ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದಲಿತ ಯುವಕ ನಾಗರಾಜ್ ಮೇಲ್ಪಂಕ್ತಿ ಶಿರೂರು ಇವರ ಮೇಲೆ ನಡೆದ ಮಾರಣಾಂತಿಕವಾಗಿ ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮತ್ತು ಶಿರೂರು ಮೇಲ್ಪಂಕ್ತಿ ಹಾಗೂ ಮೈದಿನ್ ಪುರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ದಲಿತರ ಮತ್ತು ಅಮಾಯಕರ ಮೇಲಿನ ದೌರ್ಜನ್ಯವನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳುವಂತೆ ಬೈಂದೂರು ಠಾಣಾಧಿಕಾರಿಗಳಿಗೆ ತಾಲೂಕು ದಲಿತ ಸಂಘರ್ಷ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ಯ ತಾಲ್ಲೂಕು ಸಂಚಾಲಕರಾದ ರಾಮ ಎಂ ಮಯ್ಯಾಡಿ, ಶಿರೂರು ಗ್ರಾಮ ಶಾಖೆಯ ಸಂಚಾಲಕರಾದ ರಮೇಶ್ ಶಿರೂರು, ಕೆರ್ಗಾಲು ಗ್ರಾಮ ಶಾಖೆಯ ಸಂಚಾಲಕರಾದ ದುರ್ಗಾ ನಂದನವನ, ಬೈಂದೂರು ತಾಲೂಕು ಸಂಘಟನಾ ಸಂಚಾಲಕರಾದ ರಾಘವೇಂದ್ರ ಎನ್ .ಜಿ, ರಾಘವೇಂದ್ರ ಶಿರೂರು ರಾಜೇಶ್ ಕುಮಾರ್ ಕೆರ್ಗಾಲ್ ಉಪಸ್ಥಿತರಿದ್ದರು