ಧರ್ಮದಿಂದ ನೆಮ್ಮದಿ, ಸಹಬಾಳ್ವೆ: ಪಿ ಶೇಷಪ್ಪಯ್ಯ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪರಿಶುದ್ಧವಾದ ನಮ್ಮ ಭರತಭೂಮಿಯಲ್ಲಿ ವೇದಗಳ ಆಧಾರದ ಮೇಲೆ ಹಿಂದೂಧರ್ಮ ಕಟ್ಟಲ್ಪಟ್ಟಿದೆ. ಈ ಧರ್ಮದಲ್ಲಿ ಹಲವಾರು ದೇವರು-ದೈವ ಹಾಗೂ ಸನ್ನಿಧಿಯನ್ನು ಗುರುತಿಸುವುದರಿಂದ ಯಾವುದೇ ಬಿಗುವಾದ ಕಟ್ಟುಪಾಡುಗಳಿಲ್ಲ. ಅಲ್ಲದೇ ಧಾರ್ಮಿಕ ವಿಷಯದಲ್ಲಿ ಎಲ್ಲರಿಗೂ ವಿಶೇಷ ಸ್ವಾತಂತ್ರ್ಯ ಕೊಟ್ಟ ಧರ್ಮ ನಮ್ಮದು ಎಂದು ನಿವೃತ್ತ ಉಪನ್ಯಾಸಕ ಪಡುವರಿ ಶೇಷಪ್ಪಯ್ಯ ಹೇಳಿದರು.

Call us

Call us

Call us

ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ಗಣೇಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕಸಭೆಯಲ್ಲಿ ಉಪನ್ಯಾಸ ನೀಡಿದರು. ಧರ್ಮದಿಂದ ಮಾನವನಿಗೆ ಸಹಬಾಳ್ವೆ, ನೆಮ್ಮದಿ ಹಾಗೂ ಸಂತೋಷ ದೊರೆಯುತ್ತದೆ. ಇದರಲ್ಲಿ ಭಕ್ತರ ಪಾಲುದಾರಿಕೆಯೂ ಮುಖ್ಯವಾಗಿರುತ್ತದೆ. ಹಾಗೆಯೇ ಹಿಂದೆ ಸಾರ್ವಜನಿಕ ಗಣೇಶೋತ್ಸವಗಳು ಸ್ವಾತಂತ್ರ ಸಂಗ್ರಾಮ, ದೇಶಭಕ್ತಿಯ ನವಚೇತನ ಉದ್ದೀಪನಗೊಳಿಸುವ ಸಲುವಾಗಿ ಪ್ರಾರಂಭಿಸಲಾಯಿತು ಎಂಬ ಕುರಿತು ವಿವರಿಸಿದರು.

Call us

Call us

ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಧಾಕರ ದೇವಾಡಿಗ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಶ್ರೀ ಸೇನೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೆ. ಸೀತಾರಾಮ ಅಡಿಗ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಉತ್ಸವದ ಪ್ರಯುಕ್ತ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಲಾವಣ್ಯದ ವ್ಯವಸ್ಥಾಪಕ ಬಿ. ಗಣೇಶ ಕಾರಂತ್, ಹಿರಿಯ ರಂಗಕರ್ಮಿ ಬಿ. ಮಾಧವ ರಾವ್, ರಂಗ ನಿರ್ದೇಶಕ ಗಿರೀಶ್ ಬೈಂದೂರು ಉಪಸ್ಥಿತರಿದ್ದರು. ಸಮಿತಿಯ ಮಾಜಿ ಕಾರ್ಯದರ್ಶಿ ದಯಾನಂದ ಪಡುವರಿ ನಿರೂಪಿಸಿ, ಜೊತೆ ಕಾರ್ಯದರ್ಶಿ ನಾಗರಾಜ ಪಿ. ಯಡ್ತರೆ ಸಹಕರಿಸಿದರು. ಕಾರ್ಯದರ್ಶಿ ಚಂದ್ರ ಪೂಜಾರಿ ವಂದಿಸಿದರು. ನಂತರ ಸ್ಥಳೀಯ ರಿದಂ ನೃತ್ಯಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *

two × one =