ನನ್ನ ಕನಸಿನ ಉದ್ಯೋಗ – ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯ ತರಬೇತಿ: ವೆಬಿನಾರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವ್ಯವಹಾರ ಅಧ್ಯಯನ ವಿಭಾಗದ ಆಶ್ರಯದಲ್ಲಿ ನನ್ನ ಕನಸಿನ ಉದ್ಯೋಗ – ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯ ತರಬೇತಿ ಕುರಿತು ವೆಬಿನಾರ್ ನಡೆಯಿತು

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವರುಣ್ ಕಟ್ಟಿ ಮಾತನಾಡಿ, ಮುಖ್ಯವಾಗಿ ಉತ್ತಮ ಉದ್ಯೊಗವನ್ನು ಪಡೆಯಬೇಕು ಎಂಬ ಆಶಯವನ್ನ ನಮ್ಮದಾಗಿಸಿಕೊಳ್ಳಬೇಕು. ಅದಕ್ಕೆ ಪೂರಕ ವಾತಾವರಣವನ್ನು ನಾವಿ ಸೃಷ್ಟಿಸಿಕೊಳ್ಳಬೇಕು. ಅಂದರೆ ಒಳ್ಳೆಯ ಉದ್ಯೋಗಕ್ಕೆ ಬೇಕಾದಂತಹ ಪರಿಪೂರ್ಣ ಕಲಿಕೆ ನಿರಂತರ ಅಧ್ಯಯನ, ತಲ್ಲೀನತೆ ಭಿನ್ನ ನೆಲೆಗಳ ಆಲೋಚನೆ ಮತ್ತು ನಿಮ್ಮ ಬಗ್ಗೆ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಉತ್ತಮ ಮಾತುಗಾರಿಕೆ ಸಂವಹನ ಕಲೆ, ಇಂಗ್ಲೀಷ್ ವ್ಯಾಕರಣ ಜ್ಞಾನಸಾಮಾನ್ಯ ಜ್ಞಾನವನ್ನು ಆದಷ್ಟು ಹೆಚ್ಚಿಸಿಕೊಳ್ಳಬೇಕು. ದೊಡ್ಡ ಆಲೋಚನೆಯೊಂದಿಗೆ ವಿವಿಧ ಉದ್ಯೋಗಕ್ಕೆ ಬೇಕಾದ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಮಾಡಿ ನಿಮ್ಮ ವಿದ್ಯಾರ್ಹತೆಯನ್ನು ಹೆಚ್ಚಿಸಿಕೊಳ್ಳಬೇಕು. ಇದೆಲ್ಲದರ ಜೊತೆಗೆ ಬಹುಮುಖ್ಯವಾಗಿ ನಿರಂತರ ಕಲಿಯುವಿಕೆಯ ಮೂಲಕ ನಿಮ್ಮನ್ನು ಯಾವುದೇ ಉತ್ತಮ ಹುದ್ದೆಗೆ ತಯಾರಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಮಾತನಾಡಿ, ಆನ್‌ಲೈನ್ ತರಗತಿಗಳ ಮಧ್ಯೆ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಮಾಹಿತಿ ನೀಡುವುದು ಈ ವೆಬಿನಾರ್‌ನ ಮುಖ್ಯ ಉದ್ದೇಶವಾಗಿದೆ ಎಂದರು.

ಈ ಸಂದರ್ಭದಲ್ಲಿ ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥೆ ಮತ್ತು ಕಾರ್ಯಕ್ರಮ ಸಂಯೋಜಕಿ ಅರ್ಚನಾ ಅರವಿಂದ್, ಉಪನ್ಯಾಸಕರಾದ ಪ್ರಶಾಂತ ಹೆಗ್ಡೆ, ಅಂಜನ್‌ಕುಮಾರ್ ಉಪಸ್ಥಿತರಿದ್ದರು.

ತಾತ್ರಿಕವಾಗಿ ಕಾಲೇಜಿನ ಐಟಿ.ತಂಡದ ಗುರುದಾಸ ಪ್ರಭು, ಅಮರ್ ಇಕ್ವೆರಾ ಮತ್ತು ಗಣೇಶ್ ಸಹಕರಿಸಿದರು. ವಿದ್ಯಾರ್ಥಿನಿ ಝಿಯಾ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ವಿದ್ಯಾರ್ಥಿ ಅನ್ಫಾಲ್ ವಂದಿಸಿದರು.

Leave a Reply

Your email address will not be published. Required fields are marked *

4 × 3 =