ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕಾರಂತ ಥೀಮ್ ಪಾರ್ಕ್‌ಗೆ ಉಡುಪಿ ಜಿಲ್ಲಾ ಹೆಚ್ಚುವರಿ ಪೋಲಿಸ್ ಅಧೀಕ್ಷಕ ಕುಮಾರ್ ಚಂದ್ರ ಅವರು ಭೇಟಿ ನೀಡಿದರು.
ಭೇಟಿ ನೀಡಿ ಮಾತನಾಡಿದ ಪೋಲಿಸ್ ಅಧೀಕ್ಷಕ ಕುಮಾರ್ ಚಂದ, ಕಾರಂತರು ಯುವ ಜನಾಂಗಕ್ಕೆ ಮಾದರಿಯಾಗಿ ಬದುಕಿ ತೋರಿಸಿದ ಮಹಾ ಚೇತನ, ಅವರ ಬದುಕಿನ ಪುಟ ಮೇಲುಕು ಹಾಕಲು, ಅವರ ಬದುಕು – ಬರಹ ಮುಂದಿನ ಜನಾಂಗಕ್ಕೆ ಪರಿಚಯಿಸಲು ಕೋಟದ ಕಾರಂತ ಥೀಮ್ ಪಾರ್ಕ್ ಸಹಕಾರಿ ಎಂದು ಅವರು ಹೇಳಿದರು.
ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ಈ ಸ್ಥಳ ಒಂದು ಸುಂದರ ವೇದಿಕೆ ಎಂದರು. ಅವರು ಕಾರಂತರ ಪುತ್ಥಳಿಗೆ ಮಾಲಾರ್ಪಣೆ ಮಾಡಿ , ಆರ್ಟ್ ಗ್ಯಾಲರಿ, ಸಭಾಭವನ, ಗ್ರಂಥಾಲಯ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಪಿ. ಡಿ. ಓ ಶೈಲಾ ಎಸ್ ಪೂಜಾರಿ, ಗ್ರಂಥಾಲಯ ಮೇಲ್ವಿಚಾರಕಿ ಶೈಲಜ ಕೆ. ಎನ್ ಪ್ರವಾಸಿ ಮಿತ್ರ ಸುರೇಶ್ , ಥೀಮ್ ಪಾರ್ಕ್ ಸಿಬ್ಬಂದಿ ಸುಜಾತ ಅವರು ಉಪಸ್ಥಿತರಿದ್ದರು. ಥೀಮ್ ಪಾರ್ಕ್ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.