ದೇಶಾಭಿಮಾನದಿಂದ ಉತ್ತಮ ಸಮಾಜ ಸೃಷ್ಠಿ: ಕೋಟ ಶ್ರೀನಿವಾಸ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ದೇಶಾಭಿಮಾನದಿಂದ ಉತ್ತಮ ಸಮಾಜ, ಆರೋಗ್ಯಕರ ಸಮಾಜ ಸೃಷ್ಠಿಯಾಗುತ್ತದೆ. ನಾವು ಚಿಕ್ಕವರಿದ್ದಾಗಲೇ ದೇಶದ ಮೇಲೆ ಗೌರವ ಹೊಂದಿ ದೇಶವನ್ನು ನಮ್ಮ ಸಂಸ್ಕೃತಿಯನ್ನು ಪ್ರೀತಿಸಬೇಕೆಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ, ರಾಜ್ಯ ಬಾಲಭವನ ಸೊಸೈಟಿ(ರಿ.) ಬೆಂಗಳೂರು, ತಾಲೂಕು ಬಾಲಭವನ ಸಮಿತಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ, ಕಾರಂತ ಪ್ರತಿಷ್ಠಾನ(ರಿ.)ಕೋಟ ಇವರ ಸಹಯೋಗದಲ್ಲಿ ಕಾರಂತ ಥೀಮ್ ಪಾರ್ಕ್ ಕೋಟದಲ್ಲಿ ನಡೆಯುತ್ತಿರುವ ೨೦೧೮-೨೦೧೯ ಸಾಲಿನ ವಾರಂತ್ಯ ಕಾರ್ಯಕ್ರಮಕ್ಕೆ ಭೇಟಿ ನೀಡಿ ಮಾತನಾಡಿದರು.

ವೇದಿಕೆಯಲ್ಲಿ ಬ್ರಹ್ಮಾವರ ಶಿಶು ಅಭಿವೃದ್ಧಿ ಪ್ರಭಾರ ಯೋಜನಾಧಿಕಾರಿ ಶ್ರೀಮತಿ ಶೋಭಾ ಶೆಟ್ಟಿ, ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಲಕ್ಷ್ಮೀ, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸತೀಶ್ ವಡ್ಡರ್ಸೆ, ಸಂಪನ್ಮೂಲ ವ್ಯಕ್ತಿ ಕೆ.ಕೆ.ಶಿವರಾಮ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

nineteen + nineteen =