ನಗದು ರಹಿತ ವ್ಯವಹಾರ ಮಾಹಿತಿ ಕಾರ‍್ಯಕ್ರಮ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬ್ಯಾಂಕುಗಳು ಗ್ರಾಹಕರ ಅನುಕೂಲಕ್ಕಾಗಿ ವಿನೂತನವಾದ ತಂತ್ರಜ್ಞಾನಗಳನ್ನು ಬಳಕೆಗೆ ತರುತ್ತಲೇ ಇವೆ. ಇದರಿಂದ ವೇಗದ ಬ್ಯಾಂಕಿಂಗ್ ವ್ಯವಹಾರ ಸರಳವಾಗಿ ಸಾಧ್ಯವಾಗುತ್ತದೆ. ಗ್ರಾಹಕರು ಈ ನಿಟ್ಟಿನಲ್ಲಿ ಅರಿವನ್ನು ಪಡೆದುಕೊಳ್ಳಬೇಕು ಎಂದು ವಾರಂಬಳ್ಳಿ ಕೆನರಾ ಬ್ಯಾಂಕಿನ ಅಧಿಕಾರಿ ಮನಿಷ್ ಹೇಳಿದರು.

Call us

ಅವರು ಇತ್ತೀಚೆಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ನಗದು ರಹಿತ ವ್ಯವಹಾರ ಮತ್ತು ಮೊಬೈಲ್ ಬ್ಯಾಂಕಿಂಗ್ ಬಗೆಗೆ ಮಾಹಿತಿ ನೀಡುವ ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಗಂಗೊಳ್ಳಿ ಕೆನರಾ ಬ್ಯಾಂಕಿನ ಅಧಿಕಾರಿ ಜಿ.ವಿ.ಅಶೋಕ್ ಮಾತನಾಡಿ ನಗದು ರಹಿತ ವ್ಯವಹಾರ ಇಂದಿನ ಅದ್ಯತೆಯಾಗಿದೆ.. ಬ್ಯಾಂಕಿನಿಂದ ದೊರೆಯುವ ಉತ್ತಮ ಸೌಲಭ್ಯಗಳನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಸರಸ್ವತಿ ವಿದ್ಯಾಲಯದ ಪ್ರಾಂಶುಪಾಲೆ ಕವಿತಾ ಎಮ್ ಸಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಸುಜಯೀಂದ್ರ ಹಂದೆ ಸ್ವಾಗತಿಸಿ ನಿರೂಪಿಸಿದರು. ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ವಂದಿಸಿದರು.

Leave a Reply

Your email address will not be published. Required fields are marked *

one + two =