ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಸಹಾಯಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ವಿವಿದ ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಘಟಕಗಳ ಸ್ಥಾಪನೆ, ಉನ್ನತೀಕರಣಕ್ಕೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಬಹುದಾಗಿದ್ದು, ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯಡಿ ವೈಯಕ್ತಿಕ ಕಿರು ಆಹಾರ ಸಂಸ್ಕರಣಾ ಘಟಕಗಳ ಉನ್ನತೀಕರಣಕ್ಕೆ ಒಟ್ಟು ವೆಚ್ಚದ ಶೇ. 35 ರಂತೆ ಗರಿಷ್ಟ ರೂ. 10 ಲಕ್ಷ ಸಹಾಯಧನ.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಹೊಸದಾಗಿ ನಿರ್ಮಾಣ ಮಾಡುವ ತೋಟಗಾರಿಕೆ ಬೆಳೆಗಳ ಪ್ರಾಥಮಿಕ ಸಂಸ್ಕರಣಾ ಘಟಕಗಳಿಗೆ ಒಟ್ಟು ವೆಚ್ಚದ ಶೇ. 40 ರಂತೆ ಗರಿಷ್ಟ ರೂ. 10 ಲಕ್ಷ ಸಹಾಯಧನ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ದ್ವಿತಿಯ ಹಂತದ ಸಂಸ್ಕರಣೆಗಳನ್ನು ಕೈಗೊಳ್ಳುವ ರೂ. 50 ಲಕ್ಷಕ್ಕಿಂತ ಅಧಿಕ ಬಂಡವಾಳವನ್ನು ತೊಡಗಿಸಿರುವ ಸಂಸ್ಕರಣಾ ಘಟಕಗಳಿಗೆ ಒಟ್ಟು ವೆಚ್ಚದ ಶೇ. 25 ರಂತೆ ಗರಿಷ್ಟ ರೂ. 50 ಲಕ್ಷ ಸಹಾಯಧನ

ಕೃಷಿ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಧಿಯಡಿ ಪ್ರಾಥಮಿಕ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಮದ್ಯಮಾವದಿ ಹಾಗೂ ಧೀರ್ಘಾವದಿ ಸಾಲದ ಮೇಲಿನ ವಾರ್ಷಿಕ ಶೇ. 9 ರ ಬಡ್ಡಿಗೆ ಶೇ. 3 ರ ಬಡ್ಡಿ ಸಹಾಯಧನ ಹಾಗೂ ರೂ. 2 ಕೋಟಿಯವರೆಗೆ ಪಡೆಯುವ ಸಾಲಕ್ಕೆ ಖಾತರಿ ಸೌಲಭ್ಯ.

Leave a Reply

Your email address will not be published. Required fields are marked *

3 × two =