ತ್ರಾಸಿ ಡಾನ್‌ಬಾಸ್ಕೊ ಶಾಲೆ: ಶೇ.100 ಫಲಿತಾಂಶ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಿಬಿಎಸ್‌ಸಿ ಪಠ್ಯಕ್ರಮದ 10ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು, ತ್ರಾಸಿಯ ಡಾನ್‌ಬಾಸ್ಕೊ ಶಾಲೆಯ ಎಲ್ಲಾ 29 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಶೇ 100 ಫಲಿತಾಂಶ ಬಂದಿದೆ. ಐದು ವರ್ಷಗಳಿಂದ ಸತತ ಈ ದಾಖಲೆಯಾಗಿದೆ.

Call us

Call us

29ರಲ್ಲಿ 6 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 11 ಪ್ರಥಮ ಶ್ರೇಣಿ ಹಾಗೂ ಉಳಿದ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಿ. ನಿತ್ಯಶ್ರೀ ಶೇ 94.2 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ ಶೇ 91.2 ಪಡೆದ ಪ್ರಾಂಜಲ್ ಮ್ಯಾಥ್ಯೂ ಲೋಬೊ ದ್ವಿತೀಯ ಸ್ಥಾನಿಯಾಗಿದ್ದಾರೆ.

Call us

Call us

ಈ ಸಂದರ್ಭ ಮಾತನಾಡಿದ ಪ್ರಾಂಶುಪಾಲ ಫಾ. ಮ್ಯಾಕ್ಸಿಮ್ ಡಿಸೋಜ, ಕೋವಿಡ್ ಕಾರಣದಿಂದ ಬೋರ್ಡ್ ಪರೀಕ್ಷೆಯನ್ನು ರದ್ದುಮಾಡಿ, ಶಾಲಾ ಪರೀಕ್ಷೆಗಳ ಅಂಕ ಪರಿಗಣಿಸಿ ಫಲಿತಾಂಶ ಘೋಷಿಸಲಾಗಿತ್ತು. ಬೋರ್ಡ್ ಪರೀಕ್ಷೆ ನಡೆದಿದ್ದರೆ ವಿದ್ಯಾರ್ಥಿಗಳ ಸಾಧನೆಯ ಮಟ್ಟ ಇನ್ನೂ ಹೆಚ್ಚಿರುತ್ತಿತ್ತು ಎಂದು ಹೇಳಿದರು.

ದಶಮಾನೋತ್ಸವದ ಸಂಭ್ರಮದಲ್ಲಿರುವ ಶಾಲೆ ಈ ವರ್ಷದಿಂದ ಸೀನಿಯರ್ ಸೆಕೆಂಡರಿ ಶಾಲೆಯಾಗಿ ಮೇಲ್ದರ್ಜೆಗೇರಿದ್ದು, 11ನೇ ತರಗತಿಯ ವಿಜ್ಞಾನ ಮತ್ತು ವಾಣಿಜ್ಞ್ಯ ಶಾಸ್ತ್ರ ವಿಭಾಗಗಳು ಆರಂಭವಾಗಿವೆ.

Leave a Reply

Your email address will not be published. Required fields are marked *

12 + 10 =