ದೇವಾಡಿಗ ಸಂಘಕ್ಕೆ 90ರ ಸಂಭ್ರಮ, ಸಾಧಕರಿಗೆ ಪ್ರಶಸ್ತಿ

Call us

Call us

ಮುಂಬಯಿ: ದೇವಾಡಿಗ ಸಂಘ ಮುಂಬಯಿ ಇದರ 90ನೇ ವಾರ್ಷಿಕೋತ್ಸವ ಸಮಾರಂಭವು ಎ. 18 ಮತ್ತು 19ರಂದು ನವಿಮುಂಬಯಿ ನೆರೂಲ್‌ನ ದೇವಾಡಿಗ ಭವನದಲ್ಲಿ ಅದ್ದೂರಿಯಾಗಿ ಜರಗಲಿದೆ.

Call us

Call us

Visit Now

ಈ ಬಗ್ಗೆ ನಗರದ ದಾದರ್‌ನಲ್ಲಿರುವ ದೇವಾಡಿಗ ಸಂಘದ ಕಾರ್ಯಾಲಯದಲ್ಲಿ ಸಂಘದ ಗಣ್ಯರ ಉಪಸ್ಥಿತಿಯಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ದೇವಾಡಿಗ ಸಂಘದ ನಿಕಟ ಪೂರ್ವ ಅಧ್ಯಕ್ಷ ಹಿರಿಯಡ್ಕ ಮೋಹನ್‌ದಾಸ್‌ ಅವರು ಸಂಘದ ಸ್ಥಾಪಕರನ್ನು ಸ್ಮರಿಸಿದರಲ್ಲದೆ, 2007ರ ಸಮಯದಲ್ಲಿ ಧರ್ಮಪಾಲ… ದೇವಾಡಿಗರ ಅಧ್ಯಕ್ಷೀಯ ಅವಧಿಯಲ್ಲಿ ದೇವಾಡಿಗ ಭವನ ನಿರ್ಮಾಣಗೊಂಡಿದ್ದು ಸಂಘಟನೆಯಲ್ಲಿ ಒಂದು ಉತ್ತಮ ಬದಲಾವಣೆಯಾಗಿದೆ ಎಂದರು. ಮುಂಬಯಿಯಲ್ಲಿ ಮಾತ್ರವಲ್ಲದೆ ತವರೂರಲ್ಲೂ ಈ ಸಂಘದ ಮೂಲಕ ಆರೋಗ್ಯ ಮಾಹಿತಿ ಶಿಬಿರವನ್ನು ಪ್ರಾರಂಭಿಸಲಾಗಿದೆ. 2010 – 11ರಲ್ಲಿ ಅಲ್ಪಾವಧಿಯಲ್ಲೇ ಹತ್ತು ಸ್ಥಳೀಯ ಸಮಿತಿಯನ್ನು ಸ್ಥಾಪಿಸಿ ಸಂಘದ ಕಾರ್ಯಕರ್ತರು ಸದಸ್ಯರ ಮನೆಗೆ ತಲಪಿ ತಮ್ಮ ಸಮಸ್ಯೆಗೆ ಸ್ಪಂದಿಸುವಂತಾಗಿದೆ. ಪ್ರತೀ ವರ್ಷ ಸಮಾಜದ 5 – 6 ಅರ್ಹ ಮಕ್ಕಳನ್ನು ಈ ಸಂಸ್ಥೆ ಶಿಕ್ಷಣಕ್ಕಾಗಿ ದತ್ತು ಸ್ವೀಕರಿಸುತ್ತಿರುದನ್ನು ಪತ್ರಕರ್ತರ ಗಮನಕ್ಕೆ ತರಲಾಯಿತು. ನಮ್ಮ ಉದ್ದೇಶವು ಯುವ ಪೀಳಿಗೆಯನ್ನು ತಲುಪಲು ದೇವಾಡಿಗ ಅಧಿವೇಶನದಲ್ಲಿ ವಿಷನ್‌ – 2025 ಅನ್ನು ಮಾಲತಿ ವಿ. ಮೊಲಿ ಅವರ ಹಸ್ತದಿಂದ ಎ. 19ರಂದು ಉದ್ಘಾಟಿಸಲಿದ್ದೇವೆ. ಸಮಾಜದ ಪ್ರತಿ ಮಕ್ಕಳು ಶೈಕ್ಷಣಿಕವಾಗಿ ಕನಿಷ್ಠ ಪದವಿಯನ್ನಾದರೂ ಪಡೆಯಬೇಕು ಎಂಬುದು ನಮ್ಮ ಉದ್ದೇಶ ಎಂದ ಅವರು, ಮನೆಯಲ್ಲಿರುವ ಮಹಿಳೆಯರ ಆರೋಗ್ಯ ರಕ್ಷಣೆಗೆ ಸೂಕ್ತ ಉಪಾಯವನ್ನು ಕೈಗೊಳ್ಳುವುದರೊಂದಿಗೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನವೂ ನಮ್ಮದಾಗಿದೆ ಎಂದರು.

Click here

Call us

Call us

ಮಾಜಿ ಕೇಂದ್ರ ಸಚಿವ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಲಿ ಅವರ ಹಸ್ತದಿಂದ ಪ್ರಶಸ್ತಿ ವಿತರಣಾ ಸಮಾರಂಭವು ನಡೆಯಲಿದೆ. ಸಮಾಜದ 9 ಮಂದಿ ಯಶಸ್ವೀ ಉದ್ಯಮಿಗಳಿಗೆ ಉದ್ಯೋಗ ರತ್ನ ಪ್ರಶಸ್ತಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ 16 ಮಂದಿಗೆ ದೇವಾಡಿಗ ಶ್ರೀ, ನಾಲ್ಕು ಮಂದಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ದೇವಾಡಿಗ ಕ್ರೀಡಾ ಭೂಷಣ, ಇತರ ಸಮಾಜದ ಐವರು ಸಾಧಕರಿಗೆ ದೇವಾಡಿಗ ಸನಿ¾ತ್ರ, 8 ಮಂದಿಗೆ ಸಾಧನ ಪ್ರಶಸ್ತಿ, 65 ವರ್ಷಕ್ಕಿಂತ ಹಿರಿಯರಾದ ಸಂಘದ ಮಾಜಿ ಅಧ್ಯಕ್ಷರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು.

ವಿವಿಧ ಗೋಷ್ಠಿಯಲ್ಲಿ ಸೆಲೆಬ್ರೇಶನ್‌ ಸಮಿತಿ ಕಾರ್ಯಾಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ಅಧ್ಯಕ್ಷ ವಾಸು ಎಸ್‌. ದೇವಾಡಿಗ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಎ. ದೇವಾಡಿಗ, ಗೋಪಾಲ ಮೊಲಿ, ಗಣೇಶ್‌ ಶೇರಿಗಾರ್‌, ಮೋಹನದಾಸ್‌ ಅತ್ತಾವರ್‌, ಕೆ. ಎನ್‌. ದೇವಾಡಿಗ, ರವಿ ದೇವಾಡಿಗ, ಅಶೋಕ್‌ ತಿಮ್ಮಪ್ಪ ದೇವಾಡಿಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

fifteen − eight =