ನರೇಂದ್ರನಿಂದ ಸ್ವಾಮಿ ವಿವೇಕಾನಂದ: ತಿಳಿದುಕೊಳ್ಳಲೇಬೇಕಾದ ವೀರ ಸಂನ್ಯಾಸಿ ಸಾಗಿದ ಹಾದಿ

Click Here

Call us

Call us

ಕುಂದಾಪ್ರ ಡಾಟ್ ಕಾಂ ಲೇಖನ.
ಹಿಂದೂ ಧರ್ಮದ ನವೋನನ್ಯತೆಯನ್ನು ಜಗದುದ್ದಗಲಕ್ಕೆ ಪಸರಿಸಿದ, ಭಾರತ ಉಪಖಂಡದ ಯುವಚೈತನ್ಯವನ್ನೂ ಆಧ್ಯಾತ್ಮಿಕ ಶಕ್ತಿಯನ್ನೂ ಮುಗಿಲೆತ್ತರಕ್ಕೆ ಎತ್ತರಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 156ನೇ ಜನ್ಮ ದಿನ ಇಂದು. ಇದೇ ಹಿನ್ನೆಲೆಯಲ್ಲಿ ಜ.12ನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ. ಯುವ ಶಕ್ತಿ, ಸಾಮರ್ಥ್ಯದ ಬಗ್ಗೆ ಅರಿವು ಹೊಂದಿದ್ದ ವಿವೇಕಾನಂದರು, ತಮ್ಮೆಲ್ಲ ಬೋಧನೆಗಳಲ್ಲಿ ಯುವಜನತೆ ಮತ್ತು ದೇಶವನ್ನು ಕೇಂದ್ರೀಕರಿಸುತ್ತಿದ್ದರು.

Call us

Call us

Visit Now

ನರೇಂದ್ರ ದತ್ತ: ಇದು ಸ್ವಾಮಿ ವಿವೇಕಾನಂದರ ಪೂರ್ವಾಶ್ರಮದ ಹೆಸರು

Click here

Click Here

Call us

Call us

ಜನನ: 1863 ಜನವರಿ 12. ಕಲ್ಕತ್ತಾ(ಬ್ರಿಟಿಷ್‌ ಇಂಡಿಯಾ)

ಮರಣ: 1902 ಜುಲೈ 4. ಪಶ್ಚಿಮ ಬಂಗಾಳದ ಬೇಲೂರು ಮಠ.

ಗುರು: ಶ್ರೀ ರಾಮಕೃಷ್ಣ ಪರಮಹಂಸರು

ಫಿಲಾಸಫಿ: ಆಧುನಿಕ ವೇದಾಂತ ಮತ್ತು ರಾಜಯೋಗ

ಸಂಸ್ಥೆ ಸ್ಥಾಪನೆ: ರಾಮಕೃಷ್ಣ ಮಿಷನ್‌, ರಾಮಕೃಷ್ಣ ಮಠ

ಶಿಷ್ಯರು: ಅಶೋಕಾನಂದ, ವಿರಾಜಾನಂದ, ಪರಮಾನಂದ, ಅಳಸಿಂಗ ಪೆರುಮಾಳ್‌, ಅಭಯಾನಂದ, ಸಿಸ್ಟರ್‌ ನಿವೇದಿತಾ, ಸ್ವಾಮಿ ಸದಾನಂದ

ಸಾಹಿತ್ಯ: ರಾಜ ಯೋಗ, ಕರ್ಮ ಯೋಗ, ಭಕ್ತಿ ಯೋಗ, ಜ್ಞಾನ ಯೋಗ, ಮೈ ಮಾಸ್ಟರ್‌, ಲೆಕ್ಚರ್ಸ್‌ ಫ್ರಮ್‌ ಕೊಲೊಂಬೊ ಟು ಅಲ್ಮೊರಾ.

ಯಾರ ಮೇಲೆ ಪ್ರಭಾವ?: ಸುಭಾಷ್‌ಚಂದ್ರ ಬೋಸ್‌, ಅರವಿಂದೋ ಘೋಷ್‌, ಭಾಘ್‌ ಜತಿನ್‌, ಮಹಾತ್ಮ ಗಾಂಧಿ, ರವಿಂದ್ರನಾಥ ಠಾಗೋರ್‌, ಚಕ್ರವರ್ತಿ ರಾಜಗೋಪಾಲಚಾರಿ, ಜವಾಹರ ಲಾಲ್‌ ನೆಹರು, ಬಾಲ ಗಂಗಾಧರ ತಿಳಕ್‌, ಜಮ್ಷಡ್‌ಜೀ ಟಾಟಾ, ನಿಕೋಲಾ ಟೆಸ್ಲಾ, ಸಾರಾ ಬರ್ಮಹಾರ್ಡಿಟ್‌, ಎಮ್ಮಾ ಕ್ಲೇವ್‌, ಜಗದೀಶ್‌ ಚಂದ್ರ ಬೋಸ್‌, ಆ್ಯನಿಬೆಸಂಟ್‌, ರೊಮಿನ್‌ ರೊಲಾಂಡ್‌, ನರೇಂದ್ರ ಮೋದಿ, ಅಣ್ಣಾ ಹಜಾರೆ ಮತ್ತಿತರರು.

ವಿವೇಕವಾಣಿ:
– ಮಹತ್ವಾಕಾಂಕ್ಷಿ, ಧೈರ್ಯವಂತ, ಶುದ್ಧ ಹೃದಯವಂತರು, ಮುಕ್ತ ಮನಸ್ಸಿನವರು ಹಾಗೂ ಸಾಹಸಿಗ ಯುವ ಜನತೆಯೇ ಭವಿಷ್ಯದ ದೇಶವನ್ನು ಕಟ್ಟಲು ಬೇಕಿರುವ ಅಡಿಪಾಯ.

– ಯುವ ಜನತೆಯ ನಡತೆ, ಬುದ್ಧಿವಂತಿಕೆ, ಇತರರಿಗೆ ಸಹಾಯ ಮಾಡುವುದು ಮತ್ತು ವಿಧೇಯರಾಗಿರುವುದರಲ್ಲಿ ಮುಂದಿನ ಭವಿಷ್ಯ ಅಡಗಿದೆ ಎಂದು ನಾನು ಆಶಿಸುತ್ತೇನೆ. ಇದರಿಂದ ಯುವಕರು ವೈಯಕ್ತಿಕವಾಗಿ ಒಳ್ಳೆಯವರಾಗುವುದರ ಜತೆಗೆ ದೇಶಕ್ಕೂ ಒಳ್ಳೆಯದಾಗುತ್ತದೆ.

– ಯಾರೂ ನಿಮಗೆ ಕಲಿಸಲಾರರು, ಯಾರೂ ನಿಮ್ಮ ಅಧ್ಯಾತ್ಮಿಕ ವ್ಯಕ್ತಿಯನ್ನಾಗಿಸಲಾರರು. ನಿಮ್ಮ ಆತ್ಮ ಹೊರತುಪಡಿಸಿ ಬೇರೆ ಯಾವ ಗುರುವೂ ಇಲ್ಲ.

– ನಾವು ಏನಾಗಿದ್ದೆವೊ ಅದು ನಮ್ಮ ವಿಚಾರಗಳಿಂದಲೇ; ಹಾಗಾಗಿ, ನೀವು ಏನು ವಿಚಾರ ಮಾಡುತ್ತೀರಿ ಎಂಬ ಬಗ್ಗೆ ಗಮನ ಇರಲಿ.

– ಬಡವರು, ಅಶಕ್ತರು, ರೋಗಿಗಳಲ್ಲಿ ಯಾರು ಶಿವನನ್ನು ಕಾಣುತ್ತಾರೋ ಅವರೇ ನಿಜವಾದ ಶಿವಭಕ್ತರು

– ಹಣ ಸಂಪಾದನೆಗೆ ಕಷ್ಟಪಡಿ. ಆದರೆ, ಅದಕ್ಕೇ ಜೋತು ಬೀಳದಿರಿ.

– ನಿಮ್ಮ ದೇಶಕ್ಕೆ ನಾಯಕರ ಬೇಕು; ನೀವು ಯಾವಾಗಲೂ ನಾಯಕರಾಗಿರಿ; ಕೆಲಸ ಮಾಡುವುದೇ ನಿಮ್ಮ ಕರ್ತವ್ಯ. ಆಗ ಪ್ರತಿಯೊಂದು ನಿಮ್ಮನ್ನು ಅನುಸರಿಸಿಕೊಂಡು ಬರುತ್ತದೆ.

Click Here

– ಅತ್ಯುನ್ನತ ಆದರ್ಶವನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ಅದರಂತೆ ಬದುಕಿ. ಸಮುದ್ರದತ್ತ ನೋಡಬೇಕೆ ಹೊರತು ಅಲೆಗಳತ್ತಲ್ಲ.

– ಹೃದಯ ವೈಶಾಲ್ಯ, ಪ್ರಾಮಾಣಿಕ ಮತ್ತು ಶಕ್ತಿವಂತರಾಗಿರುವ ಕೆಲವೇ ಕೆಲವು ಗಂಡಸು ಮತ್ತು ಹೆಂಗಸರು, ದೇಶದಲ್ಲಿರುವ ದೊಡ್ಡ ಗುಂಪಿನಕ್ಕಿಂತ ಹೆಚ್ಚಿನದನ್ನು ಮಾಡಬಲ್ಲರು.

– ಧರ್ಮವು ಈಗಾಗಲೇ ಮನುಷ್ಯನಲ್ಲಿರುವ ದೈವತ್ವದ ಅಭಿವ್ಯಕ್ತಿಯಾಗಿದೆ.

– ಪ್ರತಿ ಆತ್ಮವು ದೈವತ್ವ ಪಡೆಯುವ ಸಾಮರ್ಥ್ಯ ಹೊಂದಿದೆ.

– ದಿನಕ್ಕೆ ಒಮ್ಮೆಯಾದರೂ ನಿಮ್ಮಷ್ಟಕ್ಕೆ ನೀವೇ ಮಾತನಾಡಿಕೊಳ್ಳಿ. ಇಲ್ಲದಿದ್ದರೆ, ಜಗತ್ತಿನಲ್ಲಿರುವ ಅತ್ಯುದ್ಭುತ ವ್ಯಕ್ತಿಯನ್ನು ಮಿಸ್‌ ಮಾಡಿಕೊಳ್ಳುತ್ತೀರಿ.

– ಏಳಿ, ಎದ್ದೇಳಿ.. ಗುರಿ ಮಟ್ಟೋವರೆಗೂ ನಿಲ್ಲದಿರಿ.

– ಎಲ್ಲಿಯವರೆಗೆ ನಿಮ್ಮ ಮೇಲೆ ನಂಬಿಕೆ ಬರುವುದಿಲ್ಲವೋ ಅಲ್ಲಿಯವರೆಗೆ ನಿಮಗೆ ದೇವರ ಮೇಲೆ ನಂಬಿಕೆ ಬರದು.

– ನಮ್ಮೀ ಚೇತನಕ್ಕೆ ಅಸಾಧ್ಯವೆಂಬುದು ಯಾವುದೂ ಇಲ್ಲ; ಅಸಾಧ್ಯವೆಂದು ಯೋಚಿಸುವುದೇ ಮಹಾನ್‌ ದೌರ್ಬಲ್ಯ. ನಿಮ್ಮನ್ನು ನೀವು ದುರ್ಬಲರೆಂದು ತಿಳಿಯುವುದೇ ಮಹಾ ಪಾಪ.
1893ರ ಶಿಕಾಗೋ ಭಾಷಣದ ತುಣುಕುಗಳು:
ಶಿಕಾಗೋ ಧರ್ಮ ಸಮ್ಮೇಳನದಲ್ಲಿ ವಿವೇಕಾನಂದ ಅವರು, ”ಅಮೆರಿಕದ ಸಹೋದರಿಯರೇ ಮತ್ತು ಸಹೋದರರೇ,” ಎಂದು ಹೇಳುತ್ತಿದ್ದಂತೆ ಇಡೀ ಸಭಾಂಗಣ ಎದ್ದು ನಿಂತು ಚಪ್ಪಾಳೆ ಮೊಳಗಿಸಿತು. ಆವರೆಗೂ ಯಾರೂ ಭ್ರಾತೃತ್ವದ ನೆಲೆಗಟ್ಟಿನ ಮೇಲೆ ಮಾತನಾಡಿರಲಿಲ್ಲ. ವಿವೇಕಾನಂದರ ಈ ಮಾತು ಅಲ್ಲಿ ನೆರೆದಿದ್ದ ಜನರಲ್ಲಿ ಮಿಂಚಿನ ಸಂಚಾರ ಮಾಡಿತು. ಮುಂದುವರಿದ ಅವರು ಭಾರತ ದೇಶದ ಹಿರಿಮೆ, ಹಿಂದೂ ಧರ್ಮದ ಗರಿಮೆಯನ್ನು ಎಲ್ಲರಿಗೂ ಮನಮಟ್ಟುವಂತೆ ವಿವರಿಸಿದರು. ಅಲ್ಲಿಯವರೆಗೆ ಹಿಂದೂ ಧರ್ಮದ ಬಗ್ಗೆ ತಾತ್ಸಾರ ತಾಳಿದವರು ಹೊಸ ದಿಕ್ಕಿನಲ್ಲಿ ಯೋಚಿಸುವಂತೆ ಮಾಡಿದ್ದು ವಿವೇಕಾನಂದರ ಹೆಗ್ಗಳಿಕೆ.

ಚಿಕ್ಕ ಜಗತ್ತು ಮೀರಬೇಕು:
ನಾನು ಹಿಂದೂ. ನಾನು ನನ್ನದೇ ಆದ ಚಿಕ್ಕ ಬಾವಿಯಲ್ಲಿ ಕುಳಿತಿದ್ದೇನೆ ಮತ್ತು ಇಡೀ ಜಗತ್ತೇ ಈ ಚಿಕ್ಕ ಬಾವಿ ಎಂದು ಭಾವಿಸಿದ್ದೇನೆ. ಕ್ರೈಸ್ತರು ತಮ್ಮದೇ ಆದ ಬಾವಿಯಲ್ಲಿ ಕುಳಿತಿದ್ದಾರೆ ಮತ್ತು ಅವರು ಅದೇ ತಮ್ಮ ಜಗತ್ತು ಎಂದು ಭಾವಿಸಿದ್ದಾರೆ. ಮುಸ್ಲಿಮರೂ ಹಾಗೆಯೇ ಅವರು ಚಿಕ್ಕ ಬಾವಿಯಲ್ಲಿ ಕುಳಿತು ಅದೇ ತಮ್ಮ ಜಗತ್ತು ಎಂದು ತಿಳಿದಿದ್ದಾರೆ. ಈ ನಮ್ಮ ಚಿಕ್ಕ ಜಗತ್ತಿನ ಎಲ್ಲ ಅಡೆತಡೆಗಳನ್ನು ನಿವಾರಿಸುವ ದೊಡ್ಡ ಪ್ರಯತ್ನ ಮಾಡುತ್ತಿರುವ ಅಮೆರಿಕದ ಪ್ರಯತ್ನಕ್ಕೆ ನಾನು ಧನ್ಯವಾದ ಅರ್ಪಿಸಬಯಸುತ್ತೇನೆ. ಮತ್ತೆ ಆಶಾವಾದಿಯಾಗಿದ್ದೇನೆ, ಭವಿಷ್ಯದಲ್ಲಿ ನಿಮ್ಮೆಲ್ಲ ಉದ್ದೇಶಗಳನ್ನು ಪೂರ್ಣಗೊಳಿಸಲು ದೇವರು ನೆರವಾಗುತ್ತಾನೆಂದು.

ಹಿಂದೂ ಧರ್ಮದ ಉಗಮ:
ಹಿಂದೂಗಳು ತಮ್ಮ ಧರ್ಮವನ್ನು ದಿವ್ಯಜ್ಞಾನದಿಂದ ಪಡೆದಿದ್ದಾರೆ; ಅದುವೇ ವೇದಗಳು. ಈ ವೇದಗಳಿಗೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ಹೀಗೆ ಹೇಳಿದರೆ ಇಲ್ಲಿನ ಕೇಳುಗರಿಗೆ ತುಸು ಹಾಸ್ಯಾಸ್ಪದ ಅನ್ನಿಸಬಹುದು. ಪುಸ್ತಕವೊಂದು ಆದಿ ಮತ್ತು ಅಂತ್ಯ ಇಲ್ಲದೆ ಇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಬಹುದು. ಆದರೆ, ವೇದಗಳೆಂದರೆ ಕೇವಲ ಕೃತಿಗೆ ಮಾತ್ರ ಸೀಮಿತವಾದವುಗಳಲ್ಲ. ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆ ಬೇರೆ ವ್ಯಕ್ತಿಗಳಿಂದ ಸಂಶೋಧಿತವಾದ ಅಧ್ಯಾತ್ಮಿಕ ನಿಬಂಧನೆಗಳ ಭಂಡಾರ ಅವು. ಸಂಶೋಧನೆಗೂ ಮುಂಚೆ ಗುರುತ್ವಾಕರ್ಷಣೆ ಬಲವಿತ್ತಲ್ಲ ಹಾಗೆ ಇದು ಮತ್ತು ಎಲ್ಲ ಮಾನವಕುಲ ಮರೆತು ಹೋದ ಮೇಲೂ ಅವು ಅಸ್ತಿತ್ವದಲ್ಲಿರುತ್ತವೆ. ಆತ್ಮ ಆತ್ಮಗಳ ನಡುವೆ ಮತ್ತು ವ್ಯಕ್ತಿ ವ್ಯಕ್ತಿಗಳ ನಡುವೆ ಅಧ್ಯಾತ್ಮಿಕ ಸಂಬಂಧ ನಿರ್ಧರಿಸುವ ನಿಬಂಧನೆ ಅದರಲ್ಲೇ ಇದೆ. ಎಲ್ಲ ಆತ್ಮಗಳ ತಂದೆ ಸಂಶೋಧನೆಗೆ ಮುನ್ನ ಇತ್ತು ಮತ್ತು ಒಂದು ವೇಳೆ ಇದನ್ನು ಮರೆತ ಮೇಲೂ ಅದು ಇರಲಿದೆ. ಈ ಸಂಶೋಧನೆ ಮಾಡಿದವರನ್ನು ಋುಷಿಗಳೆಂದು ಕರೆಯಲಾಗುತ್ತದೆ. ನಾವು ಅವರನ್ನು ಪರಿಪೂರ್ಣ ಮನುಷ್ಯರೆಂದು ಗೌರವಿಸುತ್ತೇವೆ. ಇಲ್ಲಿರುವ ಪ್ರೇಕ್ಷ ಕರಿಗೆ ಇದನ್ನು ತಿಳಿಸಲು ಸಂತೋಷವಾಗುತ್ತಿದೆ. ಯಾಕೆಂದರೆ, ಈ ಋುಷಿಗಳ ಪೈಕಿ ಕೆಲವರು ಮಹಿಳೆಯರೂ ಇದ್ದರು.

ಬೌದ್ಧ ಧರ್ಮದ ಬಗ್ಗೆ:
ಬುದ್ದಿಸಮ್‌ ಇಲ್ಲದೆ ಹಿಂದೂಯಿಸಂ ಬದುಕಿರಲಾರದು, ಹಾಗೆಯೇ ಹಿಂದೂಯಿಸಂ ಇಲ್ಲದೆ ಬುದ್ದಿಸಂ ಇಲ್ಲ. ಹಾಗಾದರೆ, ಈ ಪ್ರತ್ಯೇಕತೆ ನಮಗೆ ಏನನ್ನು ಸೂಚಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಹಿಂದೂ ಧರ್ಮದ ತತ್ವಜ್ಞಾನ ಮತ್ತು ಬುದ್ಧಿ ಇಲ್ಲದೆ ಬೌದ್ಧ ಧರ್ಮೀಯ ಉಳಿಯಲಾರ. ಹಾಗೆಯೇ, ಬೌದ್ಧರ ಹೃದಯವಂತಿಕೆ ಇಲ್ಲದೆ ಹಿಂದೂ ಧರ್ಮೀಯ ಇರಲಾರ. ಹಿಂದೂ ಮತ್ತು ಬೌದ್ಧರ ನಡುವಿನ ಈ ಪ್ರತ್ಯೇಕತೆಯೇ ಭಾರತದ ಅಧಃಪತನಕ್ಕೆ ಕಾರಣವಾಗಿರುವುದು. ಆದ್ದರಿಂದಲೇ ಭಾರತ ಇಂದು ಮೂರು ಕೋಟಿ ಭಿಕ್ಷುಕರಿಂದ ತುಂಬಿದೆ ಮತ್ತು ಸಾವಿರಾರು ವರ್ಷಗಳಿಂದ ದಾಳಿಕೋರರ ಗುಲಾಮಿತನಕೊಳ್ಳಪಟ್ಟಿದೆ. ಅದ್ಭುತ ಬೌದ್ಧಿಕ ಹಿಂದೂಗಳನ್ನು ಮಹೋನ್ನತ ಆತ್ಮ, ಅದ್ಭುತ ಮಾನವೀಯ ಶಕ್ತಿಯಾಗಿರುವ ಬುದ್ಧನೊಂದಿಗೆ ಜೋಡಿಸೋಣ ಬನ್ನಿ.

ಯುವ ದಿನದ ಹಿನ್ನೆಲೆ:
ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜ.12ನ್ನು ‘ರಾಷ್ಟ್ರೀಯ ಯುವ ದಿನ’ವಾಗಿ ಆಚರಿಸಲಾಗುತ್ತದೆ. 1984ರಲ್ಲಿ ಭಾರತ ಸರಕಾರ ಈ ದಿನವನ್ನು ಯುವ ದಿನವಾಗಿ ಆಚರಿಸುವಂತೆ ಘೋಷಣೆ ಹೊರಡಿಸಿತು. ”ಸ್ವಾಮಿ ವಿವೇಕಾನಂದರ ತತ್ತ್ವಜ್ಞಾನ ಮತ್ತು ಅವರು ಬದುಕಿ ಬೋಧಿಸಿದ ಆದರ್ಶಗಳು ಭಾರತದ ಯುವಜನತೆಯ ದೊಡ್ಡ ಸಂಪನ್ಮೂಲ ಹಾಗೂ ಸ್ಫೂರ್ತಿಮೂಲವಾಗಿವೆ,” ಎಂದು ಸರಕಾರ ಈ ಘೋಷಣೆಯಲ್ಲಿ ಗುರುತಿಸಿತು. 1985ರಿಂದೀಚೆಗೆ ಪ್ರತಿವರ್ಷ ಯುವದಿನವನ್ನು ಆಚರಿಸಲಾಗುತ್ತಿದೆ. 2013ರ ಜನವರಿಯಲ್ಲಿ ಆಗಿನ ಪ್ರಧಾನಿ ಮನಮೋಹನ ಸಿಂಗ್‌ ಅವರು ವಿವೇಕಾನಂದರ 150ನೇ ಜನ್ಮವರ್ಷದ ಚತುರ್ವಾರ್ಷಿಕ ಸಂಭ್ರಮಾಚರಣೆಗಳಿಗೆ ನಾಂದಿ ಹಾಡಿದರು. ”ಯುವಜನತೆಯ ನಿತ್ಯನಿರಂತರ ಚೈತನ್ಯ ಹಾಗೂ ಸತ್ಯಕ್ಕಾಗಿ ಅವಿರತ ಪ್ರಯತ್ನದ ಪ್ರತಿರೂಪಕದಂತೆ ಸ್ವಾಮಿ ವಿವೇಕಾನಂದರಿದ್ದರು,” ಎಂಬ ಮಹಾತ್ಮ ಗಾಂಧೀಜಿ ಅವರ ಮಾತುಗಳನ್ನು ನೆನೆದುಕೊಂಡರು. ಸ್ವಾಮೀಜಿ ತಮ್ಮ ಮಾತುಗಳಲ್ಲಿ ಪದೇ ಪದೇ ಯುವಚೈತನ್ಯದ ಬಗ್ಗೆ ಪ್ರಸ್ತಾವಿಸುತ್ತಿದ್ದುದನ್ನು ಇಲ್ಲಿ ನೆನೆಯಬಹುದು.

ಯುವ ದಿನದ ಆಚರಣೆ
ಮೊದಲು ವಿವೇಕಾನಂದ ಜಯಂತಿ ಎಂದು ಆಚರಿಸಲಾಗುತ್ತಿದ್ದ ದಿನ ಈಗ ಯುವದಿನವಾಗಿದ್ದರೂ ಆಚರಣೆಯಲ್ಲಿ ಹೆಚ್ಚೇನೂ ವ್ಯತ್ಯಾಸವಾಗಿಲ್ಲ. ಶಾಲೆ ಹಾಗೂ ಕಾಲೇಜುಗಳಲ್ಲಿ ಸಂವಾದಗಳು, ವಿವೇಕಾನಂದರ ಬೋಧನೆಗಳ ಬಗ್ಗೆ ಉಪನ್ಯಾಸ, ಪ್ರವಚನ, ಸೆಮಿನಾರ್‌, ಯೋಗಾಸನಗಳು, ಸ್ಪರ್ಧೆಗಳು, ಸಂಗೀತ, ಯುವಜನೋತ್ಸವಗಳು ನಡೆಯುತ್ತವೆ. ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ದೊರೆಯುತ್ತದೆ. ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಹಾಗೂ ಸಂದೇಶಗಳ ಕೃತಿಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಸ್ವಾಮಿ ಹಾಗೂ ಅವರ ಗುರುಗಳಾದ ರಾಮಕೃಷ್ಣ ಪರಮಹಂಸರ ಜೀವನ- ಸಂದೇಶಗಳಿಂದ ಪ್ರಭಾವಿತರಾದ ಅನೇಕ ಮಂದಿ ತಮ್ಮದೇ ಬಳಗ ಕಟ್ಟಿಕೊಂಡು ವಿವೇಕಾನಂದರ ಚೈತನ್ಯವನ್ನು ಪಸರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಕೋಲ್ಕತ್ತಾ ಮೂಲದ ಶ್ರೀ ರಾಮಕೃಷ್ಣ ಮಠ, ಹಾಗೂ ರಾಮಕೃಷ್ಣ ಮಿಶನ್‌, ಪರಮಹಂಸ ಹಾಗೂ ವಿವೇಕರ ಬೋಧನೆಗಳನ್ನು ಲಾಭಾಪೇಕ್ಷೆಯಿಲ್ಲದೆ ಪ್ರಚಾರ ಮಾಡುವ ನಿಷ್ಠಾವಂತ ಕೈಂಕರ‍್ಯದಲ್ಲಿ ತೊಡಗಿದೆ. ಕನ್ನಡದ ಕವಿ ಕುವೆಂಪು ಈ ಆಶ್ರಮದ ಶಿಷ್ಯರಾಗಿದ್ದು, ಪರಮಹಂಸ ಹಾಗೂ ವಿವೇಕರ ಬಗ್ಗೆ ಕೃತಿಗಳನ್ನು ರಚಿಸಿದ್ದರು.

ಸ್ವಾಮಿ ವಿವೇಕಾನಂದರ ಬಗ್ಗೆ ಮಹನೀಯರ ಮಾತು……

ಸ್ವಾಮಿ ವಿವೇಕಾನಂದರ ಕೃತಿಗಳನ್ನು ಓದಿದ ಬಳಿಕ ನನಗೆ ನನ್ನ ದೇಶದ ಬಗೆಗೆ ಇರುವ ಪ್ರೀತಿ ಸಾವಿರ ಪಟ್ಟು ಹೆಚ್ಚಾಯಿತು. ನಾನು ಯುವಜನತೆಯಲ್ಲಿ ಒಂದನ್ನು ಕೋರಿಕೊಳ್ಳುತ್ತೇನೆ- ಸ್ವಾಮಿ ವಿವೇಕಾನಂದರು ಬದುಕಿ- ಬಾಳಿದ ಈ ನೆಲದಲ್ಲಿ ನಿಮ್ಮ ಚೈತನ್ಯವನ್ನು ಉಪಯೋಗಿಸದೆ ವಿಫಲಜೀವರಾಗಿ ಹೋಗದಿರಿ.
– ಮಹಾತ್ಮ ಗಾಂಧಿ

ತಮ್ಮ ಕಾಲದ ವಿದ್ಯಾರ್ಥಿಗಳ ಮೇಲೆ ಸ್ವಾಮಿ ವಿವೇಕಾನಂದರು ತಮ್ಮ ಭಾಷಣ, ಬರಹಗಳ ಮೂಲಕ ಮಾಡಿದ ಪ್ರಭಾವವು, ಇತರ ಯಾವುದೇ ನಾಯಕರ ಪ್ರಭಾವಕ್ಕಿಂತ ಮಿಗಿಲಾದುದಾಗಿತ್ತು. ಸ್ವಾಮಿ ಅವರೆಲ್ಲರ ಆಶೆ ಆಶೋತ್ತರಗಳನ್ನು ಪ್ರತಿನಿಧಿಸಿದ್ದರು.
– ಸುಭಾಶ್ಚಂದ್ರ ಬೋಸ್‌

ಸ್ವಾಮಿ ವಿವೇಕಾನಂದರು ಮನುಷ್ಯರ ನಡುವೆ ಸಿಂಹದಂತಿದ್ದ ವ್ಯಕ್ತಿತ್ವ. ಅವರ ಆತ್ಮವಿನ್ನೂ ಅವರ ತಾಯಿಯ ಹಾಗೂ ಆಕೆಯ ಮಕ್ಕಳಲ್ಲಿ ನೆಲೆಸಿದೆ.
– ಮಹರ್ಷಿ ಅರವಿಂದರು

ಭಾರತದ ಒಂದು ತಲೆಮಾರಿನ ವ್ಯಕ್ತಿತ್ವ ಶಿಥಿಲವಾಗಿದ್ದ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರು ಹುಟ್ಟಿ, ನಮ್ಮ ನಾಡಿನ ನಾಡಿಗಳಲ್ಲಿ ಚೈತನ್ಯವನ್ನು ತುಂಬಿದರು. ಅವರ ಧ್ಯೇಯಗಳು ಎಂದಿಗೂ ಹಳತಾಗವು; ಅವು ಎಲ್ಲ ಕಾಲದ ಯುವಪೀಳಿಗೆಗೂ ಮಾರ್ಗದರ್ಶಕ.
– ಜವಾಹರಲಾಲ್‌ ನೆಹರೂ

 

Leave a Reply

Your email address will not be published. Required fields are marked *

11 − 4 =