂಜೆಯಿಂದ ಆಚರಿಸಲಾಯಿತು. ಇದರ ನೇತ್ರತ್ವವನ್ನು ಕುಂದಾಪುರ ಚರ್ಚಿನ ಧರ್ಮಗುರು ವಂ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ ವಹಿಸಿ. ’ಎಸುವಿನ ಕಷ್ಟ ವೇದನೆಯನ್ನು, ಮನದಾಳದಿಂದ ಚಿಂತಿಸಬೇಕು, ಜೀವನದಲ್ಲಿ ಎಸುವಿನಂತೆ ನಿಂದನೆಗೆ, ವಿರೋದಕ್ಕೆ ಸದಾ ಸಿದ್ದನಿರಬೇಕು ಮತ್ತು ಸೋತವರಿಗೆ ಬಡ ಬಗ್ಗರಿಗೆ, ಇನ್ನೂ ಹೆಚ್ಚು ಕೆಳಕ್ಕೆ ಬೀಳಿಸುವಂತ ಕ್ರತ್ಯಗಳನ್ನು ಮಾಡಬೇಡಿ’ ಎಂದು ಸಂದೇಶ ನೀಡಿದರು. ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ವ|ಅನೀಲ್ ಡಿಸೋಜಾ ಸಹ ಯಾಜಾಕರಾಗಿ ಭಾಗವಹಿಸಿದ್ದ ಈ ಧಾರ್ಮಿಕ ಪೂಜಾ ವಿಧಿಯ ಅಚರಣೆಯಲ್ಲಿ ಬಹಳಸ್ಟು ಭಕ್ತಾದಿಗಳು ಈ ಪವಿತ್ರವಾದ ಆಚರಣೆಯಲ್ಲಿ ಭಾಗಿಯಾಗಿದ್ದರು.