ದೇವಲ್ಕುಂದ: ಮೀನು ಸಂಸ್ಕರಣಾ ಘಟಕ ವಿರೋಧಿಸಿ ಬೃಹತ್ ಜನಾಂದೋಲನ

Call us

ಕುಂದಾಪುರ: ನಮ್ಮ ಪೂರ್ವಿಕರು ಈ ನೆಲದಲ್ಲಿ ಬಾಳಿ ಬದುಕಿದರು. ನಾವು ಇಲ್ಲಿ ಜೀವನ ಕಟ್ಟಿಕೊಂಡಿದ್ದೇವೆ. ನಮ್ಮ ಮುಂದಿನ ಪೀಳಿಗೆ ಊರು ಬಿಡಬೇಕಾ. ಗ್ರಾಮಸ್ಥರ ಗಮನಕ್ಕೂ ತಾರದೆ, ಗ್ರಾಪಂ ಸದಸ್ಯರ ಮಾಹಿತಿ ಮುಚ್ಚಿಟ್ಟು ಮೀನು ಸಂಸ್ಕರಣಾ ಘಟಕಕ್ಕೆ ಪರವಾನಿಕಗೆ ಕೊಟ್ಟು ನಮ್ಮನ್ನು ಒಕ್ಕಲೆಬ್ಬಿಸೋ ಸಂಚಿ ನಡೆತಿದೆ.

[quote font_size=”13″ bgcolor=”#ffffff” arrow=”yes” align=”right”]25 ಕೋಟಿ ರೂ ವೆಚ್ಚದಲ್ಲಿ ನಿರ್ಮಿಲಾಗುತ್ತಿರುವ ಬೃಹತ್ ಮೀನುಗಾರಿಕಾ ಘಟಕ ಪರವಾನಿಗೆ ಕೊಡುವ ಮೊದಲು ಗ್ರಾಮ ಸಭೆ ನಡೆಸಿ ಗ್ರಾಮಸ್ಥರ ಅಭಿಪ್ರಾಯದ ಹಿನ್ನೆಲೆಯಲ್ಲಿ ಪರವಾನಿಗೆ ನೀಡಿದ್ದ ಅಕ್ಷಮ್ಯ ಅಪರಾಧ. ಶಾಲೆ, ದೇವಸ್ಥಾನ, ಜನ ವಸತಿ ಪ್ರದೇಶದಲ್ಲಿ ಪರಿಸರ ಮಾಲಿನ್ಯ ಮಾಡುವ ಕಾರ್ಖಾನೆ ಪರವಾನಿಗೆ ನೀಡಿದ್ದು ಅನುಮಾನಕ್ಕೆ ಕಾರಣ. ಅತಕ್ಷಣ ಗ್ರಾಮ ಸಭೆ ಕರೆದು ಗ್ರಾಮಸ್ಥರ ಅಭಿಪ್ರಾಯ ಕ್ರೋಢೀಕರಿ ಮುಂದಿನ ತೀರ್ಮಾನ ತೆಗೆದುಕೊಳ್ಳುವತನಕ ಕಾಮಗಾರಿ ನಿಲ್ಲಿಸಬೇಕು. ರೈತರ ಜಮೀನು ರೈತರಿಗೆ ತೊಂದರೆ ಕೊಟ್ಟರೆ ಅದರ ಪರಿಣಾಮ ಅನುಭವಿಸಬೇಕಾಗುತ್ತದೆ. ಜನರ ಹಿತ ಬಲಿ ಕೊಟ್ಟು ಘಟಕ ಸ್ಥಾಪನೆಗೆ ಅವಕಾಶ ನೀಡೋದಿಲ್ಲ. – ದೀಪಕ್ ಕುಮಾರ್ ಶೆಟ್ಟಿ, ರಾಜ್ಯ ಬಿಜೆಪಿ ರೈತಸಂಘ ಉಪಾಧ್ಯಕ್ಷ.[/quote]

ಕಟ್‌ಬೇಲ್ತೂರು ಗ್ರಾಮ ಪಂಚಾಯಿತಿ ಎದುರು ದೇವಲ್ಕುಂದ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಹೋಗುವ ದಾರಿ ಬದಿಯಲ್ಲಿ ನಿರ್ಮಾಣವಾಗುತ್ತಿರುವ ಮೀನು ಸಂಕ್ಷರಣಾ ಘಟಕ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಗ್ರಾಮಸ್ಥರು ಹೋರಹಾಕಿದ ಆಕ್ರೋಶದ ಪರಿಯಿದು. ಮೀನು ಸಂಕ್ಷರಣಾ ಘಟಕ ಕಾಮಗಾರಿ ತಕ್ಷಣ ನಿಲ್ಲಿಸಬೇಕು. ಗ್ರಾಮಸ್ಥರ ಸಭೆ ಕರೆದು ಸಾರ್ವಜನಿಕರು ಅಭಿಪ್ರಾಯಪೊಡೆದ ಪರಾನಿಗೆ ನೀಡಲು ಒಪ್ಪಿದರೆ ನಮ್ಮ ಅಭ್ಯಂತರವಿಲ್ಲ. ಅಲ್ಲಿವರೆಗೆ ನಡೆಯುತ್ತಿರುವ ಕಾಮಗಾರಿ ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯತಿ ಮುಂದೆ ಟೆಂಟ್ ಹಾಕಿ ಘಟಕ ನಿಲುಗಡೆ ತನಕೆ ಪ್ರತಿಭಟನೆ ನಡೆಸುತ್ತೇವೆ. ಊರಿನ ಹಿತ ಬಲಿಕೊಟ್ಟು ಸ್ಥಾಪಿತ ಹಿತಾಸಕ್ತಿಗಳ ಬೇಳೆ ಬೇಯಿಸಿಕೊಳ್ಳಲು ನಾವು ಬಿಡೋದಿಲ್ಲ ಎಂದು ಪಟ್ಟು ಹಿಡಿದ ಪ್ರತಿಭಟನೆಗಾರರು ಕಟ್‌ಬೇಲ್ತೂರು ಗ್ರಾಪಂ ಎದುರು ನೆಲದಲ್ಲಿ ಕೂತು ಪ್ರತಿಭಟನೆ ನಡೆಸಿದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಗ್ರಾಪಂ ಪಿಡಿಓ ಪ್ರತಿಭಟನೆಗಾರರಿಗೆ ಸಮಜಾಯಸಿ ನೀಡಬೇಕು. ಅವರನ್ನು ಸ್ಥಳಕ್ಕೆ ಕರೆಸಿ, ಅವರು ನಮ್ಮ ಜೊತೆ ಘಟಕ ಕಾಮಗಾರಿ ನಡೆಯುವ ಸ್ಥಳಕ್ಕೆ ಬಂದು ತಕ್ಷಣ ಕಾಮಗಾರಿ ನಿಲ್ಲಿಸಲು ಸೂಚಿಸಬೇಕು. ಪಿಡಿಓ ಜೊತೆ ವಾವು ಸ್ಥಳಕ್ಕೆ ಬರುತ್ತೇವೆ ಎಂದು ಹೋರಾಟಗಾರರು ಪಟ್ಟುಹಿಡಿದರು.

ಸ್ಥಳಕ್ಕೆ ಬಂದ ಪಿಡಿಒ ಗ್ರಾಪಂ ಸದಸ್ಯರು ಪರವಾನಿಗೆ ಕೊಟ್ಟಿದ್ದು ನನಗೇನು ಗೊತ್ತಿಲ್ಲ ಎಂದಿದ್ದು ಪ್ರತಿಭಟನಾ ನಿರತರನ್ನು ಮತ್ತಷ್ಟು ಕೆರಳಿಸಿತು. ಗ್ರಾಪಂ ಸದಸ್ಯರು ಹೇಗೆ ಪೆವಾನಿಗೆ ಕೊಡಲು ಸಾಧ್ಯ. ಎಲ್ಲಾ ನಿಮಗೆ ಗೊತ್ತಿದ್ದೇ ಆಗಿದೆ. ಕಾಮಗಾರಿ ನಿಲುಗಡೆಗೆ ಸೂಚಿಸಿ ಎಂದು ಪಟ್ಟು ಹಿಡಿದ ಸಂದರ್ಭ ಪ್ರತಿಭಟನೆಗಾರರು ಮತ್ತು ಪೊಲೀಸರು ನಡೆಉವೆ ಮಾತಿನ ಚಕಮಕಿ ನಡೆಯಿತು. ಚುನಾವಣೆ ನೀತಿ ಸಂಹಿತೆ ಇರೋದಿಂದ ಕಾಮಗಾರಿ ನಿಲುಗಡೆ ಆದೇಶ ಮಾಡಲು ಸಾದ್ಯವಿಲ್ಲ ಎಂದು ಪೊಲೀಸರು ವಾದಿಸಿದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)

[quote font_size=”13″ bgcolor=”#ffffff” arrow=”yes” align=”left”]ಜನ ದಟ್ಟಣೆ, ವಸತಿ ಸಮುಚ್ಛಯ, ನೂರಾರು ಎಕ್ರೆ ಕೃಷಿ ಭೂಮಿ ಬಲಿಕೊಟ್ಟು ಮೀನುಗಾರಿಕಾ ಸಂಸ್ಕರನಾ ಘಟಕ ಸ್ಥಾಪನೆಗೆ ಮುಂದಾಹಿರುವುದು ಜನ ವಿರೋಧಿ ನೀತಿಯಾಗಿದೆ. ಮೀನುಗಾರಿಕಾ ಘಟಕದಿಂದ ಪರಿಸರದ ಭೂಮಿ ಬೆಲೆ ಕಳೆದುಕೊಳ್ಳಲಿದ್ದು, ಜನರ ಬದುಕು ಮೂರಾಬಟ್ಟೆ ಆಗಲಿದೆ. ಜನ ಹಿತ ಬಲಿಕೊಟ್ಟು ಘಟಕ ಸ್ಥಾಪನೆ ನ್ಯಾಯಸಮ್ಮತವಲ್ಲ.  – ಬಿ. ಎಂ. ಸುಕುಮಾರ್ ಶೆಟ್ಟಿ. ಬೈಂದೂರು ಬ್ಲಾಕ್ ಬಿಜೆಪಿ ಅಧ್ಯಕ್ಷ[/quote]

Call us

ಅಲ್ಲಿದ್ದ ಪತ್ರಕರ್ತರೊಬ್ಬರು ಪ್ರತಿಭಟನೆಗೂ ಚುನಾವಣೆ ನೀತಿ ಸಮಹಿತೆಗೂ ಸಂಬಂಧವಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂತಾದರೆ ಕ್ರಮ ಕೈಗೊಳ್ಳಲು ಅಡ್ಡಿಯಿಲ್ಲ ಎಂಬ ಮಾಹಿತಿ ನೀಡಿದ್ದರಿಂದ ಕೊನೆಗೆ ಪೊಲೀಸರು ಪಿಡಿಓ ಅವರಿಗೆ ನೋಟೀಸ್ ನೀಡಿ ಕಾಮಗಾರಿ ನಿಲಿಲ್ಲಿಸಲು ಸೂಚಿಸಿದ ನಂತರ ಪ್ರತಿಭಟನೆ ಸ್ವಲ್ಪ ಶಾಂತವಾಯಿತು. ಪಿಡಿಓ ಕಾಮಗಾರಿ ಸ್ಥಗಿತಕ್ಕೆ ನೋಟೀಸ್ ನೀಡಿ ಕೆಲಸ ನಿಲ್ಲಿಸುವಂತೆ ಸೂಚಿಸಿದರು.

ಮೀನು ಸಂಸ್ಕರಣಾ ಘಟಕ ಬಳಿ ಕಟ್ಟೆ ಶ್ರಿ ವಿನಾಯಕ ದೇಸ್ಥಾನ, ಬಗ್ವಾಡಿಕ ನಂದಿಕೇಶ್ವರ ದೇವಸ್ಥಾ, ವಿಜಯಾ ಮಕ್ಕಳ ಕೂಟ ಶಾಲೆ, ಕನ್ಯಾನ, ಬಗ್ವಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಜೊತೆ 1 ಸಾವಿರ ಮನೆಗಳಿವೆ. ಘಟಕ ಸುತ್ತಾಮುತ್ತಾ ನೂರಾರು ಎಕ್ರೆ ಕೃಷಿ ಭೂಮಿಯಿದ್ದು, ಮೀನ ಸಂಸ್ಕರಣಾ ಘಟಕದಿಂದ ಈ ಎಲ್ಲಾ ವ್ಯವಸ್ಥೆಗಳಿಗೆ ಕೊಡಲಿ ಏಟು ಬೀಳುತ್ತದೆ ಎಂಬ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.

ಕಟ್‌ಬೇಲ್ತೂರು ಗಾಮ ಪಂಚಾಯಿತಿ ಸದಸ್ಯರಾದ ಚಂದ್ರ ಭಟ್ ಹರೇಗೋಡು, ರಾಮೇ ಶೆಟ್ಟಿ, ಅಂಬಿಕಾ, ಶೋಭಾ, ಸಹನಾ, ಲತಾ, ರೇವತಿ, ಹಟ್ಟಿಯಂಗಡಿ ಗ್ರಾಪಂ ಸದಸ್ಯ ತೋಟಬೈಲು ಸಂತೋಷ ಶೆಟ್ಟಿ, ಹೆಮ್ಮಾಡಿ ಮಾಜಿ ಗ್ರಾಪಂ ಸದಸ್ಯ ಹರೀಶ್ ಕುಮಾರ್ ಶೆಟ್ಟಿ, ಕೂಕನಾಡು ಸೋಮಶೇಖರ ಶೆಟ್ಟಿ, ಗೋಪಾಲ ಪೂಜಾರಿ ಯಡಬೇರು, ಹೆರಿಯ ಹರೇಗೀಡು, ಕರುಣಾಕರ ಶೆಟ್ಟಿ ಪ್ರತಿಭಟನೆ ನೇತೃತ್ವ ವಹಿಸಿದ, ಮಹಿಳೆಯರು ಸೇರಿ ನೂರಾರು ನಾಗರಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

[box type=”custom” color=”#000000″ bg=”#ffffff” fontsize=”15″ radius=”5″ border=”#1e73be”] ಎಲ್ಲಿದೆ ಘಟಕ

ಕಟ್‌ಬೇಲ್ತೂರು ಗ್ರಾಮ ದೇವಲ್ಕುಂದ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಹೋಗುವ ದಾರಿ ಬದಿಯಲ್ಲೇ ಮೀನು ಸಂಸ್ಕರಣಾ ಘಟಕ ತಲೆ ಎತ್ತಲಿದೆ. ಮೀನು ಸಂಸ್ಕರಣಾ ಘಟಕ ಬಳಿ ಎಸ್ಸಿಎಸ್ಸೀ ಕಾಲೋನಿ ಕೂಡಾ ಇದೆ. [/box]

news KND_14 OCT_3 news KND_14 OCT_2 news KND_14 OCT_4

Leave a Reply

Your email address will not be published. Required fields are marked *

two × 2 =