ದುಬೈಯಲ್ಲಿ ಬಸವರಾಜ್ ಶೆಟ್ಟಿಗಾರ್‌ರವರಿಗೆ ಸನ್ಮಾನ

Call us

Call us

ಕುಂದಾಪುರ:  ದುಬೈನ ಯುನೈಟೆಡ್ ಅರಬ್ ಎಮಿರೇಟ್ಸ್ ಪದ್ಮಶಾಲಿ ಸಮುದಾಯದ ಕನ್ನಡಿಗರ ಸಂಘದ ವತಿಯಿಂದ ಇತ್ತೀಚೆಗೆ ಸಿಂಧ್ ಸೆಂಟರ್ ಹಾಲ್‌ನಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಪೌರೋಹಿತ್ಯವನ್ನು ಮಾಡಿ ಹಾಗೂ ಧಾರ್ಮಿಕ ಪ್ರವಚನ ನೀಡಿದ ವಾಸ್ತುತಜ್ಞ, ಜ್ಯೋತಿಷಿ ಬಸವರಾಜ್ ಶೆಟ್ಟಿಗಾರರಿಗೆ ೨೧೫ನೇ ಸನ್ಮಾನ ಅದ್ಧೂರಿಯಾಗಿ ಜರಗಿತು.

Call us

Call us

ಅಧ್ಯಕ್ಷರಾದ ರವಿ ಕಾರ್ಕಳ್‌ರವರು ಶೆಟ್ಟಿಗಾರರನ್ನು ಸನ್ಮಾನಿಸಿ ಮಾತನಾಡುತ್ತಾ ಸಾಮಾನ್ಯವಾಗಿ ಪ್ರತಿಯೊಬ್ಬರು ಯಾವುದಾದರು ಒಂದೇ ರಂಗದಲ್ಲಿ ಸಾಧನೆ ಮಾಡುವವರನ್ನು ಕಾಣಬಹುದು. ಆದರೆ ಬಸವರಾಜರು ವಾಸ್ತುಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಧಾರ್ಮಿಕ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ಯಕ್ಷಗಾನರಂಗ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪದ್ಮಶಾಲಿ ಸಮಾಜದ ಅನರ್ಘ್ಯರತ್ನರಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.

Call us

ಶಾರ್ಜದ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ಗಣೇಶ್ ರೈಯವರು ಮಾತನಾಡುತ್ತಾ ಕೇರಳದಲ್ಲಿ ಪಾಂಡಿತ್ಯವನ್ನು ಅರ್ಜಿಸಿಕೊಂಡ ಶೆಟ್ಟಿಗಾರರ ಪೌರೋಹಿತ್ಯದಲ್ಲಿ ನಡೆದ ಸತ್ಯನಾರಾಯಣ ಪೂಜೆ ಹಾಗೂ ತಾಳಮದ್ದಲೆಯ ಅರ್ಥದಂತೆ ಮಾಡಿದ ಕಥಾರೂಪಕ ನಭೂತೋ ನಭವಿಷ್ಯತಿ ಎಂಬಂತೆ ಯಶಸ್ವಿಯಾಗಿದ್ದು ನನ್ನ ಜೀವನದಲ್ಲಿ ಇಂತಹ ಸಂಪ್ರದಾಯಬದ್ಧ ಪೂಜೆಯನ್ನು ನೋಡಿದ್ದು ಜನ್ಮಸಾರ್ಥಕ್ಯವನ್ನು ಪಡೆದುಕೊಂಡ ಅನುಭವವಾಗಿದೆ. ಶೆಟ್ಟಿಗಾರರು ವಿಶ್ವಮಿತ್ರನಂತೆ ಛಲವನ್ನು ಇರಿಸಿಕೊಂಡು ಬ್ರಹ್ಮಜ್ಞಾನವನ್ನು ಅರ್ಜಿಸಿಕೊಂಡಿರುವುದು ಪದ್ಮಶಾಲಿ ಸಮಾಜಕ್ಕೆ ಹೆಮ್ಮೆ ತಂದಂತಾಗಿದೆ ಎಂದು ಶುಭಹಾರೈಸಿದರು.

ಬಸವರಾಜ್ ಶೆಟ್ಟಿಗಾರರು ಸನ್ಮಾನಕ್ಕೆ ಉತ್ತರಿಸುತ್ತ – ನನ್ನ ಜೀವನದಲ್ಲಿ 200ಕ್ಕೂ ಮಿಕ್ಕಿ ಸನ್ಮಾನ ನಡೆದಿರಬಹುದು. ಆದರೆ ಬಹುಜನರ ಅಪೇಕ್ಷೆಯ ಮೇರೆಗೆ ಪೌರೋಹಿತ್ಯದ ಉಡುಗೆಯಲ್ಲೇ ಸನ್ಮಾನ ಪಡೆದಿರುವುದು ಪ್ರಥಮವಾಗಿದೆ. ಈ ಸನ್ಮಾನವನ್ನು ಹಲವು ರಂಗದಲ್ಲಿ ವಿದ್ಯೆ ನೀಡಿದ ದ್ವಾದಶ ಆದಿತ್ಯರಂತೆ ರಾರಾಜಿಸುವ ಗುರುಗಳ ಸಿರಿಚರಣಕ್ಕೆ ಅರ್ಪಿಸುತ್ತೇನೆಂದು ಧನ್ಯತಾಃ ಭಾವದಿಂದ ಹೇಳಿದರು.

ಸಮಾರಂಭದಲ್ಲಿ ಜೈನ್‌ಮಿಲನ್‌ನ ಉಪಾಧ್ಯಕ್ಷ ಸಂದೇಶ್ ಜೈನ್, ದುಬೈಯ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ, ಮೊಗವೀರ ಸಂಘದ ಉಪಾಧ್ಯಕ್ಷ ಬಾಲ ಸಾಲಿಯಾನ್, ಶಾರ್ಜ ಕರ್ನಾಟಕ ಸಂಘದ ಅಧ್ಯಕ್ಷ ಶಾಂತಾರಾಮ ಆಚಾರ್ಯ, ನಾರಾಯಣ ಸೇವಾ ಸಮಿತಿಯ ಗಿರಿಧರ್ ನಾಯಕ್, ವಿಶ್ವಕರ್ಮ ಸಂಘದ ಅಧ್ಯಕ್ಷ ಪ್ರಶಾಂತ್ ಆಚಾರ್ಯ, ಅಮ್ಚೇಗಲ್ ಸಮಾಜ ಸಂಘದ ಮಾಜಿ ಅಧ್ಯಕ್ಷ ಶೈಲೇಶ್ ಶೆಣೈ ಉಪಸ್ಥಿತರಿದ್ದು ಶುಭ ಹಾರೈಸಿದರು.

ಪದ್ಮಶಾಲಿ ಸಮುದಾಯದ ಕಾರ್ಯದರ್ಶಿ ಸಚೀಂದ್ರನಾಥ್ ಸ್ವಾಗತಿಸಿದರು. ಉಪಾಧ್ಯಕ್ಷ ಶುಭಕರ್ ವಕ್ವಾಡಿ, ಶ್ರೀಮತಿ ಅರುಂಧತಿ, ರಘುರಾಮ್ ಕುಕ್ಕೆಕಟ್ಟೆ ಅತಿಥಿಗಳನ್ನು ಗೌರವಿಸಿದರು. ಡಾ| ಪದ್ಮನಾಭ ಮಿಜಾರ್ ಕಾರ್ಯಕ್ರಮ ನಿರೂಪಿಸಿದರೆ, ಕೀರ್ತಿಕುಮಾರ್ ವಂದಿಸಿದರು.

Leave a Reply

Your email address will not be published. Required fields are marked *

3 × five =