ನವರಾತ್ರಿ ಪ್ರಯುಕ್ತ ಜಿಲ್ಲೆಯಲ್ಲಿ ಕೊವಿಡ್ ಲಸಿಕಾ ಅಭಿಯಾನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ನವರಾತ್ರಿ ಪ್ರಯುಕ್ತ ಭಾರತ ಸರಕಾರ ಮತ್ತು ಕರ್ನಾಟಕ ಸರಕಾರದ ಸೂಚನೆಯಂತೆ ದಿನಾಂಕ 10-10-2021 ರಿಂದ 14-10-2021 ವರೆಗೆ ಉಡುಪಿ ಜಿಲ್ಲೆಯಲ್ಲಿ ಕೊರೋನ ಕಾಯಿಲೆ ಸಂಪೂರ್ಣ ನಿಯಂತ್ರಣ ಮಾಡಲು ಕೋವಿಡ್ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕಾ ವ್ಯವಸ್ಥೆ ಮಾಡಲಾಗಿದೆ.

Click here

Click Here

Call us

Call us

Visit Now

Call us

Call us

ಲಸಿಕಾ ಅಭಿಯಾನದಲ್ಲಿ 18ವರ್ಷ ಮೇಲ್ಪಟ್ಟವರಲ್ಲಿ ಕೊವಿಡ್ ಲಸಿಕೆ ಪಡೆಯದವರಿಗೆ ಪ್ರಥಮ ಡೋಸ್ ಲಸಿಕೆ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಕೊವಿಶೀಲ್ ಪ್ರಥಮ ಡೋಸ್ ಪಡೆದು 84 ದಿವಸ ದಾಟಿದವರು ಕೋವಿಡ್ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಕೊವ್ಯಾಕ್ಸಿನ್ ಪ್ರಥಮ ಡೋಸ್ ಪಡೆದು 28 ದಿವಸ ದಾಟಿದವರು ಕೆವಿಡ್ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಲು ವ್ಯವಸ್ಥೆ ಮಾಡಲಾಗಿದೆ.

ಒಂದು ವೇಳೆ ಕೊವಿಡ್ ಲಸಿಕೆ ಪಡೆದ ದಿನಾಂಕ ನೆನಪಿಲ್ಲದಿದ್ದರೆ, ಪ್ರಥಮ ಡೋಸ್ ಪಡೆದ ಕೋವಿಡ್ ಲಸಿಕಾ ಕೇಂದ್ರಕ್ಕೆ/ಅಥವಾ ಅದಕ್ಕೆ ಸಂಬಂಧಪಟ್ಟ ಆಸ್ಪತ್ರೆಗೆ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ನೋಂದಿಗೆ ಬಂದು ಪರೀಶೀಲಿಸಿ 2 ಡೋಸ್ ಪಡೆಯಲು ನಿಗಧಿತ ದಿನಾಂಕ ದಾಟಿದಲ್ಲಿ ಲಸಿಕೆ ಪಡೆಯಬಹುದಾಗಿದೆ.

2ನೇ ಡೋಸ್ ಪಡೆಯಲು ನಿಗದಿತ ದಿನಾಂಕದಿಂದ ತುಂಬಾ ತಡವಾದಲ್ಲಿ ಕೊವಿಡ್ ನಿಂದ ಆಗುವ ತೊಂದರೆ ಹೆಚ್ಚಿರುವುದರಿಂದ ಕೂಡಲೇ ಲಸಿಕೆ ಪಡೆಯುವುದು. ಕೊವಿಡ್ 3 ನೇ ಅಲೆ ತಡೆಗಟ್ಟಲು ಹಾಗೂ ಲಸಿಕೆ ಪಡೆದು ಮಹಾಮಾರಿಯನ್ನು ಹೊಡೆದೋಡಿಸಲು ಸಹಕಾರ ನೀಡಿ, ಹೆಚ್ಚಿನ ಮಾಹಿತಿಗಾಗಿ ಆಶಾ ಕಾರ್ಯಕರ್ತೆಯರನ್ನು ಗ್ರಾಮ ಪಂಚಾಯತ್, ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

thirteen − ten =