ದೇವಾಡಿಗ ಸಂಘ: ಸಮಾಜದ ಗ್ರಾ.ಪಂ. ಸದಸ್ಯರುಗಳಿಗೆ ಅಭಿನಂದನೆ

Call us

ಗ್ರಾ.ಪಂ. ಪ್ರಜಾಪ್ರಭುತ್ವದ ಯಶಸ್ಸಿಗೆ ಬುನಾದಿ: ಮೊಯ್ಲಿ 

ಕುಂದಾಪುರ:  ಗ್ರಾ.ಪಂ. ವ್ಯವಸ್ಥೆ ಯಶಸ್ವಿಯಾದರೆ ದೇಶದ ಪ್ರಜಾಪ್ರಭುತ್ವ ಯಶಸ್ವಿಯಾದಂತೆ, ಇಂದು ಗ್ರಾ.ಪಂ.ಗೆ  ಎಲ್ಲಾ ರೀತಿಯ ಹಕ್ಕು ಜವಾಬ್ದಾರಿಗಳನ್ನು  ಪ್ರಾಮಾಣಿಕವಾಗಿ  ಜಾತಿ, ಪಕ್ಷ ಬೇಧ ಮೆರೆತು ನಿರ್ವಹಿಸಿಸುವ  ಕರ್ತವ್ಯ ಗ್ರಾ.ಪಂ. ಸದಸ್ಯರದ್ದಾಗಿದೆ.  ಪ್ರಬಲ ರಾಜಕೀಯ  ಇಚ್ಚಾಶಕ್ತಿ  ಬಳೆಸಿಕೊಂಡಲ್ಲಿ  ಎಲ್ಲಾ ಸಮಸ್ಯೆಗಳನ್ನು ಮೀರಿ ಮುನ್ನಡೆಯ ಬಹುದು ಎಂದು  ಮಾಜಿ ಮುಖ್ಯಮಂತ್ರಿ, ಸಂಸದ  ಎಂ.ವೀರಪ್ಪ ಮೊಯಿಲಿ ಹೇಳಿದರು.

Call us

ಅವರು ಕುಂದಾಪುರ ರೋಟರಿ ಲಕ್ಷ್ಮಿನರಸಿಂಹ ಕಲಾಮಂದಿರದಲ್ಲಿ ನಡೆದ  ದೇವಾಡಿಗ ಸಮಾಜ ಸೇವಾ ಸಂಘ (ರಿ) ಕುಂದಾಪುರ ಕುಂದಾಪುರ ತಾಲೂಕು ಗ್ರಾ.ಪಂ. ದೇವಾಡಿಗ ಸಮಾಜದ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ  ಸದಸ್ಯರುಗಳನ್ನು ಅಭಿನಂದಿಸಿ ಮಾತನಾಡಿದರು.

ರಾಜೀವಗಾಂಧಿ  ಪ್ರಧಾನಿಯಾಗಿದ್ದಾಗ ನಾನು ಮುಖ್ಯಮಂತ್ರಿಯಾಗಿದ್ದೆ ಈ ಸಂದರ್ಭದಲ್ಲಿ ಗ್ರಾ.ಪಂ. ವ್ಯವಸ್ಥೆ ಬಲಪಡಿಸುವ ಹಾಗೂ ಪಂಚಾಯತ್‌ಗಳಿಗೆ ಹೆಚ್ಚಿನ ಹಕ್ಕು ಜವಾಬ್ದಾರಿ ನೀಡುವ  ವ್ಯವಸ್ಥೆ ರೂಪುಗೊಂಡಿತು. ಅಲ್ಲದೇ ಸಿಇಟಿ  ವ್ಯವಸ್ಥೆ ತಂದ ನಂತರ ಎಲ್ಲಾ ವರ್ಗದವರೂ, ಆರ್ಥಿಕವಾಗಿ ಹಿಂದುಳಿದವರೂ ಇಂಜಿನಿಯರ್ ಹಾಗೂ ಮೆಡಿಕಲ್ ಗೆ ಹೋಗಲು ಸಾಧ್ಯವಾಯಿತು ಎಂದರು.

ಮುಂಬಯಿಯ ದೇವಾಡಿಗ ವೆಲ್‌ಫೇರ್ ಎಸೋಶಿಯೇಶನ್‌ನ ಗೌರಾವಾಧ್ಯಕ್ಷ ಸುರೇಶ್ ಡಿ.ಪಡುಕೋಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕುಂದಾಪುರ ದೇವಾಡಿಗ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ  ಕೆ.ನಾರಾಯಣ ದೇವಾಡಿಗ  ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರಿನ  ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಅಧ್ಯಕ್ಷ  ವಾಮನ ಮರೋಳಿ,  ಕರ್ನಾಟಕ ರಾಜ್ಯ ಅರಣ್ಯ ಇಲಾಖಾ ನೌಕರರ ಮಹಾಮಂಡಲದ ಅಧ್ಯಕ್ಷ ರಘುರಾಮ  ದೇವಾಡಿಗ, ಮಾಜಿ ಶಾಸಕ ಗೋಪಾಲ ಭಂಡಾರಿ ,  ಮುಂಬ ದೇವಾಡಿಗ ಸಂಘದ ನಿಕಟಪೂರ್ವ ಅಧ್ಯಕ್ಷ  ಎಚ್.ಮೋಹನ್ ದಾಸ,  ಮುಂಬ ದೇವಾಡಿಗ ಸಂಘದ  ಉಪಾಧ್ಯಕ್ಷ ರವಿ ಎಸ್.ದೇವಾಡಿಗ, ಕುಂದಾಪುರ ದೇವಾಡಿಗ ಮಿತ್ರ (ಕದಂ) ಇದರ ಶೀನ ದೇವಾಡಿಗ,  ಬಿ.ಜಿ.ಮೋಹನದಾಸ ,  ನಾಗರಾಜ ಪಡುಕೋಣೆ ಮುಂಬ, ಜಿ.ಪಂ. ಶಿಕ್ಷಣ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷೆ ಗೌರಿ ದೇವಾಡಿಗ ಉಪಸ್ಥಿತರಿದ್ದರು.

ಸಂಪನ್ಮೂಲ  ವ್ಯಕ್ತಿಗಳಾಗಿ ಎಸ್. ಜನಾರ್ಧನ್ ಮರವಂತೆ, ಮಹಮ್ಮದ್ ಅನ್ವರ್ ಬೆಂಗಳೂರು, ಎಚ್.ಜಯವಂತ ರಾವ್ ಹಿರಿಯಡ್ಕ ಆಗಮಿಸಿದ್ದರು.

ಕುಂದಾಪುರ ದೇವಾಡಿಗ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ  ಕೆ.ನಾರಾಯಣ ದೇವಾಡಿಗ  ಸ್ವಾಗತಿಸಿದರು. ಜಿ.ಪಂ.ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

DSC_0947

Leave a Reply

Your email address will not be published. Required fields are marked *

1 × 5 =