ದೇವಬಂಧು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನೆ

ಕುಂದಾಪುರ: ಸಂಘ-ಸಂಸ್ಥೆಯನ್ನು ಬೆಳೆಸುವುದಷ್ಟೇ ಅಲ್ಲದೇ, ಸಮಾಜದ ಬಡವರ ಕುರಿತು ಕಳಕಳಿಯನ್ನು ಹೊಂದಿ ಅವರನ್ನು ಪ್ರೋತ್ಸಾಹಿಸುವುದು ಕೂಡ ಮುಖ್ಯವಾಗುತ್ತದೆ ಎಂದು ಸಹಕಾರಿ ಯೂನಿಯನ್ ನ ಅಧ್ಯಕ್ಷ ಕಿಶನ್‌ಕುಮಾರ್ ಹೆಗ್ಡೆ ಕೊಳ್ಕೆಬೈಲು ಹೇಳಿದರು.

ಅವರು ಕೋಟೇಶ್ವರದ ಅಂಬಿಕಾ ಬಿಲ್ಡಿಂಗ್‌ನಲ್ಲಿ ನೂತನವಾಗಿ ಆರಂಭಗೊಂಡ ದೇವಬಂಧು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಭಾ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು.

ದೇಶಕ್ಕೆ ಕಾನೂನು ಸಚಿವರು, ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ಕೊಟ್ಟದ್ದು ದೇವಾಡಿಗ ಸಮಾಜ ಎಂದ ಅವರು, ದೇವಬಂಧು ಸಹಕಾರಿ ಸಂಘ ಆರಂಭದಲ್ಲಿಯೇ ಅತೀ ಹೆಚ್ಚು ಸದಸ್ಯರನ್ನೊಳಗೊಂಡು ಆರಂಭಗೊಳ್ಳುತ್ತಿರುವುದು ದಾಖಲೆಯೇ ಸರಿ ಎಂದರು.

ವಿಧಾನ ಪರಿಷತ್ ಸದಸ್ಯ ದೇವಬಂಧು ಸಹಕಾರಿ ಸಂಘದ ಕಟ್ಟಡವನ್ನು ಲೋಪಾರ್ಪಣೆಗೊಳಿಸಿದರು. ಪಂಚಗಂಗಾವಳಿ ಸಹಕಾರಿ ಸಂಘದ ಅಧ್ಯಕ್ಷರಾದ ರಾಜು ದೇವಾಡಿಗ ಠೇವಣಿ ಪ್ರಮಾಣಪತ್ರವನ್ನು ವಿತರಿಸಿದರು. ಜಿಲ್ಲಾ ಪಂಚಯತ್ ಸದಸ್ಯ ಗಣಪತಿ ಶ್ರೀಯಾನ್ ಗಣಕಯಂತ್ರ ಉದ್ಘಾಟಿಸಿದರು. ಕೊಳ್ಕೆಬೈಲು ಕಿಶನ್‌ಕುಮಾರ್ ಹೆಗ್ಡೆ ಭದ್ರತಾಕೋಶವನ್ನು ಉದ್ಘಾಟಿಸಿದರು. ಅರಣ್ಯ ಇಲಾಖೆಯ ನೌಕರರ ಮಹಾಮಂಡಲದ ಅಧ್ಯಕ್ಷ ಆಲೂರು ರಘುರಾಮ ದೇವಾಡಿಗ ಸ್ವಸಹಾಯ ಗುಂಪುಗಳನ್ನು ಉದ್ಘಾಟಿಸಿದರು.

ಅತಿಥಿಗಳಾಗಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ, ಬೀಜಾಡಿ ಗ್ರಾ.ಪಂ ಸದಸ್ಯ ರವೀಂದ್ರ ದೊಡ್ಮನೆ,  ಉದ್ಯಮಿ ಮೋಹನದಾಸ್ ಹಿರಿಯಡಕ, ತಲ್ಲೂರು ಸಪ್ತಸ್ವರ ವಿವಿದ್ದೋದ್ದೇಶ ಸಂಘದ ಸಂಜೀವ ದೇವಾಡಿಗ, ಬಾರ್ಕೂರು ಏಕನಾಥೇಶ್ವರಿ ಪ್ರಚಾರ ಸಮಿತಿಯ ನರಸಿಂಹ ದೇವಾಡಿಗ, ಗೌರವಾಧ್ಯಕ್ಷ ಅಣ್ಣಯ್ಯ, ಕುಂದಾಪುರ ದೇವಾಡಿಗ ಸಂಘದ ಅಧ್ಯಕ್ಷ ನಾರಾಯಣ ದೇವಾಡಿಗ, ರುದ್ರ ದೇವಾಡಿಗ, Pವಟ್ಟಡದ ಮಾಲಿಕರಾದ ದಿನೇಶ ದೇವಾಡಿಗ, ಸಂಘದ ನಿರ್ದೇಶಕರು ಹಾಗೂ ಇತರರು ಉಪಸ್ಥಿತರಿದ್ದರು.

ದೇವಬಂಧು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷರಾದ ಶಂಕರ ದೇವಾಡಿಗ ಅಂಕದಕಟ್ಟೆ ಸ್ವಾಗತಿಸಿದರು. ರಮೇಶ್ ದೇವಾಡಿಗ ನಿರೂಪಿಸಿದರು.

_MG_7514 _MG_7477 _MG_7483 _MG_7498 _MG_7527

Leave a Reply

Your email address will not be published. Required fields are marked *

thirteen + 16 =