ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ದಿ ಕನ್ಸರ‍್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ಪ್ರಾದೇಶಿಕ ಸಂಪನ್ಮೂಲ ಕೇಂದ್ರ ನಮ್ಮಭೂಮಿ ಇಲ್ಲಿನ ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ವೃತ್ತಿ ತರಬೇತಿಯ ಮಕ್ಕಳು ಉಡುಪಿ ಜಿಲ್ಲೆಯ ಹೊಸಂಗಡಿಯಲ್ಲಿರುವ ವಾರಾಹಿ ಅಂಡರ್ ಗ್ರೌಂಡ್ ಪವರ್ ಹೌಸ್‌ಗೆ ಅಧ್ಯಯನ ಪ್ರವಾಸವನ್ನು ಕೈಗೊಂಡಿದ್ದರು. ಈ ಸಂದರ್ಭದಲ್ಲಿ ವಾರಾಹಿ ಪವರ್ ಹೌಸ್‌ನ ಕಿರಿಯ ಅಭಿಯಂತರರಾದ ಸಂತೋಷರವರೊಂದಿಗೆ ಸಂವಾದ ನಡೆಸಿದರು.
ಇವರು ವಾರಾಹಿ ಜಲ ವಿದ್ಯುತ್ ಯೋಜನೆಯನ್ನು ಮಕ್ಕಳಿಗೆ ಪರಿಚಯಿಸಿ, ಮಕ್ಕಳು ಕೇಳುವ ಪ್ರಶ್ನೆಗಳಿಗೆ ಸರಳವಾದ ಉತ್ತರಗಳನ್ನು ನೀಡುತ್ತಾ, ವೀಕ್ಷಣೆಯ ಸಂದರ್ಭದಲ್ಲಿ ವಾರಾಹಿ ಜಲ ವಿದ್ಯುತ್ ಯೋಜನೆಯು 1989ರಲ್ಲಿ ಪ್ರಾರಂಭವಾದ ಬಗ್ಗೆ ಮತ್ತು ಈ ಯೋಜನೆಯಲ್ಲಿರುವ ಘಟಕಗಳು ಹಾಗೂ ಅವುಗಳ ವಿದ್ಯುತ್ ಉತ್ಪಾದನಾ ಸಾಮರ್ಥ್ಯಗಳ ಕುರಿತಾಗಿ ಮಾಹಿತಿಯನ್ನು ಹಂಚಿಕೊಂಡರು. ಅದರಲ್ಲೂ ಇತ್ತೀಚಿನ ಯುಗದಲ್ಲಿ ಸೋಲಾರ್ ಶಕ್ತಿಗೆ ಪ್ರಮುಖ್ಯತೆಯನ್ನು ನೀಡುತ್ತಿದ್ದರೂ ಸಹ ಜಲವಿದ್ಯುತ್ ಶಕ್ತಿಗೆ ಇರುವ ಬೇಡಿಕೆಯ ಕುರಿತು ಹಾಗೂ ಪರಿಸರ ಸಂರಕ್ಷಣೆಯ ಕಾಳಜಿಯಲ್ಲಿ ಈ ಯೋಜನೆಗೆ ನೀಡಿರುವ ಮಹತ್ವದ ಕುರಿತಾಗಿ ಚರ್ಚಿಸಿದರು. ಈ ಪ್ರವಾಸದಲ್ಲಿ ನಮ್ಮಭೂಮಿಯ ಸುಮಾರು 19 ವಿದ್ಯಾರ್ಥಿಗಳು ಮತ್ತು ನಮ್ಮಭೂಮಿಯ ಕಾರ್ಯಕರ್ತರಾದ ಮಂಜುನಾಥ. ಕೆ. ಟಿ, ಸುಭಾನ್, ಮತ್ತು ಮಂಜುನಾಥ. ಪಿ.ಸಿ ಸೌಕರ್ಯಕಾರರಾಗಿ ವಿದ್ಯಾರ್ಥಿಗಳೊಂದಿಗೆ ಜೊತೆಗಿದ್ದರು.
ಹೆಚ್ಚಿನ ಮಾಹಿತಿಗಾಗಿ:
ಮಂಜುನಾಥ ಪಿ.ಸಿ: 99005 58286
ಸುರೇಶ್ ಗೌಡ: 9686737747