ಥಾಲ್ಯಾಂಡ್ನ ಲೇಡಿಬಾಯ್ಸ್ಗಳ ಕಥೆ

Call us

Call us

ಈ ಲೇಡಿಬಾಯ್ಸ್ ಯಾಕಾಗುತ್ತಾರೆ, ಹೇಗಾಗುತ್ತಾರೆ ? ಕಾಮಕ್ರೀಡೆಯನ್ನೇ ಮಾರಾಟದ ಸರಕಾಗಿಸಿಕೊಂಡು ಪ್ರವಾಸಿಗಳ ಸ್ವರ್ಗ ಥಾಲ್ಯಾಂಡ್ನ ಲೇಡಿಬಾಯ್ಸ್ಗಳ ಕಥೆಎನ್ನಿಸಿದ ಥಾಲ್ಯಾಂಡಿನಲ್ಲಿ ಇವರ ವ್ಯಾಪಾರ ಏನು, ಹೇಗೆ? ಇವರ ಆಮೋದ – ಪ್ರಮೋದಗಳು ಹೇಗಿರುತ್ತವೆ? ಲೇಡಿಬಾಯ್ಸ್ ಮತ್ತು ನಿಜವಾದ ಥಾಯೀ ತರುಣಿಯರನ್ನು ಗುರುತಿಸುವ ಬಗೆ ಹೇಗೆ?

Call us

Call us

Visit Now

ಥಾಲ್ಯಾಂಡ್ಗೆ ಹೋದವರು ಲೇಡಿಬಾಯ್ಸ್ಗಳನ್ನು ಕಾಣದೇ ಹಿಂದೆ ಬಂದರೆ ಅದು ದಂಡ ಎಂದು ಹೇಳುತ್ತಾರೆ. ಆದರೆ ಲೇಡೀಸೋ, ಬಾಯ್ಸೋ ಎಂದು ಪತ್ತೆ ಹಚ್ಚುವುದೇ ವಿದೇಶೀಯರಿಗೆ ಕಷ್ಟಸಾಧ್ಯ. ಅದರಿಂದಾಗಿಯೇ ಈ ಲೇಡಿಬಾಯ್ಸ್ಗಳಿಗೆ ಜೀವನ ನಿರ್ವಹಣೆ ಸುಗಮವಾಗಿದೆ. ಯಾವುದೇ ಅಂಗಡಿ, ಬಾರ್, ನರ್ತನ ಶಾಲೆ, ಹೋಟೇಲು, ಮಾಲ್ ನೋಡಿ, ಅಲ್ಲಿರುವವರೆಲ್ಲಾ ಲೇಡಿಬಾಯ್ಸ್. ಇಂತಹ ಉದ್ಯೋಗಕ್ಕೆ ಅವರು ಹೇಳಿ ಮಾಡಿಸಿದವರು.

Click here

Call us

Call us

ಯಾಕೆ ಹೀಗೆ ?
ಯಾಕೆ ಈ ಹುಡುಗರೆಲ್ಲಾ ಹುಡುಗಿಯರಾಗಲು ಯತ್ನಿಸುತ್ತಾರೆ? ಥಾಲ್ಯಾಂಡ್ನಲ್ಲಿ ಕಾಮವೇ ಮಾರಾಟದ ಸರಕು. ಕಾಮ ವ್ಯಾಪಾರವೇ ಹಣ ಗಳಿಸುವ ಭಾರೀ ವ್ಯವಹಾರ. ಹಾಗಾಗಿಯೇ ಅದರತ್ತ ಅಲ್ಲಿನ ಹುಡುಗರ ದೃಷ್ಟಿ. ಆದರೆ ಥಾಯೀ ಜನ ಈ ಪ್ರಶ್ನೆಗೆ ನೀಡುವ ಉತ್ತರ – ಕರ್ಮ ಸಿದ್ಧಾಂತ. ಹಿಂದಿನ ಜನ್ಮದಲ್ಲಿ ಹೆಣ್ಣುಗಳ ಹಿಂದೆ ಬಿದ್ದು ಹೆಣ್ಣುಗಳಿಗೆ ಗೋಳು ನೀಡಿದವರೆಲ್ಲಾ ಈ ಜನ್ಮದಲ್ಲಿ ಲೇಡಿಬಾಯ್ಸ್ ಆಗುತ್ತಾರೆಂಬ ನಂಬಿಕೆ. ಆದರೆ ಹುಡುಗರಿಗೆ ತಾವು ಹುಡುಗಿಯರಾಗಬೇಕೆಂಬ ಹಂಬಲ ಶಾಲೆಯಲ್ಲೇ ಶುರುವಾಗುತ್ತದಂತೆ. ಶಾಲೆಗಳಲ್ಲಿ ಅಧ್ಯಾಪಕರುಗಳು ಹುಡುಗಿಯರ ಮಟ್ಟಿಗೆ ಮೆತ್ತಗೆ. ಆದರೆ ಹುಡುಗರಿಗೆ ಜೋರು. ಕೋಲು ತೆಗೆದುಕೊಂಡು ಸಮಾ ಬಾರಿಸುತ್ತಾರಂತೆ. ಹುಡುಗಿಯರಿಗೆ ಪೆಟ್ಟೇ ಇಲ್ಲ. ಇಂತಹ ಸಂದರ್ಭದಲ್ಲಿ ರೌಡಿ ಹುಡುಗನೊಬ್ಬ ಪೆಟ್ಟು ತಪ್ಪಿಸಿಕೊಳ್ಳಲು ಕಾಲೊಳಗೆ ಕಾಲು ಹಾಕಿಕೊಂಡು ಹುಡುಗಿಯಂತೆ ಕುಳಿತದ್ದಿದೆ ಎನ್ನುತ್ತಾರೆ ಇಲ್ಲಿಯ ಮಂದಿ. ಲೇಡಿಬಾಯ್ಸ್ ಆಗುವುದೇ ಒಂದು ಉದ್ಯೋಗವಾಗಿಬಿಟ್ಟಿದೆ ಥಾಲ್ಯಾಂಡ್ನಲ್ಲಿ. ಹೇರಳ ಹಣ ಸಂಪಾದನೆಯ ಮೂಲ ಅದು. ಬೇರೆ ದೇಶಗಳಲ್ಲಿ ಇಂಜಿನೀಯರ್, ಡಾಕ್ಟರ್ ಆಗಿ ಕೈತುಂಬಾ ಸಂಪಾದಿಸಬಹುದಾದರೆ ಥಾಲ್ಯಾಂಡ್ನಲ್ಲಿ ಲೇಡಿಬಾಯ್ಸ್ ಆಗಿ ಭಾರೀ ಸಂಪಾದನೆ ಮಾಡಬಹುದಂತೆ ಅದಕ್ಕಾಗಿ ಹುಡುಗರು ಶಸ್ತ್ರಚಿಕಿತ್ಸೆ, ಹಾಮರ್ೋನು ಚಿಕಿತ್ಸೆಗೆ ಮೊರೆ ಹೋಗುತ್ತಾರೆ.

ಹೆಣ್ಣಾಗುವುದು …….
ಲೇಡಿಬಾಯ್ಸ್ ಆಗಲು ಮೂಗಿನ ಶಸ್ತ್ರಚಿಕಿತ್ಸೆ ಬಲುಮುಖ್ಯ. ಕ್ಲಿಯೋಪಾತ್ರಾಳ ಮೂಗು ತುಸುವೇ ವಾರೆಯಾಗಿರುತ್ತಿದ್ದರೆ ಇತಿಹಾಸವೇ ಬೇರೆಯಾಗಿರುತ್ತಿತ್ತು ಎನ್ನುತ್ತಾರಲ್ಲ ! ಅದಕ್ಕಾಗಿ ಸಿಲಿಕಾನ್ ಇಂಜಕ್ಷನ್ ಸಹಾ ತೆಗೆದುಕೊಳ್ಳುತ್ತಾರೆ. ಒಂದು ಶಸ್ತ್ರಕ್ರಿಯೆಗೆ ಕನಿಷ್ಟ 45 ಸಾವಿರ ಬಾತ್ ವೆಚ್ಚವಿದೆ. ಸ್ತನ ಬರಿಸುವ ಶಸ್ತ್ರಕ್ರಿಯೆಗೆ ಒಂದು ರಾತ್ರಿ ಆಸ್ಪತ್ರೆಯಲ್ಲಿರಬೇಕಾಗುತ್ತದೆ. ಎರಡು ವಾರ ಕಳೆದರೆ ಹೆಣ್ಣಿನ ಸೂಕ್ಷ್ಮತೆ ಉಂಟಾಗುತ್ತದೆ. ಸ್ಪರ್ಶಕ್ಕೆ ಸ್ಪಂದನ ಬರುತ್ತದೆ. ಜನನಾಂಗ ಶಸ್ತ್ರಕ್ರಿಯೆಗೆ ಕನಿಷ್ಟ 7 ಯಾ 8 ದಿನ ಆಸ್ಪತ್ರೆಯಲ್ಲಿರಬೇಕು. ಗುಣವಾಗಲು ಒಂದರಿಂದ ಒಂದುವರೆ ತಿಂಗಳು ತಗಲುತ್ತದೆ. ಆ ನಂತರ ಹೆಣ್ಣಿನಂತೆ ವತರ್ಿಸಲು, ಬಳಸಲು ಸಾಧ್ಯ ಎನ್ನುತ್ತಾರೆ. ಇಡೀ ದೇಹದ ಶಸ್ತ್ರಕ್ರಿಯೆಗೆ ಒಂದುವರೆ ಲಕ್ಷ ಬಾತ್ ಖಚರ್ು ಇದೆ. ಆಪರೇಶನ್ ಇಲ್ಲದೇ ಬರೇ ಹಾಮರ್ೋನ್ ಚಿಕಿತ್ಸೆಯಿಂದಲೇ ಲೇಡಿಬಾಯ್ಸ್ ಆಗುವವರು ಇದ್ದಾರೆ. ಇಷ್ಟೆಲ್ಲಾ ಆದರೂ ಹೆಣ್ಣಿನಂತೆ ಕಾಣಬೇಕು, ಹೆಣ್ಣಿನಂತೆ ಇರಬೇಕು, ಹೆಣ್ಣಿನಂತೆ ಫೀಲ್ ಮಾಡಬೇಕು (ಕನ್ನಡಿ ನೋಡಿ ಕಲಿಯುತ್ತಾರೆ) ನಾಂಗ್ ಪೊಯ್ ತ್ರಿಚದಾ ಈ ಲೇಡಿಬಾಯ್ಸ್ಗಳಲ್ಲೇ ತ್ರಿಪುರ ಸುಂದರಿ ಎಂದು ಹೆಸರಾದವ (ಳು). ಗಂಡು ಆಗಿರುವ, ಹೆಣ್ಣು ಆಗಿರುವ ಇಂತಹವರಿಗೆ ಥಾಯಿ ಭಾಷೆಯಲ್ಲಿ ಕಥೋಯಿ ಎನ್ನುತ್ತಾರೆ.

ಸ್ವರ್ಗ ಸುಖ
ಲೇಡಿಬಾಯ್ಸ್ ಆಗಿ ಪರಿವರ್ತಿತರಾದ ‘ಹುಡುಗಿ’ಯರಿಗೂ ವೈಯುಕ್ತಿಕ ಜೀವನ ಬೇಕಾಗುತ್ತದೆ. ಅವರಿಗೆ ಗಂಡ ಬೇಕು, ಮಕ್ಕಳು ಬೇಕು ಅನ್ನಿಸುತ್ತದೆ. ಅವರೂ ಮದುವೆಯಾಗುತ್ತಾರೆ, ಮಕ್ಕಳನ್ನು ಪಡೆಯುತ್ತಾರೆ. ಇದಲ್ಲದೇ ಪುರುಷ ಜನನಾಂಗ ಇಟ್ಟುಕೊಂಡೇ ಇರುವ ಲೇಡಿಬಾಯ್ಸ್ ಕೂಡಾ ಇರುತ್ತಾರೆ. ಇವರು ಪ್ರವಾಸಿಗಳಿಗೆ ನೀಡುವಷ್ಟು ಸುಖ ಬೇರಾರೂ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ. ಗಿರಾಕಿಗಳಿಗೆ ಸುಖ ನೀಡಲು ನಾವು ಏನು ಮಾಡಲೂ ತಯಾರಿರುತ್ತೇವೆ. ಹೆಣ್ಣಾದವಳಿಗೆ ಇಂತಹ ಸಂಗತಿಗಳಲ್ಲಿ ಕೆಲವೊಂದು ಮಿತಿಗಳಿರುತ್ತವೆ. ಆದರೆ ನಮಗೆ ಅವರಿಗಿಂತ ಹೆಚ್ಚಿನ ಸಾಮಥ್ರ್ಯ ಇರುವ ಕಾರಣ ಪ್ರವಾಸಿಗಳು ಒಮ್ಮೆ ಲೇಡಿಬಾಯ್ಸ್ ರುಚಿ ಕಂಡ ಮೇಲೆ ಅವರಿಗೆ ಬೇರಾವುದೂ ರುಚಿಸುವುದಿಲ್ಲ ಎಂದು ಖಂಡಿತವಾಗಿ ಹೇಳುತ್ತಾನೆ(ಳೆ) ಓರ್ವ ಲೇಡಿಬಾಯ್ ಒಂದು ಸಂದರ್ಶನದಲ್ಲಿ.

ಹತ್ತು ಅಂಶಗಳು
ಹಾಗಾದರೆ ಲೇಡಿಬಾಯ್ಸ್ನ್ನು ನಿಜವಾದ ಥಾಯಿ ಹೆಣ್ಣಿನಿಂದ ಪ್ರತ್ಯೇಕಿಸಿ ಗುರುತಿಸುವುದು ಹೇಗೆ? ಪರಿಣತರೊಬ್ಬರು ಹತ್ತು ಅಂಶದ ಪತ್ತೆ ವಿಧಾನ ಸೂಚಿಸಿದ್ದಾರೆ.
1. ಅವರ ಕೈ,ಕಾಲು ನೋಡಿರಿ. ಹೆಣ್ಣಿನ ಕೈಕಾಲು ತೀರಾ ಸಣ್ಣವು, ಇವರದು ದೊಡ್ಡದೊಡ್ಡವು. ಸೈಜ್ 12ರ ಹೀಲ್ಸ್ ಸಹಾ ಹಾಗಾಗಿ ಅವಳಲ್ಲ, ಅವನೇ ಎಂದು ಲೆಕ್ಕ.
2. ಗಂಟಲ ಗಂಟು(ಆ್ಯಡಮ್ಸ್ ಆ್ಯಪಲ್) ನೋಡಿ. ಹೆಣ್ಣಿಗೆ ಅದಿರುವುದಿಲ್ಲ.
3. ತೀರಾ ಅತಿಯಾದ ಮೇಕಪ್ಪು. ನಿಜವಾದ ಹೆಣ್ಣು ಅತೀ ಕಡಿಮೆ ಮೇಕಪ್ಪು ಮಾಡಿಕೊಂಡಿರುತ್ತಾಳೆ.
4. ಅಲ್ಲಿನ ಹೆಣ್ಣುಗಳು ಕುಳ್ಳನೆ. ಆದರೆ ಇವರು 5’4 ಗಿಂತ ಎತ್ತರ. 6 ಅಡಿ ಇದ್ದರಂತೂ ಗಂಡೇ ಎಂತ ಖಾತರಿ. ವಿದೇಶೀಯರೊಂದಿಗೆ ಮೈಮೇಲೆ ಬಿದ್ದು ಸಲಿಗೆ ತೆಗೆದುಕೊಳ್ಳುವವರು ಇವರೇ.
5. ಅತ್ಯಂತ ಸುಂದರಿಯಾಗಿದ್ದರೆ, ಮೊಡೆಲ್ ಅಲ್ಲವಾಗಿದ್ದರೆ, ಅದು ಲೇಡಿಬಾಯ್ಸ್.
6. ಮುಖದಲ್ಲಿ ಕೂದಲುಗಳಿದ್ದರೆ ಮೈ, ಕೈ, ಕಾಲುಗಳಲ್ಲಿ ಕೂದಲಿದ್ದರೆ ಗಂಡು – ಥಾಯಿ ಹೆಣ್ಣಿಗೆ ಇವೆಲ್ಲಾ ಇಲ್ಲ.
7. ಥಾಯಿ ಹುಡುಗಿಯರು ಹೆಣ್ತನ ಉಳ್ಳವರು. ಲೇಡಿಬಾಯ್ಸ್ಗಳ ಗಟ್ಟಿಸ್ನಾಯುಗಳು, ಮಾಂಸಖಂಡಗಳು, ಅಗಲವಾದ ಭುಜ, ಸೊಂಟ ಇವೆಲ್ಲಾ ಬಯಲಾಗಿಸುತ್ತವೆ.
8. ಗಂಡು ಜನನೇಂದ್ರಿಯ. (ಇದನ್ನು ಗೊತ್ತು ಹಚ್ಚುವುದು ಕಷ್ಟ)
9. ಥಾಯಿ ಹೆಣ್ಣು ಖಾಸಗಿಯಾಗಿ ಹೆಚ್ಚು ಮುಕ್ತ. ಆದರೆ ಹೊರಗೆ ಅಷ್ಟೇ ನಾಚಿಕೆ. ಆದರೆ ಲೇಡಿಬಾಯ್ಸ್ ಕತ್ತಲಲ್ಲೇ ಬಟ್ಟೆ ಬಿಚ್ಚುವವರು ಹೊರತು ನಿಮ್ಮೆದುರೇ ಬತ್ತಲಾಗುವವರಲ್ಲ.
10. ಲೇಡಿಬಾಯ್ಸ್ಗಳಿಗೆ ಸ್ನೇಹಿತರ ತಂಡವೇ ಇರುತ್ತದೆ. ಅವರೆಲ್ಲಾ ತೋಳಗಳ ಹಾಗೆ ಹಿಂಡಾಗಿಯೇ ಇರುವವರು. ಉಳಿದವರು ನಿಮಗೆ ಹುಡುಗರಾಗಿ ಕಂಡರೆ ಈತನೂ ಹುಡುಗನೇ.

ಲೇಡಿಬಾಯ್ಸ್ ಕಥೆಗಳು
ಈ ಲೇಡಿಬಾಯ್ಸ್ಗಳ ಕುರಿತು ಚಿತ್ರವಿಚಿತ್ರ ಕಥೆಗಳಿರುತ್ತವೆ. ಬ್ಯಾಂಕಾಕಿನಲ್ಲೊಬ್ಬ ಅಕೌಂಟೆಟ್ ಅಲ್ಲಿಯ ಆಸ್ಪತ್ರೆಯ ಮೇಲೊಂದು ದಾವೆ ಹೂಡಿದ್ದಾನೆ. ಕಾರಣ, ಆತ ಯಾವುದೋ ಶಸ್ತ್ರಕ್ರಿಯೆಗಾಗಿ ಆಸ್ಪತ್ರೆಯಲ್ಲಿ ಮಲಗಿದ್ದ. ಲೇಡಿಬಾಯ್ ಆಗಲು ಶಸ್ತ್ರಕ್ರಿಯೆಗೆ ನಿಗದಿಯಾಗಿದ್ದ ಯುವಕನೊಬ್ಬನನ್ನು ಬಿಟ್ಟು, ತಪ್ಪಾಗಿ ಗ್ರಹಿಸಿ ಈತನಿಗೇ ಶಸ್ತ್ರಕ್ರಿಯೆ ಮಾಡಿಬಿಟ್ಟರು. ಈತ ಎದ್ದು ನೋಡುವಾಗ ತನ್ನ ಮೂಲ ಜನನಾಂಗವನ್ನೇ ಕಳೆದುಕೊಂಡಿದ್ದ. ಆಘಾತಗೊಂಡ ಆತ ಈಗ ನಷ್ಟ ಪರಿಹಾರಕ್ಕೆ ದಾವೆ ಹೂಡಿದ್ದಾನೆ.

ಗಂಡು – ಹೆಣ್ಣು ಅವಾಂತರ
ಪುಕ್ಕೇಟ್ನಲ್ಲಿ ಲೇಡಿಬಾಯ್ಸ್ಗಳು ಇವೆಲ್ಲಾ ಅವಾಂತರ ಆಗುವುದು ಬೇಡ ಎಂತ ಬಹಿರಂಗವಾಗಿ ಗಂಡೋ, ಹೆಣ್ಣೋ ಎಂದು ಪ್ರವಾಸಿಗಳಿಗೆ ತಿಳಿಯಲಿ ಎಂತ ಲಿಂಗಪ್ರದರ್ಶನ ಮಾಡತೊಡಗಿದ್ದರು. ನಂತರ ಪೋಲೀಸರಿಗೆ ಇದು ಗೊತ್ತಾಗಿ ಅವರ ಮೇಲೆ ಕ್ರಮ ಕೈಗೊಂಡ ನಂತರ ಆ ಪ್ರವೃತ್ತಿ ನಿಂತುಹೋಯಿತು. ಲೇಡಿಬಾಯ್ಸ್ಗಳು ಬಂಧಿತರಾದರೆ ಅವರನ್ನು ಹೆಂಗಸರ ಸೆಲ್ನಲ್ಲಿ ಹಾಕುತ್ತಾರೆ. ಯಾಕಂದರೆ ಗಂಡು ಕೈದಿಗಳು ಇವರೆಲ್ಲಾ ತಮ್ಮ ಸೆಲ್ಗೆ ಬರಲಿ ಎಂದು ಜೊಲ್ಲುಸುರಿಸುತ್ತಿರುತ್ತಾರೆ. ಇವರಿಗೆ ಶೌಚಾಲಯ ಕೂಡಾ ಹೆಂಗಸರದ್ದೇ.

ಅಪಾಯಕಾರಿಗಳು
ಬ್ಯಾಂಕಾಕಿನಲ್ಲಿ ಬಾಂಗ್ಲಾದೇಶದ ಒಬ್ಬ ಪ್ರವಾಸಿಗೆ ಮೋಸ ಮಾಡಿದ ಅಪರಾಧಕ್ಕೆ ಮೂರು ಲೇಡಿಬಾಯ್ಸ್ಗಳ ಬಂಧನವಾಯಿತು. ಆಗ ಹೊರಬಿದ್ದ ಅಂಶ ಆಘಾತಕರ. ಈ ಲೇಡಿಬಾಯ್ಸ್ಗಳ ಮುಖಂಡ ಪ್ರವಾಸಿಯನ್ನು ಆಕಷರ್ಿಸಿ ತುಟಿಗೆ ತುಟಿಕೊಟ್ಟು ಚುಂಬಿಸುತ್ತಿದ್ದ. ಹಾಗೆ ಮಾಡುವಾಗ ತನ್ನ ನಾಲಗೆಯಡಿ ಇರಿಸಿಕೊಂಡಿದ್ದ ಗುಳಿಗೆಯೊಂದನ್ನು ಈ ಪ್ರವಾಸಿಯ ಬಾಯಿಗೆ ಜಾರಿಸಿಬಿಟ್ಟಿದ್ದ. ಈ ಬಾಂಗ್ಲಾದೇಶಿ ಆ ಗುಳಿಗೆ ನುಂಗಿದ್ದೇ ತಡ ಹತ್ತು ಗಂಟೆ ಕಾಲ ನಿದ್ರೆಗೆ ಜಾರಿಬಿಟ್ಟ. ಅಷ್ಟರಲ್ಲಿ ಹೋಟೇಲ್ ರೂಮಿನಲ್ಲಿದ್ದ ಆತನಿಂದ 7300 ಬಾತ್ ಹಣ, ಆತನ ವಾಚು, ಲ್ಯಾಪ್ಟ್ಯಾಪ್, ಕಂಪ್ಯೂಟರ್ ಅಲ್ಲದೇ ಆತನ ಪೂರಾ ಬಟ್ಟೆಬರೆ ಅಪಹರಿಸಿ ಈ ಮೂವರು ಪರಾರಿಯಾಗಿದ್ದರು. ಬೆತ್ತಲೆ ಮಲಗಿದ್ದ ಪ್ರವಾಸಿ ಎದ್ದ ಮೇಲೆ ತಾನು ಬೇಸ್ತುಬಿದ್ದ ಸಂಗತಿ ತಿಳಿದದ್ದು. ಹಾಗಾಗಿ ಯಾವುದೇ ಪ್ರವಾಸಿಗಳು ಲೇಡಿಬಾಯ್ಸ್ಗಳೊಂದಿಗೆ ತುಟಿಗೆ ತುಟಿ ತಾಗಿಸಿ ಮುದ್ದಿಸಬೇಡಿ ಎಂದು ಎಚ್ಚರಿಕೆ ಕೊಟ್ಟವರು ಅಲ್ಲಿನ ಪೋಲೀಸ್ ಲೆಪ್ಟಿನೆಂಟ್ ಕರ್ನಲ್ ಅಕಾಚಾಯಿ ಚಿರಾಚಾರೋನ್. ಪತ್ರಿಕಾಗೋಷ್ಠಿಯಲ್ಲಿ ಈ ಸಂಗತಿ ಹೊರಗೆಡಹಿದ ಆತ ಈ ಹಿಂದೆ ಲೇಡಿಬಾಯ್ಸ್ಗಳು ಸ್ತನಗಳ ತೊಟ್ಟಿಗೆ ದ್ರಾವಣ ತಾಗಿಸಿಕೊಂಡು ಪ್ರವಾಸಿಗಳಿಗೆ ಮತ್ತು ಬರಿಸಿ ದೋಚುತ್ತಿದ್ದರು, ಈಗ ತಮ್ಮ ವಿಧಾನ ಬದಲಿಸಿದ್ದಾರೆ ಎಂದು ಎಚ್ಚರಿಸಿದ್ದಾರೆ. ಅವರೊಂದಿಗೆ ಪಾನೀಯ ಸೇವಿಸುವಾಗಲೂ ಮತ್ತು ಬರಿಸುವ ಹುಡಿ ಬೆರೆಸುವ ಸಾಧ್ಯತೆ ಇದೆ ಎಂದೂ ಅವರೆನ್ನುತ್ತಾರೆ.

ಫಿಯಾನ್ಸಿ ವೀಸಾ ಕಥೆ
ಬ್ರಿಟೀಷ್ ಪ್ರವಾಸಿಯೊಬ್ಬ ಇಂತಹ ಲೇಡಿಬಾಯ್ ಒಬ್ಬಳನ್ನು ಹೆಣ್ಣೆಂದೇ ಗ್ರಹಿಸಿ ಪ್ರೀತಿಸಿದ. ಮದುವೆಯಾಗುವ ಎಂದ. ಆಕೆ ಒಪ್ಪಿದಾಗ ಆಕೆಗಾಗಿ ವಧುವೀಸಾ (ಫಿಯಾನ್ಸಿ ವೀಸಾ) ಪಡೆಯಲು ಬ್ರಿಟೀಷ್ ದೂತವಾಸಕ್ಕೆ ಕೊಂಡೊಯ್ದ. ಅಲ್ಲಿ ಅಧಿಕಾರಿಗಳು ಗಹಗಹಿಸಿ ನಕ್ಕುಬಿಟ್ಟರು. ಈತನ ಪಾಸ್ ಪೋರ್ಟ್ ನಲ್ಲಿ ಮಿಸ್ಟರ್ ಅಂತ ಇದೆಯೇ ಹೊರತು ಮಿಸ್ ಎಂತ ಇಲ್ಲವಲ್ಲ, ಫಿಯಾನ್ಸಿ ಆಗಬೇಕಾದರೆ ಹೆಣ್ಣು ಆಗಬೇಕೇ ಹೊರತು, ಗಂಡಿಗೆ ಅಂತಹ ವೀಸಾ ಕೊಟ್ಟಲ್ಲಿ ನಾವೇ ನಗೆಪಾಟಲಿಗೆ ಗುರಿಯಾಗಬೇಕಾದೀತಲ್ಲ ಎಂದವರು ಹೇಳಿದಾಗ ಅಲ್ಲಿದ್ದವರಿಗೆಲ್ಲಾ ನಗೆತಡೆಯಲಾಗಲಿಲ್ಲ. ತನ್ನ ಜೀವಮಾನದಲ್ಲೇ ಇಂತಹ ಅವಮಾನ ಅನುಭವಿಸದೇ ಇದ್ದ ಆ ಬ್ರಿಟೀಷ್ ಪ್ರವಾಸಿ ಆ ಲೇಡಿಬಾಯ್ನ್ನು ಓಡಿಸಿಕೊಂಡು ಹೋಗಿ ಒದ್ದ ಪರಿ ಕಂಡು ಉಳಿದವರು ಪಾಠ ಕಲಿಯಬೇಕಾಯಿತು.

ಪ್ರತಿಭೆಗೆ ಕಡಿಮೆ ಇಲ್ಲ
ಆದರೂ ಲೇಡಿಬಾಯ್ಸ್ಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭಾ ಪ್ರದರ್ಶನ ಮಾಡಿದವರಿದ್ದಾರೆ. ನಾಂಗ್ ಟುಂ ಎಂಬಾಕೆ ಬಾಕ್ಸರ್ ಚಾಂಪಿಯನ್ ಆಗಿ 1998ರಲ್ಲಿ ಪ್ರಸಿದ್ಧರಾದ ಲೇಡಿಬಾಯ್. ಸೋತ ಎದುರಾಳಿಯನ್ನು ಚುಂಬಿಸುವ ಹವ್ಯಾಸ ಇಟ್ಟುಕೊಂಡಾಕೆ. 1996ರಲ್ಲಿ ಐರನ್ ಲೇಡಿಸ್ ಎಂಬ ವಾಲಿಬಾಲ್ ತಂಡ ಬರೇ ಲೇಡಿಬಾಯ್ಸ್ ಮತ್ತು ಸಲಿಂಗಕಾಮಿಯರೊಂದಿಗೆ ಕೂಡಿ ರಾಷ್ಟ್ರೀಯ ಪ್ರಶಸ್ತಿ ಗೆದ್ದಿತ್ತು. ಆಗ ಎಚ್ಚೆತ್ತುಕೊಂಡ ಥಾಯಿ ಸರಕಾರ ಅಂತಾರಾಷ್ಟ್ರೀಯ ಸ್ಪಧರ್ೆಗೆ ಈ ತಂಡದಿಂದ ಅವರನ್ನು ಕಳಚಿಬಿಟ್ಟಿತ್ತು. ಇಂಗ್ಲೆಂಡಿನಲ್ಲೇ ಒಂದು ಸೌಂದರ್ಯ ಸ್ಪಧರ್ೆಯಲ್ಲಿ ಅಂಗಾಕೃಕತ್ (ತೂನ್) ಎಂಬಾಕೆ ತನ್ನ ಕಂದು ಕಂಗಳು, ನೀಳಕಾಯ ಮತ್ತು ಸುದೀರ್ಘ ಕೇಶರಾಶಿಯಿಂದ ತೀಪರ್ುಗಾರರಿಗೆ ಮೋಡಿ ಮಾಡಿ ಫೈನಲಿಗೇರಿದಾಗಲೇ ಆಕೆ ಆಕೆಯಲ್ಲ, ಆತ ಎಂತ ಗೊತ್ತಾದರೂ, ಸೌಂದರ್ಯ ಸೌಂದರ್ಯವೇ ಎಂದು ಹೇಳಿ ತೀಪರ್ುಗಾರರು ಫೈನಲಿಗೂ ಕಳುಹಿಸಿಬಿಟ್ಟರು. ಪಟ್ಟಾಯದಲ್ಲೇ ಮಿಸ್ ಟಿಫನಿ ಯುನಿವಸರ್್ ಎಂಬ ಲೇಡಿಬಾಯ್ಸ್ಗಳ ಸೌಂದರ್ಯ ಸ್ಪಧರ್ೆ ಪ್ರತೀವರ್ಷ ನಡೆಯುತ್ತಿರುತ್ತದೆ. ಲೇಡಿಬಾಯ್ಸಗಳ ಬಗ್ಗೆನೇ ಬಹಳಷ್ಟು ಚಲನಚಿತ್ರಗಳು ನಿಮರ್ಾಣವಾಗಿ ಜಗತ್ಪ್ರ್ಪಸಿದ್ಧವಾಗಿವೆ.

ಕಾನೂನು ಮಾನ್ಯತೆ ?
ಆದರೂ ಲೇಡಿಬಾಯ್ಸ್ಗಳಿಗೆ ಕಾನೂನಿನ ಮಾನ್ಯತೆ ಇಲ್ಲ. ಅವರೇನೇ ಶಸ್ತ್ರಚಿಕಿತ್ಸೆ ಮಾಡಿಕೊಂಡರೂ ಥಾಲ್ಯಾಂಡ್ನ ಕಾನೂನು ಅವರೆಲ್ಲರನ್ನೂ ಗಂಡು ಎಂದೇ ಪರಿಗಣಿಸುತ್ತದೆ. ಬಸವಳಿದ ಪ್ರವಾಸಿಗಳಿಗೆ ಸಾಂತ್ವನ, ತಂಪು, ಆಸರೆ, ಸುಖ, ಶಾಂತಿ ನೀಡಿ ಇಡೀ ದೇಶದ ಸಂಪತ್ತು ಹೆಚ್ಚಿಸುತ್ತಿರುವ ಈ ಲೇಡಿಬಾಯ್ಸ್ಗಳಿಗೆ ಮಾನ್ಯತೆ ನೀಡಬೇಕು ಎಂಬ ಚಳವಳಿ ನಡೆದಿದ್ದು, 2012ರಲ್ಲಿ ಥಾಲ್ಯಾಂಡ್ನ ಹೊಸ ಸಂವಿಧಾನದಲ್ಲಾದರೂ ಅವರಿಗೆ ಮಾನ್ಯತೆ ನೀಡುವ ನಿರೀಕ್ಷೆ ಇದೆ.

Leave a Reply

Your email address will not be published. Required fields are marked *

sixteen − fourteen =