ದಕ್ಷಿಣ ಕನ್ನಡ ಜಿಲ್ಲಾ ಪರಿಷತ್‌ನ ಮಾಜಿ ಅಧ್ಯಕ್ಷ ಕೆ ಸಿ ಕುಂದರ್ ವಿಧಿವಶ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ದ.ಕ ಜಿಲ್ಲಾ ಪರಿಷತ್‌ನ ಮಾಜಿ ಅಧ್ಯಕ್ಷ ಕೋಟ ಎಂಬ ಗ್ರಾಮೀಣ ಭಾಗದಲ್ಲಿ ಉದ್ಯಮ ರಂಗವನ್ನು ಸ್ಥಾಪಿಸಿ ಕ್ರಾಂತಿ ಪಸರಿಸಿದ ಕೆ.ಸಿ ಕುಂದರ್ ಇಂದು ಬೆಳಿಗ್ಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

Click Here

Call us

Call us

1930 ಎಪ್ರೀಲ್ ನಾಲ್ಕರಂದು ಕೋಟದ ಸದಿಯಮ್ಮ ಚಿಕ್ಕಯ್ಯ ಸಾಹುಕಾರರ ಪ್ರಥಮ ಪುತ್ರರಾಗಿ ಜನಿಸಿದ ಕೆ.ಸಿ ಯವರು ರಾಜಕೀಯ ಕ್ಷೇತ್ರದಲ್ಲಿ ಗ್ರಾಮೀಣ ಭಾಗವಾದ ಕೋಟ ಪರಿಸರಕ್ಕೆ ಹೊಸ ದಿಕ್ಕನ್ನು ತೋರಿದ ಮೇರು ರಾಜಕಾರಣಿಯಾಗಿ ಉದ್ಯಮ ಲೋಕದಲ್ಲಿ, ಮೀನುಗಾರಿಕಾ ಕ್ಷೇತ್ರದಲ್ಲಿ , ಇತರ ಸಂಘ ಸಂಸ್ಥೆ ಹಾಗೂ ಹಲವು ದೇವಸ್ಥಾನದ ಟ್ರಸ್ಟಿಗಳಲ್ಲಿ ಅತ್ಯತ್ತಮವಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿ ತಮ್ಮ ಜೀವನದ್ದುದ್ದಕ್ಕೂ ಯಶಸ್ಸನ್ನು ಗಳಿಸಿಕೊಂಡವರು. ಆದರೆ ವರ್ಷ 80 ದಾಟಿದರೂ ಕೆಲಸ ಕಾರ್ಯದ ಹುಮ್ಮಸ್ಸು ಕಳೆಗುಂದದ ಜೀವನವೆನ್ನುವಂತ್ತಿತ್ತು ಇತ್ತೀಚಗಿನ ದಿನಗಳಲ್ಲಿ ಆರೋಗ್ಯದಲ್ಲಿ ಅನಾನುಕೂಲತೆ ಅವರನ್ನು ತನ್ನ ಕಾರ್ಯಕ್ಷೇತ್ರದಲ್ಲಿ ಹಿನ್ನಡೆ ಎಳೆಯುವಂತೆ ಮಾಡಿದೆ.ಕೆಲವು ದಿನಗಳಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗುರುವಾರ ಪೂರ್ವಾಹ್ನ ಹೃದಯಾಘಾತದಿಂದ ಇಹಲೋಕ ತೇಜಿಸಿದರು.

Click here

Click Here

Call us

Visit Now

ಶಿಕ್ಷಣ
ಚಿಕ್ಕಂದಿನಿಂದ ಚುರುಕು ಸ್ವಭಾವದ ಕೆ.ಸಿಯವರು ವಿದ್ಯಾಭ್ಯಾಸದಲ್ಲಿ ನೈಪುಣ್ಯತೆ ಹೊಂದಿದವರು. ಆಗಿನ ಕಾಲದಲ್ಲೆ ಪ್ರಾಥಮಿಕ ಶಿಕ್ಷಣ ಒಂದರಿಂದ ನಾಲ್ಕರ ವರೆಗೆ ಬಸ್ರೂರು ಹಿಂದೂ ಕಿರಿಯ ಪ್ರಾಥಮಿಕ ಶಾಲೆ,ನಾಲ್ಕರಿಂದ ಏಳರ ವರೆಗೆ ಕೋಟದ ಶಾಂಭವಿ ಶಾಲೆ ಗಿಳಿಯಾರು ನಂತರ ಪ್ರೌಡ ಶಿಕ್ಷಣವನ್ನು ೧೯೪೬ರಿಂದ೪೮ರವರೆಗೆ ಕಲ್ಯಾಣಪುರ ಮಿಲಾಗ್ರಿಸ್‌ನಲ್ಲಿ ಪೂರೈಸಿ ಶೆ/.೧೦೦ ಅಂಕ ಗಳಿಸಿ ಪ್ರಥಮ ದರ್ಜೇ ಉತ್ತಿರ್ಣರಾಗಿದ್ದವರು ಎಂಬುವುದು ಅವರ ಬಾಲ್ಯದ ಪ್ರೌಢ್ಯಿಮಿಗೆ ಸ್ಪಷ್ಟ ಸಾಕ್ಷಿ. ಆ ಬಳಿಕ ಅಂದಿನ ದಿನಗಳಲ್ಲಿ ಸಾಮಾನ್ಯರಾದವರು ಕನಸಿನಲ್ಲೂ ಎಣಿಸಲಾರದಷ್ಟು ದೂರದ ಮುಂಬೈ ಮಹಾನಗರಕ್ಕೆ ಉದ್ಯಮಾರ್ಥ ತೆರಳಿದ ಕೆ.ಸಿ ಯವರು ತಮ್ಮ ಹೆಚ್ಚಿನ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದರು.

ಇಂಡಿಯನ್ ಮರ್ಚಂಟ್ಸ್ ಚೆಂಬರ‍್ಸ್ ಮುಂಬೈಯಲ್ಲಿ ಕಮರ್ಷಿಯಲ್ ಎಜುಕೇಶನ್ ಇನ್ ಸ್ಪೇಷಲೈಸ್ಡ್ ಕಂಪನಿ ಸೆರ್ಕಟರಿಯಲ್ ಕೋರ್ಸ್, ಕಾರ್ಪೋರೇಶನ್ ಆಫ್ ಸೆಕರೆಟರಿಸ್ ಲಂಡನ್ ಮತ್ತು ಭಾರತ ಸರಕಾರದ ಕಂಪನಿ ಕಾನೂನು ಹಾಗೂ ಆಡಳಿತಾತ್ಮಕ ಇಲಾಖೆ ಅರ್ಥ ಸಚಿವಾಲಯ ನವದೆಹಲಿ ಇಲ್ಲಿ ಕಂಪನಿ ಸೆಕರೆಟರಿ ಮುಂತಾದ ಡಿಪ್ಲೋಮೊ ಕೋರ್ಸ್‌ಗಳನ್ನು ಡಿಸ್ಚಿಂಗ್‌ಶನ್ನಲ್ಲಿ ಮುಗಿಸಿದರು.ಹೀಗೆ ಸ್ವಾತಂತ್ಯ ಪೂರ್ವದಲ್ಲಿಯೇ ಗ್ರಾಮೀಣ ಪ್ರದೇಶದಲ್ಲಿ ಜನಿಸಿದರೂ ಕೆ.ಸಿ ಯವರು ಬಾಲ್ಯಾವಸ್ಥೆಯಿಂದಲೆ ವಿದ್ಯಾವಂತರಾಗಿ ಬುದ್ಧಿವಂತರಾಗಿ ಕೆಸರಲ್ಲರಳಿದ ಕಮಲದಂತೆ ಜೀವದಲ್ಲಿ ಯಶಸ್ಸಿನ ಎತ್ತರಕ್ಕೆರಿದರು.

ಸಾಮಾಜಿಕ ರಂಗ
ಉಡುಪಿ ತಾಲೂಕು ಅಭಿವೃದ್ಧಿ ಬೋರ್ಡ್‌ನ ಅಧ್ಯಕ್ಷರಾಗಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷರಾಗಿ,ನಿರ್ದೇಶಕರಾಗಿ, ದಕ್ಷಣ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನಿರ್ದೇಶಕರಾಗಿ,ಮಣೂರು ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾಗಿ,ಕೋಟ ಸಿ ಎ ಬ್ಯಾಂಕಿನ ಶಾಖಾ ಅಧ್ಯಕ್ಷರಾಗಿ,ಕೇಂದ್ರ ಹಾಗೂ ರಾಜ್ಯ ಮೀನುಗಾರಿಕಾ ಸಲಹಾ ಸಮಿತಿಯ ಸದಸ್ಯರಾಗಿ,ದ.ಕ ಜಿಲ್ಲಾ ಪರಿಷತ್ ಪ್ರಥಮ ಅಧ್ಯಕ್ಷರಾಗಿ,ಮಂಗಳೂರು ವಿಶ್ವವಿದ್ಯಾನಿಲಯ ಸೆನೆಟ್ ಸದಸ್ಯರಾಗಿ ಹಾಗೂ ಅಕಾಡೆಮಿಕ್ ಕೌಸ್ಸಿಲ್‌ನ ಸದಸ್ಯರಾಗಿ ಹೀಗೆ ಹಲವಾರು ಸಾಮಾಜಿಕ ರಂಗದ ಸಂಘ ಸಂಸ್ಥೆಗಳಲ್ಲಿ ಗುರುತರ ಹೊಣೆಗಾರಿಕೆಯನ್ನು ಹೊತ್ತು ಸಮರ್ಥವಾಗಿ ಕಾರ್ಯನಿರ್ವಹಿದರು ಅಲ್ಲದೆ ಮಹಾಲಕ್ಷ್ಮಿ ಕೋ.ಆಪ್‌ರೇಟಿವ್ ಬ್ಯಾಂಕ್ ಲಿ.,ಅರ್ಬನ್ ಬ್ಯಾಂಕ್ ಕವರಿಂಗ್ ಮಂಗಳೂರು,ಉಡುಪಿ ಕುಂದಾಪುರ ತಾಲೂಕುಗಳ ಅಧ್ಯಕ್ಷರಾಗಿ,ಕರ್ನಾಟಕ ಮೀನುಗಾರರ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ ,ಕರ್ನಾಟಕ ಕರಾವಳಿ ಐಸ್‌ಪ್ಲಾಂಟ್ ಮತ್ತು ಕೋಲ್ಡ್ ಸ್ಟೋರೇಜ್ ಮಾಲಕ ಸಂಘದ ಅಧ್ಯಕ್ಷರಾಗಿ,ಅಖಿಲ ಕರ್ನಾಟಕ ಮೀನುಗಾರರ ಪರಿಷತ್‌ನ ಉಪಾಧ್ಯಕ್ಷರಾಗಿ, ಕೋಟದ ಜನತಾ ಫಿಶರೀಸ್‌ನ ಪಾಲುದಾರರಾಗಿ, ಗ್ರಾಮವಿಕಾಸ ಕೇಂದ್ರ ಕೋಟ ಇದರ ಸ್ಥಾಪಕ ಅಧ್ಯಕ್ಷರಾಗಿ, ಶ್ರೀ ಅಮೃತೇಶ್ವರಿ ದೇವಸ್ಥಾನ ಮತ್ತು ಮಹಾಸತೀಶ್ವರಿ ದೇವಸ್ಥಾನ ಬೆಣ್ಣೆಕುದ್ರು ಇದರ ಟ್ರಸ್ಟಿಯಾಗಿ ,ಪ್ರದೇಶ ಕಾಂಗ್ರೇಸ್ ಸಮಿತಿಯ ಸದಸ್ಯರಾಗಿ, ಬಗ್ವಾಡಿ ಹೊಬಳಿ ಮೊಗವೀರ ಸಮಾಜ ಸಂಘ ಮುಂಬೈ ಇದರ ಖಜಾಂಚಿಯಾಗಿ ಮತ್ತು ಕಾರ್ಯದರ್ಶಿಯಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ ಹೆಗ್ಗಳಿಕೆಗೆ ಕೆ ಸಿಯವರು ಪಾತ್ರರಾಗಿದ್ದಾರೆ.ಹೀಗೆ ಹಲವಾರು ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಗೊಂಡ ಕೆ.ಸಿ ಯವರು ಇದೀಗ ತಮ್ಮ 87 ಪರಿಮೂರ್ಣ ಜೀವನವನ್ನು ಮುಗಿಸಿ ಇಹಲೋಕಕ್ಕೆ ಪಯಣ ಬೆಳೆಸಿರುವುದು ಸಮಾಜಕ್ಕೆ ತುಂಬಲಾರದ ನಷ್ಟವೇ ಸರಿ. ಕೆ ಸಿ ಕುಂದರ್ ಎಂದರೆ ಕೃಷ್ಣ ಚಿಕ್ಕಯ್ಯ ಕುಂದರ್ ಇವರು ಪತ್ನಿ, ಪುತ್ರ ,ಪುತ್ರಿ, ಸೇರಿದಂತೆ ಸಹೋದರ ಕೋಟದ ಪ್ರಖ್ಯಾತ ಉದ್ಯಮಿ ಕೊಡುಗೈ ದಾನಿ ಆನಂದ್ ಸಿ ಕುಂದರ್ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.  ಕೋಟದಲ್ಲಿ ಜನತಾ ಫಿಶ್‌ಮಿಲ್ ಎಂಬ ಸಂಸ್ಥೆ ಕಟ್ಟಿದವರು.

Call us

ಉದ್ಯಮ ರಂಗದಲ್ಲಿ ತನ್ನ ಸಾಹಸಮಯ ಜೀವನದ ಯಶೋಗಾಧೆ ತುಳಿದ ಗ್ರಾಮೀಣ ಮತ್ಸ್ಯೋದ್ಯಮಿ ಎಂದರೆ ತಪ್ಪಾಗಲಿಕ್ಕಿಲ್ಲ ಕೋಟ ಎಂಬ ಪರಿಸರದಲ್ಲಿ ಫಿಶ್‌ಮಿಲ್ ಸ್ಥಾಪಿಸಿ ಆಗಿನ ಕಾಲದಲ್ಲಿ ಒಂದಿಷ್ಟು ಯುವ ಸಮೂದಾಯಕ್ಕೆ ಉದ್ಯೋಗದ ದಾರಿ ತೋರಿದವರು. ನಂತರದ ದಿನಗಳಲ್ಲಿ ಕಾರ್ಯದ ಒತ್ತಡದಿಂದ ತನ್ನ ಸಹೋದರ ಎ.ಸಿ ಕುಂದರ್ ರವರಿಗೆ ವ್ಯವಹಾರಿಕಾವಾಗಿ ಹತ್ತಾಂತರಿಸಿದರು. ಆಗಾಗ ಜನತಾಗೆ ಬೇಟಿ ನೀಡಿ ತನ್ನ ಸಹೋದರನಿಗೆ ಬೆನ್ನೆಲುಬಾಗಿ ನಿಂತದ್ದು ಮತ್ತೋಂದು ವಿಶೇಷ.

 

Leave a Reply

Your email address will not be published. Required fields are marked *

19 − ten =