ತ್ಯಾಜ್ಯ ನಿರ್ವಹಣಾ ಘಟಕ ಉದ್ಘಾಟನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮರವಂತೆ ಗ್ರಾಮ ಪಂಚಾಯತ್ ಸ್ವಚ್ಛ ಭಾರತ್ ಮಿಶನ್‌ನ ರೂ. ೧೬. ೭೫ ಲಕ್ಷ ಅನುದಾನ ಬಳಸಿಕೊಂಡು ಗಾಂಧಿನಗರದಲ್ಲಿ ನಿರ್ಮಿಸಿರುವ ಜಿಲ್ಲೆಯ ಮೊದಲ ಗ್ರಾಮೀಣ ತ್ಯಾಜ್ಯ ನಿರ್ವಹಣಾ ಘಟಕವನ್ನು ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಗುರುವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಿರ್ವಹಣಾ ಘಟಕ ನಿರ್ಮಿಸುವುದಕ್ಕಿಂತ ಆ ಬಳಿಕ ತ್ಯಾಜ್ಯ ನಿರ್ವಹಣೆ ಮಾಡುವುದು ನಿಜವಾದ ಸವಾಲಿನ ಕೆಲಸ. ಅದಕ್ಕೆ ಸಾರ್ವಜನಿಕರ ನೆರವು ಅತಿ ಅಗತ್ಯ. ಅವರಿಗೆ ಗ್ರಾಮ ಸ್ವಚ್ಛತೆಯ ಮಹತ್ವದ ಕುರಿತು ಅರಿವು ಮೂಡಿಸಿ ಗ್ರಾಮ ಪಂಚಾಯತ್‌ನ ಕೆಲಸದಲ್ಲಿ ಕೈಜೋಡಿಸುವಂತೆ ಮಾಡಬೇಕು. ಸಂಗ್ರಹವಾದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿಮಾಡುವುದಕ್ಕೆ ಆದ್ಯತೆ ನೀಡಬೇಕು. ಹಲವು ವಿಷಯಗಳಲ್ಲಿ ಪ್ರಥಮ ಸ್ಥಾನದಲ್ಲಿರುವ ಮರವಂತೆ ಇದರಲ್ಲೂ ಮೊದಲಿನದೆನಿಸಿ, ಜಿಲ್ಲೆಯ ಅನ್ಯ ಗ್ರಾಮ ಪಂಚಾಯತ್‌ಳಿಗೆ ಮಾದರಿಯಾಗಲಿ ಎಂದು ಹಾರೈಸಿದರು.

Click Here

Call us

Call us

ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ. ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿಅಧಿಕಾರಿ ಹರಿಶ್ಚಂದ್ರ ಆಚಾರ್ಯ ಸ್ವಾಗತಿಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಮಾಜಿ ಅಧ್ಯಕ್ಷ ಎಸ್. ಜನಾರ್ದನ ಮರವಂತೆಯಲ್ಲಿ ೨೦೦೨ರಲ್ಲಿ ಅನುಷ್ಠಾನಿಸಿದ ಸ್ವಚ್ಛಗ್ರಾಮ ಯೋಜನೆಯಿಂದಾರಂಭಿಸಿ, ಸಂಪೂರ್ಣ ಸ್ವಚ್ಛತಾ ಆಂದೋಲನ, ಸುವರ್ಣ ಗ್ರಾಮೋದಯ ಯೋಜನೆ, ಮತ್ತು ಪ್ರಸಕ್ತ ತ್ಯಾಜ್ಯ ನಿರ್ವಹಣಾ ಘಟಕದ ವರೆಗಿನ ಗ್ರಾಮ ಸ್ವಚ್ಛತೆಯ ಅಭಿಯಾನ ನಡೆದುಬಂದ ದಾರಿಯನ್ನು ವಿವರಿಸಿದರು.

Click here

Click Here

Call us

Visit Now

ತಾಲೂಕು ಪಂಚಾಯತ್ ಸದಸ್ಯ ಜಗದೀಶ ಪೂಜಾರಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಮೊಯಿಲಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಲಕ್ಷ್ಮೀನಾರಾಯಣ, ಉಪಾಧ್ಯಕ್ಷ ಗಣೇಶ ಪೂಜಾರಿ, ಸ್ವಚ್ಛ ಭಾರತ ಮಿಶನ್‌ನ ಜಿಲ್ಲಾ ಸಂಯೋಜಕರಾದ ರಘುನಾಥ್, ಸುಧೀರ್ ಶುಭ ಹಾರೈಸಿದರು. ತ್ಯಾಜ್ಯ ಸಂಗ್ರಾಹಕ ಮತ್ತು ಬಟ್ಟೆಯ ಚೀಲಗಳ ಕೊಡುಗೆ ನೀಡಿದ ಮತ್ಸ್ಯೋದ್ಯಮಿ ಸತೀಶ ಗಂಗೊಳ್ಳಿಯರಮನೆ ಅವರನ್ನು ಸನ್ಮಾನಿಸಲಾಯಿತು. ಗಣಕಯಂತ್ರ ಸಹಾಯಕ ಗುರು ವಂದಿಸಿದರು. ಕರಸಂಗ್ರಾಹಕ ಶೇಖರ ಮರವಂತೆ ನಿರೂಪಿಸಿದರು.

 

Leave a Reply

Your email address will not be published. Required fields are marked *

10 + 3 =