ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣ: ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ,ಜೂ.30
: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿನಿಯೋರ್ವಳು ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಶಂಕರನಾರಾಯಣ ಗ್ರಾಮದ ಕುಳ್ಳಂಜೆ ಎಂಬಲ್ಲಿ ನಡೆದಿದೆ. ಶಂಕರನಾರಾಯಣ ಸರಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಮಾನಸ ಕುಲಾಲ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

Call us

Call us

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಬಳಿಕ ಮರು ಪರೀಕ್ಷೆ ಬರೆದಿದ್ದಳು. ಆದರೆ ಮರು ಪರೀಕ್ಷೆಯಲ್ಲೂ ಅನುತ್ತೀರ್ಣಗೊಂಡಿದ್ದರಿಂದ ಮನನೊಂದ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Call us

Call us

ಶಂಕರನಾರಾಯಣ ಗ್ರಾಮದ ಕುಳ್ಳಂಜೆ ಶಾಲೆ ಬಳಿಯ ನಿವಾಸಿ ಬಾಬಣ್ಣ ಕುಲಾಲ ಅವರಿಗೆ ಅಪಘಾತವಾಗಿ ದುಡಿಯಲು ಕೂಡ ಆಗುತ್ತಿರಲಿಲ್ಲ. ತಾಯಿ ಅಕ್ಷರ ದಾಸೋಹ ಕೆಲಸ ಮಾಡಿ ಸಂಸಾರ ನಡೆಸುತ್ತಿದ್ದರು. ಮಾನಸ ಅವರ ವಿದ್ಯಾಭ್ಯಾಸಕ್ಕೆ ಒಬ್ಬರು ದಾನಿಗಳು ಸಹಾಯ ಮಾಡುತಿದ್ದರು ಎನ್ನಲಾಗಿದೆ. ಅವರಿಗೆ ಇಬ್ಬರು ಮಕ್ಕಳಿದ್ದು ಒಬ್ಬ ಪುತ್ರ ಕೆಲವು ವರ್ಷದ ಹಿಂದೆ ಬೈನ್ ಟ್ಯೂಮ್ಮರ್ ನಿಂದ ಮೃತ ಪಟ್ಟಿದ್ದಾನೆ. ಇದೀಗ ಮಗಳ ಸಾವಿನಿಂದ ಕುಟುಂಬದ ರೋಧನ ಮುಗಿಲು ಮುಟ್ಟಿದೆ.

ಶಂಕರನಾರಾಯಣ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬದುಕಿನಲ್ಲಿ ಎಂತಹ ಕಷ್ಟದ ಸಂದರ್ಭ ಎದುರಾದರೂ ಅದಕ್ಕೆ ಆತ್ಮಹತ್ಯೆ ಪರಿಹಾರವಲ್ಲ. ನೋವು, ಹತಾಶೆ ನಿಮ್ಮನ್ನು ಕಾಡುತ್ತಿದ್ದರೇ, ನಿಮ್ಮ ಆತ್ಮೀಯರು, ಹಿತಚಿಂತಕರೊಂದಿಗೆ ಮನಸ್ಸುಬಿಚ್ಚಿ ಮಾತನಾಡಿ. ಮನೋವೈದ್ಯರ ಸಲಹೆ ಪಡೆಯಿರಿ

Leave a Reply

Your email address will not be published. Required fields are marked *

16 + twelve =