ದಿ. ಬೀಜಾಡಿ ನಾರಾಯಣ ಉಪಾಧ್ಯರ ಸಂಸ್ಮರಣ ಪ್ರಶಸ್ತಿ ಪ್ರಧಾನ ಸಮಾರಂಭ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಚಂದನ ಯುವಕ ಮಂಡಲ ಬೀಜಾಡಿ ಗೋಪಾಡಿ ಇವರ ೧೮ನೇ ವರ್ಷದ ವಾರ್ಷಿಕೋತ್ಸವ ಹಾಗೂ ದಿ.ಬೀಜಾಡಿ ನಾರಾಯಣ ಉಪಾಧ್ಯರ ಸಂಸ್ಮರಣ ಪ್ರಶಸ್ತಿ ಪ್ರಧಾನ ಸಮಾರಂಭ ಬೀಜಾಡಿ ಪೂಜಾ ಟೈಲ್ಸ್ ಅವರಣದಲ್ಲಿ ಜರುಗಿತು.

Call us

Call us

ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಹಂದಕುಂದ ಅಶೋಕ್ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ರಥಶಿಲ್ಪಿ ರಾಜಗೋಪಾಲ ಆಚಾರ್ಯ, ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಪ್ರಭಾಕರ ಶೆಟ್ಟಿ, ಚಂದನ ಯುವಕ ಮಂಡಲದ ಅಧ್ಯಕ್ಷ ಮಹೇಶ್ ಚಂದನ್, ಕಾರ್ಯದರ್ಶಿ ಗಣೇಶ್ ಆಚಾರ್ ಉಪಸ್ಥಿತರಿದ್ದರು.

Call us

Call us

ಇದೇ ಸಂದರ್ಭದಲ್ಲಿ ಯಕ್ಷಲೋಕ ತಿರುಗಾಟದಲ್ಲಿ ೫ ದಶಕಗಳ ಕಾಲ ಸೇವೆ ಸಲ್ಲಿಸಿದ ಬಡಗುತಿಟ್ಟಿನ ಖ್ಯಾತ ಹಾಸ್ಯ ಯಕ್ಷ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ ಇವರಿಗೆ ದಿ.ಬೀಜಾಡಿ ನಾರಾಯಣ ಉಪಾಧ್ಯರ ಸಂಸ್ಮರಣ ಪ್ರಶಸ್ತಿ ಪ್ರಧಾನ ಮಾಡಿ ನಗದು ಪುರಸ್ಕಾರ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ಗಿರಿಧರ ಉಪಾಧ್ಯ ಪ್ರಾಸ್ತಾವಿಕ ಮಾತನಾಡಿದರು. ಗೋಪಾಳ ಮಡಿವಾಳ ಸ್ವಾಗತಿಸಿದರು. ಗೋಪಿರಾಜ್ ಕಾರ‍್ಯಕ್ರಮ ನಿರೂಪಿಸಿದರು. ಶ್ರೀಧರ ಉಡುಪ ವಂದಿಸಿದರು. ಸಭಾ ಕಾರ‍್ಯಕ್ರಮ ಬಳಿಕ ಯುವಕ ಮಂಡಲದ ಸದಸ್ಯರಿಂದ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *

18 − 4 =