ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ವೈದ್ಯಕೀಯ ನೆರವು

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ತಾಲೂಕು ತೆಕ್ಕಟ್ಟೆ ಬಾರಾಳಿಬೆಟ್ಟು ನಿವಾಸಿ ಮಂಜುನಾಥ ಪೂಜಾರಿ ಮತ್ತು ಪ್ರತಿಮಾ ದಂಪತಿಗಳ ಪುತ್ರ ನಿಶ್ಚಿತ್ (೨ವರ್ಷ) ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ವೈದ್ಯಕೀಯ ವೆಚ್ಚಕ್ಕೆ ಸುಮಾರು ೮ ಲಕ್ಷಕ್ಕೂ ಮಿಕ್ಕಿ ಹಣದ ಅಗತ್ಯವಿದ್ದು ಬಡ ಕುಟುಂಬ ಅಸಹಾಯಕ ಸ್ಥಿತಿಯಲ್ಲಿರುವ ಪತ್ರಿಕಾ ವರದಿಯನ್ನು ಗಮನಿಸಿದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ|ಎಂ.ಎನ್.ರಾಜೇಂದ್ರ ಕುಮಾರ್ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ವತಿಯಿಂದ ರೂ.೧೦,೦೦೦ ವೈದ್ಯಕೀಯ ನೆರವು ನೀಡಿದ್ದಾರೆ.

Call us

Call us

ದ.ಕ.ಜಿಲ್ಲಾ ಕೇಂದ್ರ ಬ್ಯಾಂಕಿನ ನಿರ್ದೇಶಕರಾದ ರಾಜು ಪೂಜಾರಿ ಮತ್ತು ರಘುರಾಮ ಶೆಟ್ಟಿಯವರು ಬಸ್ರೂರುವಿನಲ್ಲಿರುವ ಮಗುವಿನ ಮನೆಗೆ ತೆರಳಿ ವೈದ್ಯಕೀಯ ನೆರವಿನ ಚೆಕ್ ಮಗುವಿನ ತಾಯಿ ಪ್ರತಿಮಾ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲ ಪೂಜಾರಿ, ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

13 − 5 =