ಬೈಂದೂರು: ಕಾರ್ನಾಟಕ ಪ್ರೌಢ ಶಿಕ್ಷಣ ಪರಿಕ್ಷಾಮಂಡಳಿ ಬೆಂಗಳೂರು ಇತ್ತೀಚಿಗೆ ನಡೆಸಿದ ಡ್ರಾಯಿಂಗ್ ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ಹೆಬ್ರಿ ಚಾರಾ ಜವಹಾರ್ ನವೋದಯ ವಿದ್ಯಾಲಯದ 9 ನೇ ತರಗತಿ ವಿದ್ಯಾರ್ಥಿನಿ ಎಂ. ವಿ. ತೇಜಸ್ವಿನಿ 518 ಅಂಕ ಪಡೆದು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ ಇವರು ಯೋಗ ಶಿಕ್ಷಕ ಮಂಜುನಾಥ ಎಸ್. ಬಿಜೂರು ಹಾಗೂ ಭಾರತಿ ಎಂ ಬಿಜೂರು ಇವರ ಪುತ್ರಿಯಾಗಿದ್ದು, ಕೋಟೇಶ್ವರದ ಚಿತ್ರ ಕಲಾ ಶಿಕ್ಷಕ ಬೋಜು ಹಾಂಡ ಇವರು ಪರೀಕ್ಷಾ ಪೂರ್ವ ಚಿತ್ರ ಕಲಾ ತರಬೇತಿ ನೀಡಿರುತ್ತಾರೆ.
ತೇಜಸ್ವಿನಿಗೆ ಡ್ರಾಯಿಂಗ್ ಹೈಯರ್ ಪರಿಕ್ಷೆಯಲ್ಲಿ ಪ್ರಥಮ ಸ್ಥಾನ
