ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟ ರಾಜ್ಯದಲ್ಲಿಯೇ ಮೂಂಚೂಣಿಯಲ್ಲಿದೆ: ಕೆ. ರವಿರಾಜ ಹೆಗ್ಡೆ

Call us

Call us

ಕುಂದಾಪ್ರ ಡಾ ಕಾಂ ಸುದ್ದಿ.
ಕುಂದಾಪುರ: ಪ್ರಗತಿಪರ ವೈರುದ್ಯಗಳ ನಡುವಿನಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟ ರಾಜ್ಯಕ್ಕೆ ಪ್ರಥಮ ಹಾಗೂ ರಾಷ್ಟ್ರದಲ್ಲಿ ೨ನೇ ಸ್ಥಾನದಲ್ಲಿದ್ದೇವೆ ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷರಾದ ಕೊಡವೂರು ರವಿರಾಜ ಹೆಗ್ಡೆಯವರು ತಿಳಿಸಿದರು.

Call us

Call us

Visit Now

ಕುಂದಾಪುರ ರಾಮ ಮಂದಿರದ ಸಭಾ ಭವನದಲ್ಲಿ ನಡೆದ ಕುಂದಾಪುರ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿ ಈ ಹಿಂದಿನಂತೆ ವಿವಿಧ ತಾಂತ್ರಿಕ ಸೌಲಭ್ಯಗಳಿಗೆ ಅನುದಾನ ಮುಂದುವರಿಸಿದ್ದು ಇದಲ್ಲದೆ ರೈತ ಕಲ್ಯಾಣ ಟ್ರಸ್ಟ್ ಮೂಲಕ ಜಾನುವಾರು ಹಾಗೂ ಉತ್ಪಾದಕ ಸದಸ್ಯರು ಮರಣ ಹೊಂದಿದಾಗ, ಉತ್ಪಾದಕ ಸದಸ್ಯರು ಆಸ್ಪತ್ರೆಗೆ ದಾಖಲಾಗಿ ಆದ ವೆಚ್ಚದ ಬಾಬ್ತು ಆರ್ಥಿಕ ಸಹಾಯ ನೀಡುತ್ತಿದೆ ಅಲ್ಲದೆ ೧೦೦೦೦ ಜಾನುವಾರುಗಳನ್ನು ವಿಮೆಗೊಳಪಡಿಸುವ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

Click here

Call us

Call us

ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷರು ಶ್ರೀ ಪ್ರಕಾಶ್ಚಂದ್ರ ಶೆಟ್ಟಿ ವ್ಯವಸ್ಥಾಪನ ನಿರ್ದೇಶಕರಾದ ಡಾ. ಜಿ.ವಿ ಹೆಗ್ಡೆಯವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿರ್ದೇಶಕರುಗಳಾದ ಹದ್ದೂರು ರಾಜೀವ ಶೆಟ್ಟಿ, ಜಗಧೀಶ ಕಾರಂತ, ಕಾಪು ದಿವಾಕರ ಶೆಟ್ಟಿ, ಮುಡೂರು ಸುಧಾಕರ ಶೆಟ್ಟಿ, ಸ್ಮಿತಾ ಶೆಟ್ಟಿ, ಸಾಣೂರು ನರಸಿಂಹ ಕಾಮತ್, ವ್ಯವಸ್ಥಾಪಕ ಡಾ. ನಿತ್ಯಾನಂದ ಭಕ್ತ, ಉಪ ವ್ಯವಸ್ಥಾಪಕರಾದ ಡಾ. ಮನೋಹರ್, ಡಾ.ಅನಿಲ್ ಕುಮಾರ್, ವಿಸ್ತರಣಾಧಿಕಾರಿ ವಾಸುದೇವ ಪುರಾಣಿಕ, ರಾಜರಾಮ, ಉಮೇಶ್ ಕುಂದರ್ ಉಪಸ್ಥಿತರಿದ್ದರು, ನಿರ್ದೇಶಕರಾದ ಹದ್ದೂರು ರಾಜೀವ ಶೆಟ್ಟಿ ಸ್ವಾಗತಿಸಿ ಸಹಾಯಕ ವ್ಯವಸ್ಥಾಪಕರಾದ ಸುಧಾಕರ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

eleven − four =