ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತೆಕ್ಕಟ್ಟೆ ಗ್ರಾಮದ ಕೊಮೆಯಲ್ಲಿರುವ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಶನೇಶ್ವರ ಮಹಾಯಾಗದೊಂದಿಗೆ ಸಾಮೂಹಿಕ ಶನಿ ಶಾಂತಿ ಮತ್ತು ತುಲಾಭಾರ ಸೇವೆಗಳು ನಡೆಯಿತು.
ವೇದಮೂರ್ತಿ ಎಮ್. ಮಧೂಸೂದನ ಬಾಯಿರಿ ನೇತೃತ್ವದಲ್ಲಿ ಸಕಲ ವೈದಿಕ ಧಾರ್ಮಿಕ ಕಾರ್ಯಕ್ರಮನಡೆಯಿತು. ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್ ಕೆ.ಎಸ್, ಕಾರ್ಯದರ್ಶಿ ಉಮೇಶ್ ಮೆಂಡನ್, ದೇವರ ದರ್ಶನ ಪಾತ್ರಿ ನರಸಿಂಹ ಕಾಂಚನ್, ದೇವಳದ ನಿಕಟ ಪೂರ್ವಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು, ಆರ್ಚಕರು ಮತ್ತು ಸಿಬ್ಬಂದಿ ವರ್ಗ, ದೇವಳದ ಭಕ್ತರು ಉಪಸ್ಥಿತರಿದ್ದರು.
