ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ನೆಲ್ಲಿಕಟ್ಟೆ ಕತ್ಕೊಡು ಎಂಬಲ್ಲಿ ಕರ್ನಾಟಕ ದಲಿತ ಸಂಘ ಸಮಿತಿ ಭೀಮ ಘರ್ಜನೆಯ ನೂತನ ಗ್ರಾಮ ಶಾಖೆ ಮತ್ತು ನಮ್ಮ ಭೂಮಿ ನಮ್ಮ ಹೋರಾಟದ ಉದ್ಘಾಟನೆ ನಡೆಯಿತು.
ಉದ್ಘಾಟಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು, ಮನೆ, ಮನೆಯಲ್ಲೂಬಾಬಾ ಸಾಹೇಬ್ ಅವರ ಹೋರಾಟದ ಕ್ರಾಂತಿ ಜ್ಯೋತಿ ಬೆಳಗಬೇಕು, ಆ ಮೂಲಕ ಈ ಭಾಗದಲ್ಲಿ ಒತ್ತುವರಿಯಾದ ದಲಿತರ ಭೂಮಿಯನ್ನ ಕಾನೂನು ಮೂಲಕ ಮರಳಿ ಪಡೆಯಬೇಕು ಎಂದರು
ಗ್ರಾಮ ಶಾಖೆಯ ಪದಾಧಿಕಾರಿಯನ್ನ ಆಯ್ಕೆ ಮಾಡಿ ಸಂಘಟನೆಯ ದ್ವಜವನ್ನ ಅವರಿಗೆ ಹಸ್ತಾಂತರಿಸಿ ಪ್ರಮಾಣ ವಚನ ನೀಡಲಾಯಿತು.
ಮುಖ್ಯ ಅಥಿತಿಯಾಗಿ ಸಂಘಟನೆಯ ಕಲಾ ಮಂಡಳಿಯ ವಸಂತ ವಂಡ್ಸೆ ಅಂಬೇಡ್ಕರ್ ಬಾವ ಚಿತ್ರಕ್ಕೆ ಮಾಲಾರ್ಪಣೆ ನೆರವೇರಿಸಿ ಕ್ರಾಂತಿ ಗೀತೆಯ ಹಾಡಿ ಮಾತಾಡಿದರು.
ಕಾರ್ಯಕ್ರಮದಲ್ಲಿ ಚಂದ್ರಮ ತಲ್ಲೂರು, ರತ್ನಾಕರ ಕುಂದಾಪುರ ಸುರೇಶ್ ಬಾಬು, ಗುರು ಜನ್ಸಾಲೆ ರಾಮ ಬೆಳ್ಳಾಲ ಹಾಗೂ ನೂತನ ಶಾಖೆಯ ಸಂಚಾಲಕರಾದ ಗುರುರಾಜ ಕತ್ಕೂಡು, ಸಂಘಟನ ಸಂಚಾಲಕರಾದ ಉದಯ್, ಜಯಕರ, ನಾಗರಾಜ, ಜಯರಾಮ, ವಿಜಯ, ನಾಗರಾಜ, ಖಜಾಂಚಿಯಾಗಿ ಚೈತ್ರ, ಕಾರ್ಯನಿರ್ವಾಹಕ ಸಮಿತಿ ಸದಸ್ಯರಾಗಿ ಮಹೇಶ್, ಅಣ್ಣಾಪ್ಪ,ಸುರೇಶ್, ಸಂತೋಷ ಉಪಸ್ಥಿತಿರಿದ್ಧರು. ಗುರುರಾಜ್ ಸ್ವಾಗತಿಸಿ, ನಿರೂಪಿಸಿ ಧನ್ಯವಾದಗೈದರು.