ತ್ರಾಸಿ: ಗಾಂಜಾ ಮಾರಾಟ, ಇಬ್ಬರ ಬಂಧನ

ಕುಂದಾಪ್ರ ಡಾಟಡ್ ಕಾಂ ಸುದ್ದಿ.
ಕುಂದಾಪುರ:
ತ್ರಾಸಿ ಪ್ರವಾಸಿ ಮಂದಿರದಲ್ಲಿ ಇಬ್ಬರು ಗಾಂಜಾ ಮಾರಾಟ ಮಾಡುತಿದ್ದು, ಖಚಿತ ಮಾಹಿತಿ ಮೇರೆಗೆ ಗಂಗೊಳ್ಳಿ ಪಿಎಸ್ಐ ನಂಜಾ ನಾಯ್ಕ್ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮುಳ್ಳಿಕಟ್ಟೆ ಹೊಸಾಡು ಗ್ರಾಮದ ನಿಶಾನ್(21) ಹಾಗೂ ಮರವಂತೆಯ ಪ್ರಥಮ್ (2೦)ಬಂಧಿತ ಆರೋಪಿಗಳು. ಆಪಾದಿತರ ವಶದಲ್ಲಿದ್ದ 5 ಸಾವಿರ ರೂ. ಮೌಲ್ಯದ 120 ಗ್ರಾಂ ತೂಕದ ಗಾಂಜಾ, ನಗದು 680 ರೂ ವಶಪಡಿಸಿಕೊಳ್ಳಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

6 + 5 =