ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕೆಲವು ವ್ಯಕ್ತಿಗಳು ಎನ್‌ಪಿಸಿಐಎಲ್ (ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿ) ಕೈಗಾ, ವೆಬ್‌ಸೈಟ್‌ನ ಹೆಸರಿನಲ್ಲಿ, ಸುಳ್ಳು ದಾಖಲೆಗಳನ್ನು ಸೃಷ್ಠಿಸಿ, ನಕಲಿ ಉದ್ಯೋಗ ಭರವಸೆ ನೀಡಿ, ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸುವಂತೆ ಸುಳ್ಳು ಇ-ಮೇಲ್‌ಗಳನ್ನು ಹಾಗೂ ದೂರವಾಣಿ ಕರೆಗಳನ್ನು ಮಾಡುತ್ತಿದ್ದು, ಇಂತಹ ವ್ಯಕ್ತಿಗಳಿಂದ ಹಣ ಪಾವತಿಸುವಂತೆ ಇ-ಮೇಲ್ ಅಥವಾ ದೂರವಾಣಿ ಕರೆಗಳು ಬಂದಲ್ಲಿ ಪ್ರತಿಕ್ರಿಯಿಸಬಾರದು.
ಇಂತಹ ಆಮಿಷ ಒಡ್ಡುವ ವ್ಯಕ್ತಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಈ ರೀತಿಯ ಆಮಿಷಕ್ಕೆ ಬಲಿಯಾಗಿ ಹಣ ಕಳೆದುಕೊಂಡಲ್ಲಿ ಸಂಸ್ಥೆ ಜವಾಬ್ದಾರಿಯಾಗುವುದಿಲ್ಲ, ಎನ್‌ಪಿಸಿಐಎಲ್, ಕೈಗಾ ಸೈಟ್ ಮೆರಿಟ್ ಆಧಾರದ ಮೇಲೆ ಉದ್ಯೋಗಾಕಾಂಕ್ಷಿಗಳನ್ನು ಆಯ್ಕೆ ಮಾಡುತ್ತಿದ್ದು, ಉದ್ಯೋಗಾಕಾಂಕ್ಷಿಗಳಿಂದ ಯಾವುದೇ ಮೊತ್ತವನ್ನು ಅಥವಾ ಠೇವಣಿಯನ್ನು ಸ್ವೀಕರಿಸುವುದಿಲ್ಲ. ಈ ನಿಗಮದ ಯಾವುದೇ ಉದ್ಯೋಗಗಳ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ (https://www.npcilcareers.co.in/) ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ recrute.kgs@npcil.co.in ಸಂಪರ್ಕಿಸುವಂತೆ ಎನ್‌ಪಿಸಿಐಎಲ್ ಕೈಗಾ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ:
► ಬೈಂದೂರು: ಕೈಗಾದಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ ಲಕ್ಷಾಂತರ ರೂ. ವಂಚನೆ. ಆರೋಪಿ ಬಂಧನ –https://kundapraa.com/?p=42541 .