ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವಿಕೆಯಿಂದ ಸದ್ಭಾವನೆ ಉದಯ: ಸ್ವರ್ಣವಲ್ಲಿ ಶ್ರೀ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿವಾಹವೆಂಬುದು ಧರ್ಮ, ಅರ್ಥ, ಕಾಮಗಳನ್ನು ಅತಿಕ್ರಮಿಸಿ ಹೊಗುವುದಿಲ್ಲ ಎಂಬ ನೆಲೆಯಲ್ಲಿ ಸಂದೇಶ ಸಾರುವ ಪವಿತ್ರಬಂಧನವಾಗಿದೆ. ಪತಿ-ಪತ್ನಿಯರ ಸಂಬಂಧ ಪಾವಿತ್ರತೆಯ ಭಾವವಿದ್ದು, ಮೌಲ್ಯಾಧಾರಿತವಾಗಿದೆ. ವಿವಾಹ ಇಲ್ಲದಿದ್ದರೆ ಕುಟುಂಬ ಕಳಚುವ ಸಾಧ್ಯತೆಗಳಿದೆ ಎಂದು ಸ್ವರ್ಣವಲ್ಲಿ ಮಠಾಧೀಶ ಶ್ರೀ ಗಂಗಾಧರೇಂದ್ರ ಸ್ವಾಮೀಜಿ ಹೇಳಿದರು.

Call us

Call us

Click Here

Visit Now

ಬೈಂದೂರು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಬೈಂದೂರು ರಾಮಕ್ಷತ್ರಿಯ ಸಮಾಜದ ೧೨ನೇ ವರ್ಷದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ, ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಧರ್ಮದ ಕೇಂದ್ರವಾದ ಕುಟುಂಬವು ನಿಜವಾದ ವ್ಯವಸ್ಥೆಯ ಹೆಬ್ಬಾಗಿಲು. ಗ್ರಹಸ್ಥ ಜೀವನದಲ್ಲಿ ಧರ್ಮದ ಮೂಲಕ ಸಾಗಿದಾಗ ಸುಖ, ಶಾಂತಿ ಹಾಗೂ ನೆಮ್ಮದಿ ಶಾಶ್ವತವಾಗಿರುತ್ತದೆ. ಶ್ರೀರಾಮನ ಆದರ್ಶ ಅನುಕರಣೀಯವಾಗಿದ್ದು, ರಾಮದೇವರ ಕಲ್ಯಾಣೋತ್ಸದಲ್ಲಿ ಹಲವಾರು ರೀತಿಯ ಪ್ರಯೋಜನಗಳಿದ್ದರೂ, ಸಮಾಜ ಸುಭೀಕ್ಷೆಯಾಗುತ್ತದೆ. ಇದರಿಂದ ನಾವು ನಮ್ಮ ಜೀವನದಲ್ಲಿ ಆದರ್ಶ, ತತ್ವ ಹಾಗೂ ಉತ್ತಮ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

Click here

Click Here

Call us

Call us

ಇತ್ತೀಚಿಗೆ ಸಮಸ್ತ ಹಿಂದು ಸಮಾಜ ನಾಲ್ಕು ಅಂಶಗಳಲ್ಲಿ ತಪ್ಪು ಹೆಜ್ಜೆ ಇಡುತ್ತಿದೆ. ಸೂಕ್ತ ವಯಸ್ಸಿನಲ್ಲಿ ವಿವಾಹ ಆಗದಿರುವುದು, ವಿಚ್ಛೇದನ ಹೆಚ್ಚುತ್ತಿರುವುದು, ಭ್ರೂಣಹತ್ಯೆಯಂತಹ ಮಹಾಪಾಪದ ಕೆಲಸಕ್ಕೆ ಮನ ಮಾಡುತ್ತಿರುವುದು ಹಾಗೂ ಸಂತತಿ ನಿಯಂತ್ರಣಕ್ಕೆ ಆದ್ಯತೆ ನೀಡುತ್ತಿರುವುದು ಧರ್ಮವಲ್ಲ ಎಂದರು. ರಾಮಕ್ಷತ್ರಿಯ ಸಮಾಜದ ಪರಂಪರೆಯ ಬಲವಾದ ರಕ್ಷಣೆಯಿಂದ ಪರಸ್ಪರ ಪ್ರೀತಿ-ವಿಶ್ವಾಸದಿಂದ ಕೂಡಿ ಕರ್ತವ್ಯವನ್ನು ಪೂಜೆ ಎಂಬ ಭಾವನೆಯಿಂದ, ದುಡಿಮೆಯ ಒಂದಂಶವನ್ನು ಧಾರ್ಮಿಕ ಕಾರ್ಯಗಳಿಗೆ ಬಳಸಿ ಅದರೊಂದಿಗೆ ಜೀವನದಲ್ಲಿ ಸುಖ-ಶಾಂತಿ-ನೆಮ್ಮದಿಯಿಂದ ಬಾಳುವಂತಾಗಿದೆ. ಹಾಗೆಯೇ ಶೃದ್ಧಾಕೇಂದ್ರಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು, ದೇಹ ಶುದ್ಧಿಯಾಗುವ ಮೂಲಕ ನಮ್ಮಲ್ಲಿ ಸದ್ಭಾವನೆಗಳು ಬೆಳೆಯುತ್ತವೆ. ತನ್ಮೂಲಕ ನಮ್ಮಿಂದಾಗುವ ಅನಪೇಕ್ಷಿತ ಘಟನೆಗಳು ಕಡಿಮೆಯಾಗುತ್ತಾ ಬಂದು ನಮ್ಮನ್ನು ಸಚ್ಛಾರಿತ್ಯದೆಡೆಗೆ ಹೋಗಲು ಸಹಕರಿಸುತ್ತದೆ ಎಂದರು.

ಬೈಂದೂರು ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಬಿಜೂರು ಗೋಪಾಲ ನಾಯಕ್ ಅಧ್ಯಕ್ಷತೆವಹಿಸಿದ್ದರು. ಗೌರವಾಧ್ಯಕ್ಷ ಹನುಮಂತ ಬೆಳ್ಳಿ, ಹೊಸನಗರ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಶಶಿಧರ ನಾಯಕ್, ಕಲ್ಯಾಣೋತ್ಸವ ಸೇವಾರ್ಥಿಗಳಾದ ಶಾರದಾ ಮತ್ತು ಕರ್ನಲ್ ನರಸಿಂಹ ನಾಯಕ್ ಉಪಸ್ಥಿತರಿದ್ದರು. ಶ್ರೀರಾಮ ವಿವಿಧೋದ್ಧೇಶ ಟ್ರಸ್ಟಿನ ಆಡಳಿತ ಟ್ರಸ್ಟಿ ಬಿಜೂರು ರಾಮಕೃಷ್ಣ ಶೇರೆಗಾರ್ ಸ್ವಾಗತಿಸಿ, ಪ್ರಾಸ್ತಾವಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಗಣಪತಿ ಎಸ್. ನಿರೂಪಿಸಿ ವಂದಿಸಿದರು. ನಂತರ ಸ್ವಾಮೀಜಿಯವರು ಸೇರಿದ ಸಮಸ್ತ ಭಗವದ್ಭಕ್ತರಿಗೆ ಫಲ-ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಹಳದೀಪುರ ಮೊಕ್ಕಾಂಗೆ ತೆರಳುತ್ತಿರುವ ಗುರುಗಳನ್ನು ಬೀಳ್ಗೊಡಲಾಯಿತು.

 

Leave a Reply

Your email address will not be published. Required fields are marked *

nine + twelve =